Latest

ಮೂವರು ಮಕ್ಕಳು ಸೇರಿ ನೀರು ತುಂಬಿದ್ದ ಕ್ವಾರಿಗೆ ಬಿದ್ದ ಐವರು

ಪ್ರಗತಿವಾಹಿನಿ ಸುದ್ದಿ; ಮುಂಬೈ: ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ನೀರು ತುಂಬಿದ್ದ ಕ್ವಾರಿಯಲ್ಲ್ಲಿ ಬಿದ್ದು ಮುಳುಗಿರುವ ಘಟನೆ ಮಹಾರಾಷ್ಟ್ರದ ದೊಂಬಿವಳಿ ಗ್ರಾಮದಲ್ಲಿ ನಡೆದಿದೆ.

ಬಟ್ಟೆ ತೊಳೆಯಲೆಂದು ನೀರಿನ ಕ್ವಾರಿಗೆ ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಕ್ವಾರಿಯಲ್ಲಿ ಕಾಲು ಜಾರಿ ಬಾಲಕಿಯೊಬ್ಬಳು ನೀರಿಗೆ ಬಿದ್ದಿದ್ದಾಳೆ. ಆಕೆಯನ್ನು ರಕ್ಷಣೆ ಮಾಡಲೆಂದು ಮಹಿಳೆಯೊಬ್ಬರು ನೀರಿಗೆ ಧುಮುಕಿದ್ದಾರೆ. ಹೀಗೆ ಒಬ್ಬರನ್ನೊಬ್ಬರು ರಕ್ಷಿಸಲೆಂದು ಕುಟುಂಬದ ಇತರ ನಾಲ್ವರು ಕ್ವಾರಿಗೆ ಜಿಗಿದಿದ್ದಾರೆ. ಕ್ವಾರಿಯಲ್ಲಿ ನೀರು ತುಂಬಿದ್ದರಿಂದ ನೀರಿನಲ್ಲಿ ಐವರು ಮುಳುಗಿದ್ದಾರೆ ಎನ್ನಲಾಗಿದೆ.

Home add -Advt

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 55 ವರ್ಷದ ಮೀರಾ ಗಾಯಕ್ವಾಡ್, 30 ವರ್ಷದ ಅಪೇಕ್ಷಾ, 15 ವರ್ಷದ ಮಯೂರೇಶ್, 13 ವರ್ಷದ ಮೋಕ್ಷಾ ಹಾಗೂ ನಿಲೇಶ್ ನೀರಿಗೆ ಬಿದ್ದವರು ಎಂದು ತಿಳಿದುಬಂದಿದೆ.
ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ

Related Articles

Back to top button