Latest

6 ಜನ ಎಂಇಎಸ್ ಅಭ್ಯರ್ಥಿಗಳು ಅಂಗಡಿ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ 6 ಜನ ಪಕ್ಷೇತರರು ನಾಮಪತ್ರ ಹಿಂತೆಗೆದುಕೊಂಡು ಬಿಜೆಪಿ ಸೇರಿದ್ದಾರೆ.
ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಚುನಾವಣೆ ಆಗಬಾರದು ಎಂದು 100 ಜನರನ್ನು ನಿಲ್ಲಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಹಿಂದೆಯೂ ಇಂತಹ ಪ್ರಯತ್ನ ಮಾಡಿತ್ತು ಎಂದರು.
ಕಾಂಗ್ರೆಸ್ ಜಾತಿ, ಭಾಷೆ ಒಡೆಯುವ ಕೆಲಸ ಮಾಡುತ್ತ ಬಂದಿದೆ ಎಂದು ಆರೋಪಿಸಿದರು.
ಬಿಜೆಪಿ ವಕ್ತಾರ, ವಕೀಲ ಎಂ.ಬಿ. ಜಿರಲಿ ಬಿಜೆಪಿ ಪ್ರಣಾಳಿಕೆಯ ಅಂಶಗಳನ್ನು ವಿವರಿಸಿದರು.
ನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ, ಬಸವರಾಜ ರೊಟ್ಟಿ, ಆರ್.ಎಸ್.ಮುತಾಲಿಕ್, ರಾಜು ಚಿಕ್ಕನಗೌಡರ ಮೊದಲಾದವರಿದ್ದರು.

(ಪ್ರಗತಿವಾಹಿನಿ ಸುದ್ದಿಗಳನ್ನು ಬೇರೆ ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)

Home add -Advt

Related Articles

Back to top button