ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡಿದರು.
ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಕನ್ನಡ ನಾಡಿನ ಜನತೆಗೆ ರಾಜ್ಯೋತ್ಸವ ಶುಭಾಷಯ ಕೋರಿದರು. ಕರ್ನಾಟಕ ಏಕೀಕರಣ ಹೋರಾಟವನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಏಕೀಕರಣಕ್ಕಾಗಿ ಹಲವು ಮಹನೀಯರು ಶ್ರಮಿಸಿದ್ದಾರೆ. ಮದ್ರಾಸ್ ಕರಾವಳಿ, ಮಧ್ಯ ಕರ್ನಾಟಕ ಎಂದು ಹಂಚಿಹೋಗಿದ್ದ ಭಾಗವನ್ನು ಹೋರಾಟದ ಮೂಲಕ ಹಾಲೂರು ವೆಂಕಟರಾಯರು ಏಕೀಕರಣ ಮಾಡಿದರು. ಕನ್ನಡ ನಾಡು ನೆಲ, ಜಲ, ಭಾಷೆ ಉಳಿಸಿ ಬೆಳಸಬೇಕಾಗಿದ್ದು, ನಮ್ಮೆಲ್ಲರ ಜವಾಬ್ದಾರಿ, ಕರ್ತವ್ಯ ಎಂದರು.
ನಮ್ಮದು ಸಂಪದ್ಭರಿತವಾದ ನಾಡು. ಪುಣ್ಯದ ಬೀಡು. ಕರುನಾಡಲ್ಲಿ ಹುತ್ಟಬೇಕಾದರೆ 7 ಜನ್ಮದ ಪುಣ್ಯಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗದ ಜೊತೆಗೆ ಭಾರತದ ಭವಿಷ್ಯವನ್ನೂ ನಿರ್ಮಾಣ ಮಾಡುವ ಶಕ್ತಿ ಕರ್ನಾಟಕಕ್ಕೆ ಇದೆ ಎಂದು ಹೇಳಿದರು.
ಬೆಳಗಾವಿ: ಮಧ್ಯರಾತ್ರಿಯೇ ಕನ್ನಡ ರಾಜ್ಯೋತ್ಸವ ಆಚರಣೆ
https://pragati.taskdun.com/latest/kannada-rajyotsavabelagavimidnight/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ