*ಶಾಸಕರಿಗೆ 50 ಕೋಟಿ ಆಫರ್ ಬಿಜೆಪಿಗೆ ಸಂಬಂಧವಿಲ್ಲ: ಸಂಸದ ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಖ್ಯಂಮತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್, ಆಪರೇಷನ್ ಕಮಲ ಬಿಜೆಪಿ ಮಾಡುತ್ತಿದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಿಗೆ 50 ಕೋಟಿ ಆಫರ್ ವಿಚಾರ ಬಿಜೆಪಿಯವರಿಗೆ ಸಂಬಂಧವಿಲ್ಲ. ಉಪ ಚುನಾವಣೆ ಮುಗಿದ ತಕ್ಷಣ ಮುಖ್ಯಂಮತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವದಾಗಬಹು ಎಂದು ಮನಗಂಡು ನನ್ನ ಮುಟ್ಟಿದರೆ ಜನ ಸುಮ್ನೆ ಇರುವುದಿಲ್ಲ ಎಂದು ಅವರ ಪಕ್ಷದ ನಾಯಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕರಿಗೆ 50 ಕೋಟಿ ಆಫರ್ ವಿಚಾರ ಬಿಜೆಪಿಯವರಿಗೆ ಸಂಬಂಧವಿಲ್ಲ. ಚುನಾಯಿತ ಸರ್ಕಾರವನ್ನು ಕೆಡವುತ್ತೇವೆ ಎಂದು ನಾವು ಹೇಳಲು ಬರುವುದಿಲ್ಲ. 136 ಜನ ಶಾಸಕರಿರುವಾಗ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ. ಅವರ ಪಕ್ಷದ ಮುಖಂಡರು ಅವರನ್ನು ಸಿಎಂ ಕುರ್ಚಿಯಿಂದ ಕೆಳಗಡೆ ಇಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಎಸ್ ಡಿ ಎ ರುದ್ರಣ್ಣ ಆತ್ಮಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಕ್ಕಿರುವ ವಿಚಾರವಾಗಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸರಿಯಾದ ತನಿಖೆ ಮಾಡಬೇಕು. ತನಿಖೆ ಸರಿಯಾಗಿ ನಡಿಯುತ್ತಿದೆಯೋ ಅಥವಾ ಇಲ್ಲವೋ ಎಂದು ಈ ಹಂತದಲ್ಲಿ ಹೇಳಲು ಸಾಧ್ಯ ಇಲ್ಲ ಎಂದು ಹೇಳಿದರು.
ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಪರ ವಾತಾವರಣ ಇದೆ. ಒಳ್ಳೆಯ ಅಭ್ಯರ್ಥಿಗಳು ಇರುವುದರಿಂದ ಬಿಜೆಪಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ- ಕಿತ್ತೂರು- ಧಾರವಾಡ ರೈಲು ಮಾರ್ಗದ ಕಾಮಗಾರಿಯ 90% ಪ್ರಕ್ರಿಯೆಗಳು ಮುಗಿದು ಕೂಡಲೆ ಕಾಮಗಾರಿ ಆರಂಭಿಸುವದಾಗಿ ಅವರು ತಿಳಿಸಿದ್ದಾರೆ.
ದಿ. ಸುರೇಶ ಅಂಗಡಿಯವರು ರೈಲ್ವೆ ಸಚಿವರಾಗಿದ್ದ ಸಂಧರ್ಭದಲ್ಲಿ ಲೊಂಡಾ ಮಾರ್ಗವಾಗಿ ಬರುತ್ತಿದ್ದ ರೈಲಿನಿಂದ 1.30 ಗಂಟೆ ಸಮಯ ವ್ಯರ್ಥ ಆಗುತ್ತಿತ್ತು. ಹಾಗಾಗಿ ಧಾರವಾಡ ಕಿತ್ತೂರು ಬೆಳಗಾವಿ ನೇರ ರೈಲು ಮಾರ್ಗ ಮಾಡಲು ಯೋಜನೆ ರೂಪಿಸಲಾಗಿತ್ತು. ಇದರಲ್ಲಿ ಎರಡು ಜಿಲ್ಲೆಗಳು ಬರುತ್ತೆ. ಧಾರವಾಡ ಜಿಲ್ಲೆಯಲ್ಲಿ 42 ಎಕರೆ ಜಮೀನು ಅಧಿಕೃತವಾಗಿ ಭೂ ಸ್ವಾಧೀನ ಆಗಿಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 155 ಎಕರೆ ಭೂಮಿ ಸ್ವಾಧೀನ ಮಾಡಬೇಕಾಗಿದೆ. 90% ಕಾಮಗಾರಿಯ ಪ್ರಕ್ರಿಯೆ ಮುಗಿದ ಕೂಡಲೇ ಕಾಮಗಾರಿ ಅರಂಭಿಸಲಾಗುತ್ತದೆ.
ಭೂಮಿ ಡಿಪಿಆರ್ ಮಾಡಿದಾಗ ಧಾರವಾಡ ಜಿಲ್ಲೆಯ ಕೆಐಡಿಬಿ ಅಧಿಕಾರಿಗಳು 42 ಎಕರೆ ಜಾಗದಲ್ಲಿ ಇಂಡಸ್ಟ್ರಿಯಲ್ ಮಾಡಲು ಅನುಮತಿ ನೀಡಿದ್ದಾರೆ. ಈಗ ಆ ಜಾಗೆಯಲ್ಲಿ ದೊಡ್ಡ ಇಂಡಸ್ಟ್ರಿಯಾಗಿ ಬೆಳೆದು ನಿಂತಿದೆ. ಅದರ ಬಿಲ್ಡಿಂಗ್ ನಡುವೆ ರೈಲು ಹಳ್ಳಿ ಬರುತ್ತದೆ. ಹಾಗಿ ಭೂಮಿ ಸ್ವಾಧೀನ ಪ್ರಕ್ರಿಯೆ ವಿಳಂಬ ಆಗಿದೆ. ಯಾವುದೆ ಕಾರಣಕ್ಕೂ ರೈಲು ಹಳ್ಳಿ ನಿರ್ಮಾಣ ಮಾಡಲು ಅಲೈನಮೆಂಟ್ ಬದಲಾವಣೆ ಮಾಡುವುದಿಲ್ಲ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ