
GST ಅಧಿಕಾರಿಗಳ ಬಂಧನಾಧಿಕಾರ ರದ್ದು; ₹5 ಕೋಟಿಗಿಂತ ಕಡಿಮೆ ತೆರಿಗೆ ವಂಚನೆಗೆ ಕ್ರಿಮಿನಲ್ ಪ್ರಾಸಿಕ್ಯೂಷನ್ ಇಲ್ಲ
ಪ್ರಗತಿವಾಹಿನಿ ಸುದ್ದಿ: ತೆರಿಗೆದಾರರು, ಸಣ್ಣ ಉದ್ಯಮಿಗಳು, MSMEಗಳು ಹಾಗೂ ವ್ಯಾಪಾರಿಗಳಿಗೆ ಮಹತ್ವದ ಪರಿಹಾರ ನೀಡುವ ಹಲವು ನಿರ್ಧಾರಗಳನ್ನು 57ನೇ GST ಮಂಡಳಿ ಸಭೆ ಕೈಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ GST ವ್ಯವಸ್ಥೆಯನ್ನು ಹೆಚ್ಚು ಸರಳ, ಪಾರದರ್ಶಕ ಹಾಗೂ ತೆರಿಗೆದಾರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಹಲವು ಪ್ರಮುಖ ಸುಧಾರಣೆಗಳಿಗೆ ಶಿಫಾರಸು ಮಾಡಲಾಗಿದೆ.
ಸಭೆಯ ಅತ್ಯಂತ ಮಹತ್ವದ ನಿರ್ಧಾರವೆಂದರೆ GST ಅಧಿಕಾರಿಗಳಿಗೆ ಇದ್ದ ಬಂಧನದ ಅಧಿಕಾರವನ್ನು ರದ್ದುಪಡಿಸುವುದು. ಇದರಿಂದ ತೆರಿಗೆ ಸಂಬಂಧಿತ ಪ್ರಕರಣಗಳಲ್ಲಿ ಅಧಿಕಾರಿಗಳ ಬಂಧನಾಧಿಕಾರಕ್ಕೆ ಕಡಿವಾಣ ಬೀಳಲಿದೆ. ಇದೇ ವೇಳೆ GST ಅಡಿಯಲ್ಲಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಆರಂಭಿಸುವ ಮಿತಿಯನ್ನು ಈಗಿನ ₹1 ಕೋಟಿಯಿಂದ ₹5 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ನ್ಯಾಯಾಲಯಕ್ಕೆ ಶಿಕ್ಷೆ ನಿರ್ಧರಿಸುವ ಸ್ವಾತಂತ್ರ್ಯ
GST ಅಪರಾಧ ಪ್ರಕರಣಗಳಲ್ಲಿ ಕನಿಷ್ಠ ಶಿಕ್ಷೆಯ ಕಡ್ಡಾಯ ವ್ಯವಸ್ಥೆಯನ್ನು ತೆಗೆದುಹಾಕಲು ಮಂಡಳಿ ಶಿಫಾರಸು ಮಾಡಿದೆ. ಇನ್ನು ಮುಂದೆ ಪ್ರಕರಣದ ಸ್ವರೂಪವನ್ನು ಪರಿಗಣಿಸಿ ದಂಡ, ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸುವ ಬಗ್ಗೆ ನ್ಯಾಯಾಲಯ ನಿರ್ಧರಿಸಬಹುದಾಗಿದೆ.
ಸಾಮಾನ್ಯ ದಂಡ ₹10,000ಕ್ಕೆ ಇಳಿಕೆ
ತೆರಿಗೆ ನಿಯಮ ಉಲ್ಲಂಘನೆಗೆ ವಿಧಿಸಲಾಗುತ್ತಿದ್ದ ಸಾಮಾನ್ಯ ದಂಡವನ್ನು ₹25,000ರಿಂದ ₹10,000ಕ್ಕೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಸಣ್ಣ ಪ್ರಮಾಣದ ಅನುಸರಣೆ ದೋಷಗಳಿಗೆ ಎದುರಾಗುತ್ತಿದ್ದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನೆರವಾಗಲಿದೆ.
₹10,000ಕ್ಕಿಂತ ಕಡಿಮೆ ಮೊತ್ತಕ್ಕೆ GST ನೋಟಿಸ್ ಇಲ್ಲ
GST ಬೇಡಿಕೆಗಳಿಗೆ ಸಂಬಂಧಿಸಿದಂತೆ ₹10,000 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಹೊಸ show-cause notice ನೀಡದಿರಲು ನಿರ್ಧರಿಸಲಾಗಿದೆ. ಈಗಾಗಲೇ ಇಂತಹ ಮಿತಿಗಿಂತ ಕಡಿಮೆ ಮೊತ್ತಕ್ಕೆ ನೀಡಿರುವ ಬಾಕಿ ನೋಟಿಸ್ಗಳನ್ನು ಹಿಂಪಡೆಯುವ ವ್ಯವಸ್ಥೆಯನ್ನೂ ಘೋಷಿಸಲಾಗಿದೆ.
ತೆರಿಗೆದಾರರಿಗೆ ಮತ್ತಷ್ಟು ರಕ್ಷಣೆ
ತಡವಾಗಿ ರಿಟರ್ನ್ ಸಲ್ಲಿಸುವುದು, bona fide ತಪ್ಪುಗಳು ಅಥವಾ ತೆರಿಗೆ ಪಾವತಿಯಲ್ಲಿ ವಿಳಂಬವಾಗುವಂತಹ ಪ್ರಕರಣಗಳಲ್ಲಿ ತೆರಿಗೆ ಮತ್ತು ಬಡ್ಡಿಯ ವಸೂಲಿಯೊಂದಿಗೆ ಪ್ರಮಾಣಾನುಗುಣ ದಂಡದ ವ್ಯವಸ್ಥೆ ಇರಲಿದೆ. ತೆರಿಗೆದಾರರನ್ನು ಅನಗತ್ಯವಾಗಿ ಕ್ರಿಮಿನಲ್ ಕ್ರಮಗಳಿಗೆ ಒಳಪಡಿಸುವ ಬದಲು ಅನುಸರಣೆ ಸುಧಾರಿಸುವ ದೃಷ್ಟಿಕೋನಕ್ಕೆ ಒತ್ತು ನೀಡಲಾಗಿದೆ.
9 GST ಅಪರಾಧಗಳ ಅಪರಾಧೀಕರಣ ರದ್ದು
GST ಕಾನೂನಿನಡಿ ಇರುವ 9 ಅಪರಾಧಗಳಿಗೆ ಕ್ರಿಮಿನಲ್ ಹೊಣೆಗಾರಿಕೆಯನ್ನು ತೆಗೆದುಹಾಕುವ ಹಾಗೂ ಮತ್ತಷ್ಟು 24 ಅಪರಾಧಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಡಿಲಗೊಳಿಸುವ ಸುಧಾರಣೆಗೆ ಮಂಡಳಿ ಮುಂದಾಗಿದೆ. ಇದು GST ವ್ಯವಸ್ಥೆಯನ್ನು ಹೆಚ್ಚು trust-based taxation ವ್ಯವಸ್ಥೆಯನ್ನಾಗಿ ಮಾಡುವ ಪ್ರಯತ್ನದ ಭಾಗವಾಗಿದೆ.
ನೋಟಿಸ್ಗೂ ಮುನ್ನ ತೆರಿಗೆದಾರರಿಗೆ ಮಾಹಿತಿ
GST ಅಧಿಕಾರಿಗಳು formal demand notice ನೀಡುವ ಮೊದಲು ತೆರಿಗೆದಾರರಿಗೆ ಮುಂಚಿತವಾಗಿ ಮಾಹಿತಿ ನೀಡುವ ಸಾಮಾನ್ಯ ವ್ಯವಸ್ಥೆ ಜಾರಿಗೆ ತರಲು ಶಿಫಾರಸು ಮಾಡಲಾಗಿದೆ. ವಿವಿಧ ರಾಜ್ಯಗಳಲ್ಲಿ ನೋಟಿಸ್ ಮತ್ತು proceedingsಗೆ ಸಾಮಾನ್ಯ ಮಾನದಂಡ ರೂಪಿಸುವ ಉದ್ದೇಶವೂ ಇದೆ.
GST ರಿಫಂಡ್ ಪ್ರಕ್ರಿಯೆ ವೇಗ
ವ್ಯಾಪಾರಿಗಳ working capital ಮೇಲಿನ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ GST refund ಪ್ರಕ್ರಿಯೆಯನ್ನು ವೇಗಗೊಳಿಸುವ ಹಾಗೂ ಹೆಚ್ಚು automation ತರಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
E-commerce ವ್ಯಾಪಾರಿಗಳಿಗೆ ಮಹತ್ವದ ಪರಿಹಾರ
ಇ-ಕಾಮರ್ಸ್ ವೇದಿಕೆಗಳ ಮೂಲಕ ಬೇರೆ ರಾಜ್ಯಗಳಲ್ಲಿ ವ್ಯಾಪಾರ ನಡೆಸುವ ಸಣ್ಣ ಮಾರಾಟಗಾರರಿಗೆ ನೋಂದಣಿ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ವ್ಯವಸ್ಥೆ ತರಲು ನಿರ್ಧರಿಸಲಾಗಿದೆ.
ಇ-ಕಾಮರ್ಸ್ ಆಪರೇಟರ್ನ warehouse ಅನ್ನು ನಿರ್ದಿಷ್ಟ ಷರತ್ತುಗಳೊಂದಿಗೆ ಆ ರಾಜ್ಯದಲ್ಲಿ principal place of business ಆಗಿ ಘೋಷಿಸುವ ಅವಕಾಶ ನೀಡುವ ಪ್ರಸ್ತಾವನೆಗೆ ಒಪ್ಪಿಗೆ ದೊರೆತಿದೆ.
ITC ಮತ್ತು Invoice Matchingಗೆ ಒತ್ತು
ನಕಲಿ Input Tax Credit ಹಾಗೂ invoice mismatch ಸಮಸ್ಯೆಗಳನ್ನು ಕಡಿಮೆ ಮಾಡಲು invoice matching ಮತ್ತು ITC ಪ್ರಕ್ರಿಯೆಗಳನ್ನು ಮತ್ತಷ್ಟು automated ಹಾಗೂ standardised ಮಾಡುವ ಕ್ರಮಗಳಿಗೆ ಒತ್ತು ನೀಡಲಾಗಿದೆ.
ಸರಕು ಸಾಗಣೆಯಲ್ಲಿ ಅನಗತ್ಯ ತಪಾಸಣೆಗೆ ಕಡಿವಾಣ
ರಾಜ್ಯದಿಂದ ರಾಜ್ಯಕ್ಕೆ ಸರಕು ಸಾಗಿಸುವ ಸಂದರ್ಭದಲ್ಲಿ ಪದೇಪದೇ ನಡೆಯುವ ಪರಿಶೀಲನೆಗಳನ್ನು ಕಡಿಮೆ ಮಾಡಿ, ಸರಕುಗಳ movementಗೆ ಸಂಬಂಧಿಸಿದ compliance ವ್ಯವಸ್ಥೆಯನ್ನು ಹೆಚ್ಚು ಸರಳಗೊಳಿಸುವ ಕ್ರಮಗಳನ್ನು ಮಂಡಳಿ ಮುಂದಿಟ್ಟಿದೆ.
GST ನೋಂದಣಿ ಮತ್ತಷ್ಟು ಸರಳ
ಹೊಸ GST registration ಪ್ರಕ್ರಿಯೆಯನ್ನು ಹೆಚ್ಚು automated ಮತ್ತು taxpayer-friendly ಮಾಡುವ ಮೂಲಕ ಸಣ್ಣ ಉದ್ಯಮಿಗಳು ಹಾಗೂ ಹೊಸ ವ್ಯಾಪಾರಿಗಳಿಗೆ compliance burden ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ.
GST ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ
57ನೇ GST ಮಂಡಳಿ ಸಭೆಯಲ್ಲಿ GST ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ GST rate-related ವಿಷಯಗಳನ್ನು ಸಾಮಾನ್ಯವಾಗಿ ವರ್ಷಕ್ಕೆ ಒಂದು ಬಾರಿ, ಅದಕ್ಕಾಗಿ ಮೀಸಲಾದ ಸಭೆಯಲ್ಲಿ ಪರಿಗಣಿಸುವ ವ್ಯವಸ್ಥೆಯತ್ತ ಮಂಡಳಿ ಸಾಗಲಿದೆ. ಇದರಿಂದ ಉದ್ಯಮ ವಲಯಕ್ಕೆ ತೆರಿಗೆ ದರಗಳಲ್ಲಿ ಹೆಚ್ಚಿನ predictability ದೊರೆಯುವ ನಿರೀಕ್ಷೆಯಿದೆ.
ವ್ಯಾಪಾರ ವಲಯಕ್ಕೆ ದೊಡ್ಡ ಸಂದೇಶ
ಒಟ್ಟಾರೆ, 57ನೇ GST ಮಂಡಳಿ ಸಭೆಯ ನಿರ್ಧಾರಗಳು ತೆರಿಗೆ ಸಂಗ್ರಹಕ್ಕಿಂತ compliance ಸರಳೀಕರಣ, ಅನಗತ್ಯ ಕ್ರಿಮಿನಲ್ ಕ್ರಮಗಳಿಗೆ ಕಡಿವಾಣ, ವೇಗದ ರಿಫಂಡ್, ಸುಲಭ ನೋಂದಣಿ ಮತ್ತು ವ್ಯಾಪಾರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಿವೆ.
GST ವ್ಯವಸ್ಥೆಯ ಮುಂದಿನ ಹಂತವನ್ನು ಹೆಚ್ಚು ಸರಳ, ಪಾರದರ್ಶಕ ಮತ್ತು trust-based taxation system ಆಗಿ ರೂಪಿಸುವ ನಿಟ್ಟಿನಲ್ಲಿ ಈ ನಿರ್ಧಾರಗಳು ಮಹತ್ವದ ಹೆಜ್ಜೆಯಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




