ಪ್ರಗತಿವಾಹಿನಿ ಸುದ್ದಿ: : ಸಂಬಂಧಿಕರು, ಸ್ನೇಹಿತರ ಜತೆಗೂಡಿ ತಾವು ಕೆಲಸ ಮಾಡುತ್ತಿದ್ದ ಬ್ಯಾಂಕ್ ಹೈಜಾಕ್ ಮಾಡಿದ ಸಿಬ್ಬಂದಿಗಳು ಒಂದಲ್ಲ, ಎರಡಲ್ಲ ಬರೊಬ್ಬರಿ 74. 86 ಕೋಟಿ ಸಾಲ ಪಡೆದು ಮರಳಿಸದೇ ವಂಚನೆ ಮಾಡಿ, ನಾಪತ್ತೆಯಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಮಹಾಲಕ್ಷ್ಮಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಮ್ಯಾನೇಜರ್ ಸೇರಿದಂತೆ 14 ಜನ ಸಿಬ್ಬಂದಿಗಳು ಉಂಡ ಮನೆಗೆ ದ್ರೋಹ ಬಗೆದಿದ್ದಾರೆ. ತಾವು ಕೇಲಸ ಮಾಡುತ್ತಿದ್ದ ಬ್ಯಾಂಕ್ ನಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಈ ಬ್ಯಾಂಕ್ ನಂಬಿ ಠೇವಣಿ ಇಟ್ಟ ಗ್ರಾಹಕರು, ಫಿಗ್ಮಿ ತುಂಬಿದ ವ್ಯಾಪಾರಿಗಳಲ್ಲಿ ಸದ್ಯ ಆತಂಕ ಶುರುವಾಗಿದೆ.
ಠೇವಣಿ ಇಟ್ಟ ಹಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದು ಮರಳಿಸಿಲ್ಲ. ಸಾಲ ಪಡೆದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ಇತರ ಕಡೆ ಆರೋಪಿಗಳು ಆಸ್ತಿ ಮಾಡಿಕೊಂಡಿದ್ದಾರೆ. ಬ್ಯಾಂಕ್ ಚೇರ್ಮನ್ ಜೀತೇಂದ್ರ ಮಾಂಗಳೇಕರ್ ಎಂಬುವರ ದೂರಿನ ಮೇರೆಗೆ 14 ಜನರ ವಿರುದ್ಧ ಗೋಕಾಕ ಪೊಲೀಸ್ ಠಾಣೆಯಲ್ಲಿ ಈಗಾಗಲೆ ಪ್ರಕರಣ ದಾಖಲಾಗಿದೆ. ಕೋಟಿ ಕೋಟಿ ವಂಚನೆ ಮಾಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಪತ್ತೆಗೆ ಮೂರು ವಿಶೇಷ ತಂಡ ರಚನೆ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ