50 ಸಂತರು ಕರ್ನಾಟಕದಲ್ಲಿ ಚುನಾವಣೆಗೆ – ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಶಿರಸಿ: ರಾಜಕೀಯ ಕ್ಷೇತ್ರ ಸಂಪೂರ್ಣ ಹಾಳಾಗಿದ್ದು ರಾಜ್ಯಾಂಗದ ವ್ಯವಸ್ಥೆಯೇ ದಿಕ್ಕು ತಪ್ಪಿದೆ, ರಾಜ್ಯಾಂಗದಲ್ಲಿ ಸಮಗ್ರ ಬದಲಾವಣೆ ತರಲು ಮುಂದಿನ ಕರ್ನಾಟಕ ವಿಧಾನ ಸಭಾ ಚುನಾವಣೆಗೆ ನಾನೂ ಸೇರಿದಂತೆ 50 ಸ್ವಾಮೀಜಿಗಳು ಸ್ಪರ್ಧಿಸಲಿದ್ದೇವೆ ಎಂದು ಉಜಿರೆಯ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದ್ದಾರೆ.

ಶಿರಾಲಿಯ ಹಳೇಕೋಟೆ ಹನುಮಂತ ದೇವಸ್ಥಾನದ ಶಿಲಾಮಯ ದೇಗುವ ಸಮರ್ಪಣೆ, ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು ಶಾಸಕನಾಗುವವನು ತಾನೆಷ್ಟು ಗಳಿಸುತ್ತೇನೆ ಎನ್ನುವ ಲೆಕ್ಕಾಚಾರದೊಂದಿಗೆ ಚುನಾವಣೆಗೆ ನಿಲ್ಲುತ್ತಾನೆ. ನಮಗೆ ಸರಕಾರ ಸಂಬಳ ಕೊಡುವುದೂ ಬೇಡ, ಕೇವಲ ರೇಷನ್ ಕೊಟ್ಟರೆ ಸಾಕು, ಕ್ಷೇತ್ರ ಸುತ್ತುವ ಭತ್ತೆಯನ್ನು ಕೂಡಾ ನಾವು ಕೇಳುವುದಿಲ್ಲ, ಪಿಂಚಣಿಯಂತೂ ಬೇಡವೇ ಬೇಡ ಎಂದ ಸ್ವಾಮೀಜಿಗಳು,ಪ್ರಜೆಗಳ ದುಡ್ದು ಅನಾವಶ್ಯಕ ದುಂದು ವೆಚ್ಚವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಚುನಾವನಾ ಆಖಾಡಕ್ಕೆ ಧುಮುಕಲು ನಮಗೆ ಮೋದೀಜಿ ಹಾಗೂ ಯೋಗೀಜಿ ಪ್ರೇರಣೆ ಎಂದ ಅವರು ನಾವು ಯಾವುದೇ ಪಕ್ಷದಿಂದ ನಿಲ್ಲುವುದಿಲ್ಲ, ನಮಗೆ ಭಗವದ್ಗೀತೆಯೇ ಚಿಹ್ನೆ ಎಂದೂ ಹೇಳಿದರು.

ವಿಧಾನ ಸಭೆಯ ಪ್ರವೇಶಕ್ಕೆ ಕನಿಷ್ಟ ವಿದ್ಯಾರ್ಹತೆ ನಿಗದಿಯಾಗಬೇಕು, ಮಂತ್ರಿಗಳಾಗಲು ಕೂಡಾ ವಿದ್ಯಾರ್ಹತೆಯನ್ನು ಮಾನದಂಡವನ್ನಾಗಿಸಬೇಕು, ಇಂದು ವಿದ್ಯೆಯಿಲ್ಲದ ಮಂತ್ರಿಗಳು ನಮ್ಮನ್ನಾಳುತ್ತಿದ್ದಾರೆ ಎಂದರೆ ಇದೊಂದು ವಿಡಂಬನೆಯಲ್ಲದೇ ಬೇರೇನೂ ಅಲ್ಲ. ಶಾಸಕರಿಗೆ ಪ್ರತಿ ತಿಂಗಳೂ ಒಂದು ತರಬೇತಿಯನ್ನು ಕಡ್ದಾಯಗೊಳಿಸಬೇಕು, ಅವರ ಹಕ್ಕು ಬಾಧ್ಯತೆಗಳನ್ನು, ಸಂವಿಧಾನದ ಆಶಯವನ್ನು ತಿಳಿಸಬೇಕು ಎಂದೂ ಶ್ರೀಗಳು ಹೇಳಿದರು.
ವಿಧಾನ ಸೌಧದಲ್ಲಿ ಇನ್ನಿಲ್ಲದಂತೆ ಕಚ್ಚಾಡಿಕೊಳ್ಳುವವರು ಹೊರ ಬಂದ ತಕ್ಷಣ ಟೇಬಲ್ ಹಂಚಿಕೊಂಡು ಚಹಾ ಸೇವಿಸುತ್ತಾರೆ. ಕೇವಲ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡುತ್ತಾ ಜನರ ಹಣ ದುರುಪಯೋಗವಾಗುತ್ತಿದೆ. ವಿಧಾನ ಸಭಾಧ್ಯಕ್ಷ ಕಾಗೇರಿಯವರು ಸಭೆಯನ್ನು ನಡೆಸಲು ಪಡುವ ಪಡಿಪಾಟಲು ನೋಡಿಯೇ ನಮಗೆ ಬೇಸರವೆನಿಸುತ್ತಿದೆ, ಇದು ಸರಿಯಾಗಬೇಕು, ರಾಜ್ಯಾಂಗ ಹಳಿತಪ್ಪಿದ್ದನ್ನು ಸರಿಪಡಿಸಬೇಕು ಎನ್ನುವುದೇ ನಮ್ಮ ಸ್ಪರ್ಧೆಯ ಉದ್ದೇಶ. ನಮ್ಮ ಪ್ರಚಾರಕ್ಕೆ ಜನ ಬೇಡಾ ಹಿಮಾಲಯದಿಂದ ಸಾಧು ಸಂತರು ಸಾವಿರ ಸಂಖ್ಯೆಯಲ್ಲಿ ಬರುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

16 IAS ಅಧಿಕಾರಿಗಳ ವರ್ಗಾವಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button