ಪ್ರಗತಿ ವಾಹಿನಿ ಸುದ್ದಿ, ಲೋಹಾರ್ದಗಾ – ಜಾರ್ಕಂಡ್ ನ ಲೋಹಾರ್ದಗಾ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರ ಮೇಲೆ ಇಬ್ಬರು ಪೊಲೀಸರು ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಮಹಿಳೆಯ ಗುಪ್ತಾಂಗಗಳನ್ನು ಕಾಲಲ್ಲಿ ಒದ್ದು ತೀವ್ರವಾಗಿ ಗಾಯಗೊಳಿಸಿದ್ದಾರೆ.
ಮಹಿಳೆ ಕೂಲಿ ಕಾರ್ಮಿಕಳಾಗಿದ್ದು, ಗ್ರೌಂಡ್ ಒಂದರ ಹುಲ್ಲು ಹಾಸನ್ನು ಕತ್ತರಿಸಿ ಸ್ವಚ್ಛಗೊಳಿಸುತ್ತಿದ್ದಳು. ಈ ವೇಳೆ ಬಂದ ಇಬ್ಬರು ಪೊಲೀಸರು ಮಹಿಳೆಯನ್ನು ಎಳೆದಾಡಿದ್ದಾರೆ. ಮಹಿಳೆ ವಿರೋಧಿಸಿದ್ದನ್ನು ಲೆಕ್ಕಿಸದೆ ಅವಳನ್ನು ದಾರುಣವಾಗಿ ಹಿಂಸಿಸಿ ಬಳಿಕ ಅತ್ಯಾಚಾರ ಎಸಗಿದ್ದಾರೆ.
ಪೊಲೀಸರು ಒದ್ದ ಪರಿಣಾಮ ಮಹಿಳೆಗೆ ತೀವ್ರ ರಕ್ತ ಸ್ರಾವವಾಗಿದೆ. ಸಧ್ಯ ಮಹಿಳೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತ್ರಸ್ತ ಮಹಿಳೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನೀಚ ಕೃತ್ಯ ಎಸಗಿದ ಇಬ್ಬರೂ ಪೊಲೀಸರನ್ನು ಬಂಧಿಸಲಾಗಿದೆ.
https://pragati.taskdun.com/world/74-year-old-indian-americanshootsdaughter-in-law/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ