Kannada NewsKarnataka NewsNational

*ರಾಜ್ಯದ ಏಳು ಪೊಲೀಸ್ ಅಧಿಕಾರಿಗಳಿಗೆ ದಕ್ಷತಾ ಪದಕ*

ಪ್ರಗತಿವಾಹಿನಿ ಸುದ್ದಿ: ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಏಳು ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ಗೃಹಮಂತ್ರಿ ದಕ್ಷತಾ ಪದಕ-2024 ಲಭಿಸಿದೆ. ವಿಶೇಷ ಕಾರ್ಯಾಚರಣೆ, ತನಿಖೆ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ (ಎಫ್‌ಎಸ್‌ಎಲ್) ಮಾಡಿದ ಸೇವೆ ಗಮನಿಸಿ ಪದಕಗಳನ್ನು ಘೋಷಣೆ ಮಾಡಲಾಗಿದೆ.  

ಕ್ಲಿಷ್ಟ ರೀತಿಯ ಅಪರಾಧ ಪ್ರಕರಣಗಳನ್ನು ಭೇದಿಸಿ ಉತ್ತಮ ತನಿಖೆ ನಡೆಸುವ ತನಿಖಾಧಿಕಾರಿಗಳಿಗೆ ಪ್ರತಿವರ್ಷ ಕೇಂದ್ರ ಗೃಹ ಸಚಿವಾಲಯವು ಗೃಹಮಂತ್ರಿ ಹೆಸರಿನಲ್ಲಿ ಈ ಪದಕ ನೀಡುತ್ತದೆ.

ಪದಕಕ್ಕೆ ಭಾಜನರಾದ ಅಧಿಕಾರಿಗಳು:

ಡಿವೈಎಸ್‌ಪಿ ಕೆ.ಬಸವರಾಜ(ಆಂತರಿಕ ಭದ್ರತಾ ವಿಭಾಗ), ಎಸಿಪಿ ವಿ.ಎಲ್.ರಮೇಶ್ (ಬೆಂಗಳೂರು ನಗರ), ಇನ್‌ಸ್ಪೆಕ್ಟರ್‌ಗಳಾದ ಉಮೇಶ್ ಕಾಂಬ್ಳೆ(ರಾಯಚೂರು), ನರೇಂದ್ರ ಬಾಬು (ಸಿಐಡಿ), ಕೆ.ಎಂ.ವಸಂತ(ಹಾಸನ), ರಮೇಶ್ ಎಚ್. ಹೊನ್ನಾಪುರ(ಕಾರವಾರ) ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಉಪ ನಿರ್ದೇಶಕ ಪ್ರವೀಣ್‌ ಸಂಗನಾಳ್‌ ಮಠ ಅವರಿಗೆ ಪದಕ ಲಭಿಸಿದೆ. ಶೀಘ್ರದಲ್ಲೇ ಪದಕ ಪ್ರದಾನ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button