ಕೊರೊನಾ ಸೋಂಕಿಗೆ 6 ವಾರಗಳ ಮಗು ಬಲಿ

ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲಿ ಕೊರೊನ ವೈರಸ್ ಅಟ್ಟಹಾಸ ಮುಂದುವರೆಸಿದ್ದು, ಸೋಂಕಿಗೆ ಮತ್ತೊಂದು ಪುಟ್ಟ ಮಗು 6 ವಾರಗಳ ಕಂದಮ್ಮ ಬಲಿಯಾಗಿದೆ ಎಂದು ಅಲ್ಲಿನ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ರಾಜ್ಯಪಾಲ ನೆಡ್ ಲ್ಯಾಮಂಟ್ ಟ್ವೀಟ್ ಮಾಡಿದ್ದು, ಕಳೆದ ವಾರ ಮಗುವನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಅಲ್ಲದೆ ಕಂದಮ್ಮ ಕೊರೊನಾ ವೈರಸ್‍ಗೆ ಬಲಿಯಾಗಿರುವುದು ದೃಢವಾಗಿದೆ ಎಂದು ವಿವರಿಸಿದ್ದಾರೆ.

ಕೊರೊನಾ ವೈರಸ್‍ಗೆ ಬಲಿಯಾದ ಅತ್ಯಂತ ಕಿರಿಯ ವಯಸ್ಸಿನ ಪ್ರಕರಣ ಇದಾಗಿದೆ. ಈ ಹಿಂದೆ ಚಿಕ್ಯಾಗೋದಲ್ಲಿ ನಿಧನವಾದ ಮಗು ಒಂದು ವರ್ಷಕ್ಕಿಂತ ಕಡಿಮೆ ವಯಸ್ಸಿನದ್ದಾಗಿದೆ. ಕೊರೊನಾ ಪರೀಕ್ಷೆಯಲ್ಲಿ ಮಗುವಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದಾಗಿ ಇಲಿಯಾನ್ಸ್ ರಾಜ್ಯದ ರಾಜ್ಯಪಾಲ ಜೆಬಿ ಪ್ರಿಟ್ ಜ್ಕೆರ್ ಮಾಹಿತಿ ನೀಡಿದ್ದರು.

ಇದುವರೆಗೆ ಅಮೆರಿಕದಲ್ಲಿ ಕೊರೊನಾ ವೈರಸ್ ಗೆ 4,476 ಮಂದಿ ಬಲಿಯಾಗಿದ್ದಾರೆ ಎಂಬುದಾಗಿ ವರದಿಯಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button