Latest

ಕುಲ್ಫಿ ತಿಂದು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ 65 ಮಕ್ಕಳು

ಪ್ರಗತಿವಾಹಿನಿ ಸುದ್ದಿ, ಅಲ್ವಾರ್: ಬಿಸಿಲಿನ ಬೇಗೆ ತಾಳಲಾರದೆ ಕುಲ್ಫಿ ಸವಿದ 65 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಲ್ವಾರ್ ಜಿಲ್ಲೆಯ ರಾಜ್‌ಗಡ ಪೊಲೀಸ್ ಠಾಣೆ ವ್ಯಾಪ್ತಿಯ ಖುರ್ದ್ ಗ್ರಾಮದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ಬಿಸಿಲಿನ ಝಳಕ್ಕೆ ಬಸವಳಿದ ಮಕ್ಕಳು ಬೀದಿ ಬದಿಯ ಐಸ್ ಕ್ರೀಂ ಮಾರಾಟಗಾರರೊಬ್ಬರಿಂದ ಕುಲ್ಫಿ ಖರೀದಿಸಿ ತಿಂದಿದ್ದರು. ಕೆಲವೇ ಗಂಟೆಗಳಲ್ಲಿ ಈ ಎಲ್ಲ ಮಕ್ಕಳು ವಾಂತಿ ಮತ್ತು ಹೊಟ್ಟೆ ನೋವು ಬಂದು ಅಸ್ವಸ್ಥರಾದರು. ಕೂಡಲೇ ಸ್ಥಳೀಯರು ಮಕ್ಕಳನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು.

ಅಲ್ಲಿನ ವೈದ್ಯರ ಸಲಹೆಯಂತೆ ನಂತರ ಅಲ್ವಾರ್, ಬಂಡಿಕುಯಿ ಮತ್ತು ರಾಜ್‌ಗಡದ ಆಸ್ಪತ್ರೆಗಳಿಗೆ ಮಕ್ಕಳನ್ನು ದಾಖಲಿಸಲಾಗಿದ್ದು 50 ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿ ಕೊಡಲಾಗಿದೆ. ಉಳಿದ 15 ಮಕ್ಕಳು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವುದರಿಂದ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.

ಇವರು ಸೇವಿಸಿದ್ದ ಮಾರಾಟಗಾರರಿಂದ ಕುಲ್ಫಿಯ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಅದರ ವರದಿ ಬಂದ ನಂತರವೇ ಅಸ್ವಸ್ಥತೆಗೆ ನಿಖರ ಕಾರಣಗಳು ತಿಳಿದುಬರಲಿವೆ ಎಂದು ವೈದ್ಯರು ತಿಳಿಸಿದ್ದಾರೆ.

Home add -Advt

https://pragati.taskdun.com/munipuradheesha-murugendra-mahaswamyjis-birthday-special-article/

https://pragati.taskdun.com/slight-rise-in-gold-and-silver-prices/

https://pragati.taskdun.com/free-busshaki-schemekarnataka-woman/

 

Related Articles

Back to top button