ಅಂಡರ್ ಪಾಸ್ ನಿರ್ಮಾಣಕ್ಕೆ 60 ಕೋಟಿ ಕೊಡಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ-
ಇಲ್ಲಿಯ ಆರ್ ಪಿಡಿ ಸರ್ಕಲ್ ಅಂಡರ್ ಪಾಸ್ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಶಾಸಕ ಅಭಯ ಪಾಟೀಲ ಬುಧವಾರ ಉಪಮುಖ್ಯಮಂತ್ರಿಯೂ ಆಗಿರುವ ಗೋವಿಂದ ಕಾರಜೋಳ ಅವರನ್ನು ಭೇಟಿಯಾಗಿ ಈ ಕುರಿತು ಮನವಿ ಸಲ್ಲಿಸಿದರು.
ಬೆಳಗಾವಿಯ ವಾಹನ ದಟ್ಟಣೆ ಪ್ರದೇಶವಾದ ಆರ್ ಪಿಡಿ ವೃತ್ತದಿಂದ ಬಿಗ್ ಬಜಾರ್ ವರೆಗೆ ಅಂಡರ್ ಪಾಸ್ ನಿರ್ಮಾಣಕ್ಕೆ ಈಗಾಗಲೆ ಅಂದಾಜು ವೆಚ್ಚ ತಯಾರಿಸಿರುವ ಅಭಯ ಪಾಟೀಲ, ಇದಕ್ಕೆ 40 ಕೋಟಿ ರೂ. ಕೇಳಿದ್ದಾರೆ. ಅಲ್ಲದೆ ಮಹಾವೀರ ಭವನದಿಂದ ರೈಲ್ವೆ ಓವರ್ ಬ್ರಿಜ್ ವರೆಗೆ ಅಂಡರ್ ಪಾಸ್ ನಿರ್ಮಾಣಕ್ಕೆ 20 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದರಲ್ಲಿ ಆರ್ ಪಿಡಿ ವೃತ್ತದ ಅಂಡರ್ ಪಾಸ್ ನಿರ್ಮಾಣಕ್ಕೆ ಸಚಿವರು ಒಪ್ಪಿದ್ದು, ಅದು ಆರಂಭವಾದ ನಂತರ ಇನ್ನೊಂದು ಅಂಡರ್ ಪಾಸ್ ನಿರ್ಮಾಣ ಮಾಡಲು ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ಅಭಯ ಪಾಟೀಲ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಈ ಎರಡು ಅಂಡರ್ ಪಾಸ್ ನಿರ್ಮಾಣವಾದರೆ ಅಪಘಾತಗಳ ಸಂಖ್ಯೆ ಕಡಿಮೆಯಾಗಿ ಸುಲಲಿತ ಸಂಚಾರ ಸಾಧ್ಯವಾಗಲಿದೆ. ದಿನನಿತ್ಯ ಸಂಚಾರ ದಟ್ಟಣೆಯಿಂದ ಹೈರಾಣಾಗಿರುವ ಜನರಿಗೆ ನೆಮ್ಮದಿ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.
ಇದಲ್ಲದೆ ಬೆಮ್ಕೋ ಬಳಿಯೂ ಅಂಡರ್ ಪಾಸ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅದಕ್ಕೂ ಒಪ್ಪಿಗೆ ಸಿಗುವ ನಿರೀಕ್ಷೆ ಇದೆ ಎಂದು ಅಭಯ ಪಾಟೀಲ ಹೇಳಿದ್ದಾರೆ.
ಇದನ್ನೂ ಓದಿ – ತುರ್ತಾಗಿ 150 ಕೋಟಿ ರೂ. ಕೊಡಿ
ಬೆಳಗಾವಿಗೆ 150 ಕೋಟಿ ರೂ. ಅನುದಾನಕ್ಕೆ ಖಾದರ್ ಭರವಸೆ -ಅಭಯ ಪಾಟೀಲ
5 ಸಾವಿರ ಮನೆ ನಿರ್ಮಾಣಕ್ಕೆ ಬೇಡಿಕೆ; 3800ಕ್ಕೆ ತಾಂತ್ರಿಕ ಒಪ್ಪಿಗೆ -ಅಭಯ ಪಾಟೀಲ
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ