Latest

15ರ ಬಾಲಕಿಗೆ ಕಿರುಕುಳ ನೀಡಿದ 51ರ ವ್ಯಕ್ತಿ ಜೈಲುಪಾಲು

ಪ್ರಗತಿವಾಹಿನಿ ಸುದ್ದಿ; ಮೋಹಾಲಿ: 15 ವರ್ಷದ ಬಾಲಕಿಗೆ ಕಿರುಕುಳ ನೀಡಲು ಯತ್ನಿಸಿದ 51 ವರ್ಷದ ವ್ಯಕ್ತಿಯೊಬ್ಬನಿಗೆ ಮೋಹಾಲಿ ನ್ಯಾಯಾಲಯ 4 ವರ್ಷ ಜೈಲು ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಬಾಲರಾಜ್‌ಕುಮಾರ್ ಶಿಕ್ಷೆಗೊಳಗಾದ ವ್ಯಕ್ತಿ.

ಈ ಘಟನೆ ನಡೆದಿದ್ದು 2015ರಲ್ಲಿ, ಆಗ 9ನೇ ತರಗತಿ ಓದುತ್ತಿದ್ದ ಬಾಲಕಿ ದಾರಿಯಲ್ಲಿ ನಡೆದು ಬರುತ್ತಿರುವಾಗ ಆರೋಪಿ ಅವಳ ಮಾನಹರಣಕ್ಕೆ ಯತ್ನಿಸಿದ್ದ, ಬಳಿಕ ಮಾರನೇ ದಿನವೂ ಸಹ ಬಾಲಕಿ ಶಾಲೆಗೆ ತೆರಳುತ್ತಿರುವಾಗ ಬೈಕ್‌ನಲ್ಲಿ ಬಂದ ವ್ಯಕ್ತಿ ಬಾಲಕಿಯ ಮೈ ಮುಟ್ಟಲು ಯತ್ನಿಸಿದ್ದ. ಈ ವೇಳೆ ಬಾಲರಾಜ್‌ರ ಪತ್ನಿ ಆಶಾರಾಣಿ ಕೂಡ ಜೊತೆಗಿದ್ದಳು. ನಡೆದ ಘಟನೆಯನ್ನು ಬಾಲಕಿ ತನ್ನ ತಾಯಿಗೆ ತಿಳಿಸಿದಾಗ ತಾಯಿ ಬಾಲಕಿಯೊಡನೆ ಬಂದು ಬಾಲರಾಜ್ ಮತ್ತು ಆಶಾರಾಣಿ ಮೇಲೆ ಪೊಲೀಸ್ ದೂರು ನೀಡಿದ್ದಳು.

ಪ್ರಕರಣದ ವಿಚಾರಣೆ ನಡೆದು ಆರೋಪಿ ಬಾಲರಾಜ್ ಅಪರಾಧಿ ಎಂದು ಸಾಬೀತಾಗಿದ್ದು ಶಿಕ್ಷೆ ವಿಧಿಸಲಾಗಿದೆ. ಆತನ ಪತ್ನಿ ಆಶಾರಾಣಿ ನಿರ್ದೋಶಿ ಎಂದು ಬಿಡುಗಡೆ ಮಾಡಲಾಗಿದೆ.

Related Articles

Back to top button