Latest

ಸುಳ್ಳು ಸುದ್ದಿ ಕಳ್ಳಾಟಕ್ಕೆ ದಂಡ ತೆತ್ತ ಯೂಟ್ಯೂಬ್ ಚಾನೆಲ್ ಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ದೇಶದ ವ್ಯವಸ್ಥೆ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದ ಆರು ಯೂಟ್ಯೂಬ್ ಚಾನೆಲ್ ಗಳು ಅದಕ್ಕೆ ದಂಡ ತೆತ್ತಿವೆ.  ಈ ಯೂಟ್ಯೂಬ್‌ ಚಾನೆಲ್‌ಗ‌ಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ.

20 ಲಕ್ಷ ಚಂದಾದಾರರು 51 ಕೋಟಿ ವೀಕ್ಷಕರನ್ನು ಹೊಂದಿದ್ದ  ಯೂಟ್ಯೂಬ್‌ ಚಾನೆಲ್‌ಗ‌ಳ ಮೇಲೆ ನಿಷೇಧ ಹೇರಿರುವ ಬಗ್ಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಸ್‌ ಇನ್ಫೋರ್ಮೇಷನ್‌ ಬ್ಯೂರೋ (ಪಿಐಬಿ) ಅಧಿಕೃತ ಪ್ರಕಟಣೆ ನೀಡಿದೆ.

ನೇಷನ್‌ ಟಿವಿ  (5.57 ಲಕ್ಷಕ್ಕೂ ಹೆಚ್ಚು ಚಂದಾದಾರರು), ಸಂವಾದ್ ಟಿವಿ (10.9 ಲಕ್ಷ ಚಂದಾದಾರರು), ಸರೋಕರ್ ಭಾರತ್  (21,100 ಚಂದಾದಾರರು), ನೇಷನ್‌ 24 (25,400 ಚಂದಾದಾರರು), ಸ್ವರ್ಣಿಮ್ ಭಾರತ್  (6,070 ಚಂದಾದಾರರು),
ಸಂವಾದ್ ಸಮಾಚಾರ್ (3.48 ಲಕ್ಷ ಚಂದಾದಾರರು) ನಿಷೇಧವಾದ ಚಾನೆಲ್ ಗಳು.

ಈ ಯೂಟ್ಯೂಬ್‌ ಚಾನೆಲ್‌ಗ‌ಳು ಚುನಾವಣಾ ವ್ಯವಸ್ಥೆ, ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣಗಳು, ಕೇಂದ್ರ ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ಸುಳ್ಳು ಮಾಹಿತಿ ಪ್ರಸಾರ ಮಾಡುತ್ತಿದ್ದವು. ಈ ಬಗ್ಗೆ ಪಿಐಬಿಯ ಮಾಹಿತಿ ದೃಢೀಕರಣ ವಿಭಾಗ ತನಿಖೆ ನಡೆಸಿ, ಅವುಗಳು ಸುಳ್ಳು ಪ್ರಚಾರ ನಡೆಸುತ್ತಿವೆ ಎಂದು ಬಹಿರಂಗೊಳಿಸಿತ್ತು.

*ಜನಾರ್ಧನ ರೆಡ್ಡಿಗೆ ಮತ್ತೆ ಸಂಕಷ್ಟ*

https://pragati.taskdun.com/janardhana-reddyproperty-seizedstat-govtapprovdcbi/

ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ್‌ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

https://pragati.taskdun.com/prime-minister-modi-launched-worlds-longest-river-cruise-mv-ganga-vilas/

ಸಂಪೂರ್ಣ ಮುಳುಗಡೆ ಹಂತದಲ್ಲಿದೆ ಜ್ಯೋತಿರ್ಲಿಂಗದ ತಾಣ ಜೋಶಿಮಠ

https://pragati.taskdun.com/joshimath-the-site-of-jyotirlinga-is-under-complete-submergence/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button