Kannada NewsKarnataka NewsLatest

75 ಬಾಕ್ಸ್ ಲಿಕ್ಕರ್ ವಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  

ಬೆಳಗಾವಿ ಅಬಕಾರಿ ದಳ ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 75 ಬಾಕ್ಸ್ ಲಿಕ್ಕರ್ ವಶಪಡಿಸಿಕೊಂಡಿದ್ದಾರೆ.

ಟಾಟಾ ಪಿಕಪ್ ವಾಹನದಲ್ಲಿ (ನಂ.ಎಂಎಚ್ 13, ಎಎನ್ 8312) ವಿವಿಧ ಬ್ರ್ಯಾಂಡ್ ಲಿಕ್ಕರ್ ಗಳನ್ನು ಸಾಗಿಸುತ್ತಿದ್ದಾಗ ಬೆಳಗಾವಿ ಚನ್ನಮ್ಮ ವೃತ್ತದ ಬಳಿ ವಶಪಡಿಸಿಕೊಳ್ಳಲಾಗಿದೆ.

Home add -Advt

ವಾಹನದಲ್ಲಿದ್ದ ಬಸಪ್ಪ ಕೋಳಿ ಮತ್ತು ರಮೇಶ ಕಾಂಬ್ಳೆ ಎನ್ನುವವರನ್ನು ಬಂಧಿಸಲಾಗಿದೆ.

ಅಬಕಾರಿ ಅಧಿಕಾರಿಗಳಾದ ಜಂಟಿ ಆಯುಕ್ತ ಮಂಜುನಾಥ, ಡಿಸಿ ಅರುಣಕುಮಾರ ನಿರ್ದೇಶನದಂತೆ ಡಿಎಸ್ಪಿ ವಿಜಯಕುಮಾರ ಹಿರೇಮಠ, ಇನಸ್ಪೆಕ್ಟರ್ ರವಿ ಹೊಸಳ್ಳಿ, ಸಬ್ ಇನಸ್ಪೆಕ್ಟರ್ ಸಿದ್ದಪ್ಪ ಮೇಟಿ, ಸಿಬ್ಬಂದಿಗಳಾದ ಮಹಾದೇವ ಕೆ., ಬಿ.ಎಸ್.ಅಟಗಲ್, ಜಿಲಾನಿ, ಸಿಂಗಾಡೆ ಮೊದಲಾದವರು ದಾಳಿ ನಡೆಸಿದರು.

 

Related Articles

Back to top button