ಪ್ರಗತಿವಾಹಿನಿ ಸುದ್ದಿ; ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ. ನಾವು ಹಲವು ಸಂಕಲ್ಪಗಳೊಂದಿಗೆ ಮುನ್ನಡೆಯಬೇಕು. ಕೊರೊನಾ ನಡುವೆ ಆತ್ಮನಿರ್ಭರ ಭಾರತ ಕನಸು ನನಸಾಗಬೇಕು ಎಂದು ಕರೆ ನೀಡಿದರು.
ಕೊರೊನಾ ಭೀತಿ ನಡುವೆಯೇ 74ನೇಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಗೆ ಆಗಮಿಸಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಕೊರೊನಾ ಎಂಬ ಸಾಂಕ್ರಾಮಿಕ ರೋಗದ ವಿರುದ್ಧ ಭಾರತಕ್ಕೆ ಗೆಲುವು ಸಿಗಲಿದೆ. ದೇಶದ ಹಲವೆಡೆ ಈಗ ಪ್ರವಾಹ ಪರಿಸ್ಥಿತಿ ಏರ್ಪಟ್ಟಿದೆ. ಸ್ವಾತಂತ್ರ್ಯದ ದಿನ ಸ್ವಾತಂತ್ರ್ಯದ ಯೋಧರನ್ನು ನೆನೆಯಬೇಕು. ಇದರ ಜತೆಗೆ ಭವಿಷ್ಯದ ಕುರಿತು ಕೆಲವು ಗುರಿಗಳನ್ನು ಇಟ್ಟುಕೊಳ್ಳಬೇಕು.
ಬ್ರಿಟೀಷರ ವಿರುದ್ಧ ಗೆಲ್ಲಲು ವಿವಿಧತೆಯಲ್ಲಿ ಏಕತೆ ಮಹತ್ವ ಪಡೆಯಿತು. ಸಾಮಾಜ್ರಶಾಹಿತ್ವ ಯಾರಿಗೂ ಒಳ್ಳೆಯದಲ್ಲ. ಸಾಮ್ರಾಜ್ಯಶಾಹಿತ್ವವನ್ನು ಭಾರತ ಈಗಾಗಲೇ ಒಂದುಬಾರಿ ಸೋಲಿಸಿದೆ ಎಂದು ಹೇಳುವ ಮೂಲಕ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಚೀನಾಗೆ ಪರೋಕ್ಷ ಎಚ್ಚರಿಕೆ ನೀಡಿದರು.
ಕೊರೊನಾ ಮಹಾಮಾರಿ ನಡುವೆ ಆತ್ಮ ನಿರ್ಭರ ಭಾರತ ಗುರಿ ಹೊಂದಲಾಗಿದೆ. ಆತ್ಮನಿರ್ಭರ ಭಾರತದ ಕನಸು ನನಸಾಗಲು ನಾವೆಲ್ಲರೂ ಶ್ರಮಿಸಬೇಕಿದೆ. ಇಡೀ ವಿಶ್ವಕ್ಕೆ ಭಾರತ ತನ್ನ ಏಕತೆಯ ಶಕ್ತಿಯನ್ನು ತೋರಿದೆ. ಭಾರತ ಸ್ವಾತಂತ್ರ್ಯ ಪಡೆದ 75 ವರ್ಷಕ್ಕೆ ಸ್ವಾವಲಂಭನೆ ಪಡೆಯಬೇಕು. ದೇಶದಲ್ಲಿ ಈಗ ಪಿಪಿಇ ಕಿಟ್, ಎನ್ 95 ಮಾಸ್ಕ್, ವೆಂಟಿಲೇಟರ್ ಗಳನ್ನು ಉತ್ಪಾದಿಸಲಾಗುತ್ತಿದೆ. ಕಚ್ಚಾ ವಸ್ತು ರಫ್ತು ಮಾಡುವುದರಿಂದ ದೇಶ ಬದಲಾಗಬೇಕು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ