Latest

ಚಾಕಲೇಟ್ ಎಂದು ಲೈಂಗಿಕ ಶಕ್ತಿ ಹೆಚ್ಚಿಸುವ ಮಾತ್ರೆ ನುಂಗಿದ ಮಗು ; ವೈದ್ಯರೇ ಚಕಿತಗೊಂಡ ಘಟನೆ

ಪ್ರಗತಿವಾಹಿನಿ ಸುದ್ದಿ; ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ  ಆಟವಾಡುತ್ತಿದ್ದಾಗ ಮಗು ಚಾಕಲೇಟ್ ಎಂದು‌ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ನಾಲ್ಕು ಮಾತ್ರೆಗಳನ್ನು ಸೇವಿಸಿದೆ.  ಸ್ವಲ್ಪ ಸಮಯದ ನಂತರ ಮಗುವಿನ ಆರೋಗ್ಯ ಸ್ಥಿತಿ ಹದಗೆಡಲು ಪ್ರಾರಂಭಿಸಿದ್ದು, ಮಗು ತಲೆತಿರುಗುತ್ತಿದೆ ಎಂದು ಹೇಳಿ ನರಳಾಡಿದೆ.

ಮಗು ಒಂದೇ ಬಾರಿಗೆ ನಾಲ್ಕು ಮಾತ್ರೆಗಳನ್ನು ತಿಂದಿದ್ದು, ಬಳಿಕ ಆತನ ಖಾಸಗಿ ಭಾಗ ಬಿಗಿಯಾಗಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ದೇಹದಿಂದ ಬೆವರು ಸುರಿಯುತ್ತಿದೆ ಮತ್ತು ಮಗು ಅಳುತ್ತಿದೆ.

ಪೋಷಕರು ಗಾಬರಿಗೊಂಡು ಆಸ್ಪತ್ರೆಗೆ ಕರೆದೊಯ್ದು ಪೋಷಕರು ಹೇಳಿದಾಗ ವೈದ್ಯರಿಗೂ ಆಶ್ಚರ್ಯವಾಯಿತು. ನಂತರ ಉಪ್ಪಿನ ದ್ರಾವಣ ಕುಡಿಸಿ ಮಗುವಿಗೆ ವಾಂತಿ ಬರುವಂತೆ ಮಾಡಲಾಗಿದೆ.

ವೈದ್ಯರು ಮಗುವಿಗೆ  ಚಿಕಿತ್ಸೆ ನೀಡಿದ್ದು, ಸದ್ಯ ಮಗು ಆರೋಗ್ಯವಾಗಿದೆ ಎನ್ನಲಾಗಿದೆ. ಖಗಾರಿಯಾ ಸದರ್ ಆಸ್ಪತ್ರೆಗೆ ಬಂದ ಮೊದಲ ಪ್ರಕರಣ ಇದಾಗಿದ್ದು ವೈದ್ಯರೂ  ಆಶ್ಚರ್ಯಚಕಿತರಾಗಿದ್ದರು.

ಈ ಪ್ರಕರಣದ ನಂತರ ಲೈಂಗಿಕತೆಯನ್ನು ಹೆಚ್ಚಿಸುವ ಔಷಧಿಗಳು ವಯಸ್ಕರಿಗೆ ಎಂದು ವೈದ್ಯರು ಹೇಳುತ್ತಾರೆ. ಮಕ್ಕಳು ಇದನ್ನು ಸೇವಿಸಿದರೆ, ಅವರು ಸಾಯಬಹುದು. ಯಾರಾದರೂ ಅಂತಹ ಮಾತ್ರೆ ಬಳಸುತ್ತಿದ್ದ ಅದನ್ನು ಮಗುವಿಗೆ ಸಿಗದಂತೆ ಇಡಬೇಕು ಎಂದು ವೈದ್ಯರು ಜನರಿಗೆ ಸಲಹೆ ನೀಡುತ್ತಾರೆ.

ಮೂರಂತಸ್ತಿನ ಕಟ್ಟಡಲ್ಲಿ ಬಾಂಬ್ ಸ್ಫೋಟ; 10 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button