Kannada NewsLatestNationalPolitics

*ಪಂಚರಾಜ್ಯಗಳ ಚುನಾವಣೆ; ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಅಧಿಕಾರ? ಇಲ್ಲಿದೆ ಎಕ್ಸಿಟ್ ಪೋಲ್ ರಿಸಲ್ಟ್*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಚುನಾವಣೋತ್ತರ ಮತಗಟ್ಟೆಗಳ ಸಮೀಕ್ಷೆ ಹೊರಬಿದ್ದಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಢ, ಮಿಜೋರಾಮ್ ಹಾಗೂ ತೆಲಂಗಾಣ ಈ ಐದು ರಾಜ್ಯಗಳ ಮತದಾನ ಮುಗಿದಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ರಚನೆಯಾಗಲಿದೆ ಎಂಬ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಈ ನಡುವೆ ವಿವಿಧ ಸುದ್ದಿ ಸಂಸ್ಥೆಗಳು ಹಾಗೂ ಏಜೆನ್ಸಿಗಳು ನಡೆಸಿರುವ ಚುನಾವಣೋತ್ತರ ಮತಗಟ್ಟೆಗಳ ಸಮೀಕ್ಷೆ ಇಂದು ಹೊರ ಬಿದ್ದಿದ್ದು ಅವು ಈ ಕೆಳಗಿನಂತಿವೆ.

ಮಧ್ಯಪ್ರದೇಶ:
ಮಧ್ಯಪ್ರದೇಶದಲ್ಲಿ ಎಕ್ಸಿಟ್ ಪೋಲ್ ಮೊದಲ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಗೆ ಬಹುಮತ. ಒಟ್ಟು 230 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 111-121 ಸ್ಥಾನಗಳನ್ನು ಪಡೆಯಬಹುದು.
ಬಿಜೆಪಿ-106-116 ಸ್ಥಾನ ಪಡೆಯಬಹುದು ಎಂದು ಪೋಲ್ ಸ್ಟ್ರಾಟ್ ಎಕ್ಸಿಟ್ ಪೋಲ್ ಸಮೀಕ್ಷೆ ತಿಳಿಸಿದೆ.

ಛತ್ತೀಸ್ ಗಢ:

ಇಂಡಿಯಾ ಟುಡೇ-ಆಕ್ಸಿಸ್ ಇಂಡಿಯಾ ಮತದಾನೋತ್ತರ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಾಧ್ಯತೆ.
ಕಾಂಗ್ರೆಸ್ 40-50 ಸ್ಥಾನ
ಬಿಜೆಪಿ 36-46 ಸ್ಥಾನ
ಇತರೆ 1-5 ಸ್ಥಾನಗಳಿಸುವ ಸಾಧ್ಯತೆ

ಸಿಎನ್ ಎನ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ಗೆ ಬಹುಮತ
ಕಾಂಗ್ರೆಸ್ 48
ಬಿಜೆಪಿ 39
ಇತರೆ 3 ಸ್ಥಾನ

ತೆಲಂಗಾಣ:
ತೆಲಂಗಾಣದಲ್ಲಿ ಜನ್ ಕೀ ಬಾತ್ ಸಮೀಕ್ಷೆ ಅಂದಾಜಿನ ಪ್ರಕಾರ ಕಾಂಗ್ರೆಸ್ ಗೆ ಬಹುಮತ.
ಕಾಂಗ್ರೆಸ್ 56 ಸ್ಥಾನಗಳು
ಬಿಆರ್ ಎಸ್ 48 ಸ್ಥಾನಗಳು
ಎಂಐಎಂ 5
ಬಿಜೆಪಿ 10
ಇತರೆ-0
ಎ ಎನ್ ಎಸ್ ಸರ್ವೆ ಪ್ರಕಾರ ಕಾಂಗ್ರೆಸ್ ಗೆ ಗೆಲುವು
ಕಾಂಗ್ರೆಸ್ 62-66
ಬಿ ಆರ್ ಎಸ್ 43-47
ಎಂಐಎಂ 5-7
ಬಿಜೆಪಿ 2-5 ಸ್ಥಾನ

ರಾಜಸ್ಥಾನ:
ರಾಜಸ್ಥಾನದಲ್ಲಿ ಜನ್ ಕೀ ಬಾತ್ ಸಮೀಕ್ಷೆ ಪ್ರಕಾರ ಬಿಜೆಪಿಗೆ ಬಹುಮತ
ಬಿಜೆಪಿ 100-122 ಸ್ಥಾನಗಳು
ಕಾಂಗ್ರೆಸ್ 62-85 ಸ್ಥಾನಗಳು
ಇತರೆ 14-15 ಸ್ಥಾನಗಳನ್ನು ಪಡೆಯುವ ಸಾಧ್ಯತೆ

ಮಿಜೋರಾಂ:
ಮಿಜೋರಾಂ ನಲ್ಲಿ ಸಿ ವೋಟರ್ ಸಮೀಕ್ಷೆ ಪ್ರಕಾರ ಎಂ ಎನ್ ಎಫ್ ಗೆ ಬಹುಮತ
ಎಂ ಎನ್ ಎಫ್ 14-18 ಸ್ಥಾನ
ಝಡ್ ಪಿಎಂ 10-14 ಸ್ಥಾನ
ಇತರೆ 9-15 ಸ್ಥಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button