Latest

7 ರಿಂದ 9ರ ವರೆಗೆ ವಿವಿಧೆಡೆ ವಿದ್ಯುತ್ ನಿಲುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹೆಸ್ಕಾಂ ವತಿಯಿಂದ ಯುಜಿ ಕೇಬಲ್ ಕೆಲಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.7ರಿಂದ ಜ.9ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಬೆಳಗಾವಿಯ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ಜ. 7ರಂದು ನಾನಾವಾಡಿ ಪ್ರದೇಶ, ಆಶ್ರಯವಾಡಿ, ಕುಡುತುರಕರ್ ಕಂಪೌಂಡ್, ಶಿವಾಜಿ ಎಂಜಿನಿಯರಿಂಗ್, ಪುರಾಣಿಕ ಟಿಸಿ, ಜ.8ರಂದು ಕಚೇರಿ ಗಲ್ಲಿ, ದಾಣಿ ಗಲ್ಲಿ, ಕೋರೆ ಗಲ್ಲಿ, ಸಂಭಾಜಿ ನಗರ, ರಣಜುಂಜರ ಕಾಲನಿ, ಕೇಶವ ನಗರ, ಆನಂದ ನಗರ, ಓಂಕಾರ ನಗರ, ಛಬ್ಬಿ ಲೇಔಟ್, ಸುಂಕೆ ಲೇಔಟ್, ಭಾಗ್ಯ ನಗರ, ಆದರ್ಶ ನಗರ, ಪಟವರ್ಧರ್ ಲೇಔಟ್, ಸುಭಾಶ ಮಾರ್ಕೆಟ್, ಆರ್.ಕೆ. ಮಾರ್ಗ, ಹಿಂದವಾಡಿ ಹಾಗೂ ಜ.9ರಂದು ರಾಮದೇವ ಗಲ್ಲಿ, ಸೋನಾರ ಗಲ್ಲಿ, ದತ್ತ ಗಲ್ಲಿ, ಮೇಘದೂತ ಸೊಸೈಟಿ, ನಾಥಪೈ ಸರ್ಕಲ್, ಸರಸ್ವತಿ ರಸ್ತೆ, ಭಾರತ ನಗರ, ಶಹಾಪುರ ಪೊಲೀಸ್ ಠಾಣೆ ಪ್ರದೇಶ, ಗೋವಾವೇಸ್, ಗುಡಶೆಡ್ ರಸ್ತೆ, ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟೆ, ಗುರುವಾರ ಪೇಟೆ, ಶುಕ್ರವಾರ ಪೇಟೆ, ದೇಶಮುಖ್ ರಸ್ತೆ, ಹಿಂದವಾಡಿ, ಖಾನಾಪುರ ರಸ್ತೆಯ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಹೆಸ್ಕಾಂ ತಿಳಿಸಿದೆ.

Related Articles

Back to top button