ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಜನರು ಕಂಗಾಲಾಗಿದ್ದು, ದೇಶ ತೊರೆಯುತ್ತಿದ್ದಾರೆ. ಯುಎಸ್ ಮಿಲಿಟರಿ ಪಡೆಗಳು ಜನರನ್ನು ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣಾ ಕಾರ್ಯ ಕೈಗೊಂಡಿದೆ.
ಯುಎಸ್ ನ ಮಿಲಿಟರಿ ಸರಕು ವಿಮಾನವೊಂದರಲ್ಲಿ ಬರೋಬ್ಬರಿ 640 ಅಪ್ಘಾನಿಸ್ತಾನಿಗಳನ್ನು ಒಮ್ಮೆಲೇ ಏರ್ ಲಿಫ್ಟ್ ಮಾಡಿದೆ. ಅಮೆರಿಕದ c-17 ಗ್ಲೋಬ್ ಮಾಸ್ಟರ್ 3 ಸರಕು ವಿಮಾನ ಇದಾಗಿದೆ. ಈ ವಿಮಾನದಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದು ಇದೇ ಮೊದಲು ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪ್ಘಾನಿಸ್ತಾನದಿಂದ ಮಹಿಳೆಯರು, ಮಕ್ಕಳು ಸೇರಿದಂತೆ 640 ಜನರನ್ನು ಒಮ್ಮೆಲೆ ರಕ್ಷಣೆ ಮಾಡಲಾಗಿದ್ದು, ಕತಾರ್ ಗೆ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ.
ಕೋವಿಡ್ ಗೆ ಹೆದರಿ ದಂಪತಿ ಆತ್ಮಹತ್ಯೆ; ಸಾವಿಗೂ ಮುನ್ನ ವಾಯ್ಸ್ ಮೆಸೆಜ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ