*ಶೇ.75 ರಷ್ಟು ಕ್ಯಾನ್ಸರ್ ಗುಣಪಡಿಸಬಹುದು*; *ವಿಶ್ವ ಕ್ಯಾನ್ಸರ್ ದಿನದ ವಿಶೇಷ*
ಡಾ ಮಹೇಶ ಕಲ್ಲೋಲಳ್ಳಿ
ವಿಶ್ವಾದ್ಯಂತ ಸಾವಿಗೆ ಕ್ಯಾನ್ಸರ್ ಎರಡನೇ ಪ್ರಮುಖ ಕಾರಣವಾಗಿದ್ದು, ದುಃಖ ಮತ್ತು ಸಾವಿನ ಭಯ ಪರಸ್ಪರ ಸಂಬಂಧ ಹೊಂದಿವೆ. ಕ್ಯಾನ್ಸರ ನೋವು ಕೇವಲ ದೈಹಿಕವಲ್ಲ, ಮಾನಸಿಕ-ಸಾಮಾಜಿಕ, ಆರ್ಥಿಕ ಮತ್ತು ಆಧ್ಯಾತ್ಮಿಕವಾಗಿಯೂ ಇದೆ. ಮುಖ್ಯವಾಗಿ ಅಜ್ಞಾನ ಮತ್ತು ತಪ್ಪು ಕಲ್ಪನೆಗಳಿಂದ ಇದ್ದು, ಅವರೊಂದಿಗಿನ ಆಪ್ತ ಸಮಾಲೋಚನೆಯಿಂದ ಅವರಲ್ಲಿ ಅರಿವು ಮೂಡಿಸಿ, ಭಯವನ್ನು ಹೋಗಲಾಡಿಸಬಹುದು.
ಭಾರತದಲ್ಲಿ ಖಾಯಿಲೆಯಿಂದ ಮೃತಪಡುವವರ ಸಂಖ್ಯೆಯಲ್ಲಿ ಕ್ಯಾನ್ಸರ ಪ್ರಥಮ ಸ್ಥಾನದಲ್ಲಿದ್ದು, ಕ್ಯಾನ್ಸರನಿಂದ ಬಳಲುತ್ತಿರುವ ಪ್ರತಿ 15 ಜನರಲ್ಲಿ ಓರ್ವ ಸಾವನ್ನಪ್ಪುತ್ತಿತ್ತಾರೆ. ಇದು 2025ರಲ್ಲಿ 7 ಪಟ್ಟು ಅಧಿಕವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆಯು ತಿಳಿಸಿದೆ. ಪ್ಯಾರಿಸನಲ್ಲಿ ಕ್ಯಾನ್ಸರ ವಿರುದ್ದ ವಿಶ್ವ ಶೃಂಗಸಭೆಯಲ್ಲಿ ನಿರ್ಣಯಿಸಿದಂತೆ 2000 ವರ್ಷದಿಂದ ಕ್ಯಾನ್ಸರ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆಬ್ರುವರಿ 4ರಂದು ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪ್ರಸಕ್ತ ವರ್ಷವು ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ ನೇತೃತ್ವದಲ್ಲಿ ಯುನೈಟೆಡ್ ಬೈ ಯುನಿಕ್ ಘೋಷವಾಕ್ಯದಡಿ ಆಚರಿಸಲಾಗುತ್ತದೆ.
“ಯುನೈಟೆಡ್ ಬೈ ಯುನಿಕ್“
2025-2027ರ “ಯುನೈಟೆಡ್ ಬೈ ಯುನಿಕ್” ಘೋಷವಾಕ್ಯವು ಆರೈಕಾ ಕೆಂದ್ರದಲ್ಲಿರುವ ರೋಗಿಯ ಸಂಭಾಷಣೆಗಳು ಹೃದಯಕ್ಕೆ ಹಾಗೂ ಮನಸ್ಸಿನಲ್ಲಿ ಉಳಿಯುವ ಕಥೆಗಳಾಗುತ್ತವೆ. ಕ್ಯಾನ್ಸರ್ ಕೇವಲ ವೈದ್ಯಕೀಯ ರೋಗನಿರ್ಣವಾಗಿರದೇ, ಅದೊಂದು ಆಳವಾದ ವೈಯಕ್ತಿಕ ವಿಷಯ. ಪ್ರತಿಯೊಂದು ಕ್ಯಾನ್ಸರ ರೋಗಿಯ ಹಿಂದೆ ಒಂದು ಅನನ್ಯ ಕಥೆಯು ಜನ್ಮತಾಳುತ್ತದೆ. ದುಃಖಭರಿತ ಜೀವನ, ನೋವು, ಚಿಕಿತ್ಸೆ, ಪ್ರೀತಿಯ ಕಥೆಗಳಿರುತ್ತವೆ. ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯ ಅನನ್ಯವಾಗಿರುವ ಅಗತ್ಯಗಳನ್ನು ಸಂಪೂರ್ಣವಾಗಿ ಕಲ್ಪಿಸಲು ಕೇಂದ್ರಿತ ವಿಧಾನದೊಂದಿಗೆ ಸಹಾನುಭೂತಿ ಹಾಗೂ ಮಾನವೀಯ ನೆಲೆಗಟ್ಟಿನಲ್ಲಿ ಕ್ಯಾನ್ಸರ ರೋಗಿಗೆ ಚಿಕಿತ್ಸೆ ನೀಡುತ್ತ ಆರೈಕೆ ನೀಡಲಾಗುತ್ತದೆ. ಕ್ಯಾನ್ಸರ ರೋಗದೊಂದಿಗಿನ ಪಯಣವು ಅತ್ಯಂತ ವಿಶಿಷ್ಠವಾದ ರೋಗದ ಆಚೆಯು ಕೂಡ ವ್ಯಕ್ತಿಯನ್ನು ನೋಡುವ ಹಾಗೂ ನಮ್ಮೆಲ್ಲರನ್ನೂ ಒಗ್ಗೂಡಿಸುವದೇ ಯುನೈಟೆಡ್ ಬೈ ಯುನಿಕನ ಮಹೋನ್ನತ ಉದ್ದೇಶ.
ಭಾರತ–ದೊಡ್ಡ ಕ್ಯಾನ್ಸರ್ ಹೊರೆ
ಭಾರತದಲ್ಲಿ 2022ರಲ್ಲಿ ಸುಮಾರು 14.61 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿದ್ದವು. ಒಂಬತ್ತು ಜನರಲ್ಲಿ ಓರ್ವ ವ್ಯಕ್ತಿಯಲ್ಲಿ ಕ್ಯಾನ್ಸರ ಕಂಡು ಬರುವ ಸಾಧ್ಯತೆ ಇದೆ. 68 ಪುರುಷರಲ್ಲಿ ಒಬ್ಬರಿಗೆ ಶ್ವಾಸಕೋಶ, 29 ಮಹಿಳೆಯರಲ್ಲಿ ಓರ್ವ ಮಹಿಳೆಗೆ ಸ್ತನ ಕ್ಯಾನ್ಸರ ಕಂಡು ಬರುತ್ತಿದೆ. ನಿರಂತರ ಚಿಕಿತ್ಸೆಯ ದುಬಾರಿ ವೆಚ್ಚವು ಆರ್ಥಿಕವಾಗಿ ಸಾಕಷ್ಟು ಹೊರೆಯಾಗುತ್ತದೆ. ಇದರಿಂದ ಸಾಮಾಜಿಕವಾಗಿಯೂ ದುರ್ಬಲರಾಗುತ್ತಾರೆ.
ಕ್ಯಾನ್ಸರ್ ಗುಣಪಡಿಸಬಹುದೇ :-
ಸಾಮಾನ್ಯವಾಗಿ ಕ್ಯಾನ್ಸರ ರೋಗವು ಆರಂಭಿಕ ಹಂತದಲ್ಲಿ ಕಂಡುಬಂದರೆ ಅದಕ್ಕೆ ಅಗತ್ಯವಿರುವ ಚಿಕಿತ್ಸೆ ನೀಡಿ, ಶೇ. 75 ರಷ್ಟು ಗುಣಪಡಿಸಬಹುದು. ಗುಣಮುಖರಾಗಿ ಬದುಕುಳಿದವರು, ಸಾಮಾನ್ಯರಂತೆ ಜೀವನ ನಡೆಸುತ್ತ ಸಮಾಜದಲ್ಲಿ ಮಾದರಿಯಾಗಬಹುದು. ಆದ್ದರಿಂದ, ಸಾಧ್ಯವಿರುವ ಪ್ರತಿಯೊಂದು ಆರಂಭಿಕ ರೋಗಪತ್ತೆಯು ಪ್ರಾಮುಖ್ಯತೆ ಪಡೆದಿರುತ್ತದೆ.
ಕ್ಯಾನ್ಸರ್ ರೋಗಪತ್ತೆ ಹೇಗೆ?
ಸಾಮಾನ್ಯ ಕ್ಯಾನ್ಸರನ ಅಗತ್ಯ ತಪಾಸಣೆ ಮೂಲಕ ಆರಂಭಿಕ ಹಂತದಲ್ಲಿಯೇ ರೋಗಪತ್ತೆ ಮಾಡಬಹುದು. ಬಾಯಿ ಮತ್ತು ಗರ್ಭಾಶಯ, ಗರ್ಭಕಂಠದ ಅಂಗಾಂಶಗಳಲ್ಲಾಗುವ ಬದಲಾವಣೆಗಳ ನಿರಂತರ ಪ್ರಕ್ರಿಯೆಯಿಂದ ಕ್ಯಾನ್ಸರ ಪರಿವರ್ತನೆಯಾಗಬಹುದು. ಅದರ ಬದಲಾವಣೆಗಳನ್ನು ಸಾಕಷ್ಟು ಮುಂಚಿತವಾಗಿ ಪತ್ತೆಹಚ್ಚಲು ಒಂದು ಚಿಕ್ಕದಾದ ಬಯಾಪ್ಸಿ ಮೂಲಕ ಸಾಧ್ಯವಾಗುತ್ತದೆ. ಕ್ಯಾನ್ಸರ್ ಸ್ಕ್ರೀನಿಂಗ್ ಹಲವಾರು ವಿಧಾನಗಳಿವೆ. ಸಾಮಾನ್ಯವಾಗಿ
ಕ್ಯಾನ್ಸರ್ ತಡೆಗಟ್ಟುವಿಕೆ :ದಿನನಿತ್ಯದ ಜೀವನಶೈಲಿಯನ್ನು ಬದಲಿಸುವದರ ಮೂಲಕವೂ ಶೇ. 40ರಷ್ಟು ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಸುಮಾರು ಕ್ಯಾನ್ಸರ್ ರೋಗಗಳು ತಂಬಾಕು ಮತ್ತು ಮದ್ಯ ಸೇವನೆಯ ನಂಟು ಹೊಂದಿವೆ.. ಗರ್ಭಕಂಠದ ಕ್ಯಾನ್ಸರ ರೋಗವು ಹೆಚಪಿವಿ ಸೋಂಕಿನಿಂದ ಉಂಟಾಗುತ್ತದೆ. 14 ವರ್ಷದೊಳಗಿನ ಬಾಲಕಿಯರಿಗೆ ಹೆಚ್ ಪಿ ವಿ ಚುಚ್ಚುಮದ್ದು ನೀಡುವದರ ಮೂಲಕ ಇದನ್ನು ತಡೆಗಟ್ಟಬಹುದು.
ರೋಗದ ಲಕ್ಷಣಗಳು – ಎಚ್ಚರಿಕೆ
- ಕರುಳು / ಮೂತ್ರಕೋಶದಲ್ಲಿನ ತೊಂದರೆ,
- ವಾಸಿಯಾಗದ ಹುಣ್ಣು
- ಅಸಾಮಾನ್ಯ ರಕ್ತಸ್ರಾವ ಅಥವಾ ಸ್ರವಿಸುವಿಕೆ
- ಸ್ತನದಲ್ಲಿ ಗಡ್ಡೆ
- ಸೇವಿಸಲು ಕಷ್ಟವಾಗುವುದು ಅಥವಾ
ಸಾಮಾಜಿಕ–ಆರ್ಥಿಕ ಪರಿಣಾಮಗಳು?
ಕ್ಯಾನ್ಸರ ಪೀಡಿತ ರೋಗಿಯ ದುಬಾರಿ ಚಿಕಿತ್ಸಾ ವೆಚ್ಚದಿಂದ ಕುಟುಂಬವು ಆರ್ಥಿಕವಾಗಿ ಜರ್ಜರಿತವಾಗುತ್ತದೆ. ಇದರಿಂದ ಮಾನಸಿಕವಾಗಿಯೂ ಕುಗ್ಗಿಹೋಗುವು ಕುಟುಂಬವು ಸಾಮಾಜಿಕವಾಗಿಯೂ ಹಿಂಜರಿಯುತ್ತದೆ. ಚಿಕಿತ್ಸೆಯ ಅಡ್ಡಪರಿಣಾಮದಿಂದ ಮಾನಸಿಕವಾಗಿ ಕುಗ್ಗಿಹೋಗುವ ರೋಗಿ ಮತ್ತು ಕುಟುಂಬವು ಸಾಮಾಜಿಕವಾಗಿ ತೊಂದರೆ ಅನುಭವಿಸುತ್ತದೆ. ಆರ್ಥಿಕ ವೆಚ್ಚ ಹಾಗೂ ದೂರದ ಕಾರಣ ವಿಶ್ವದ ಕ್ಯಾನ್ಸರ ಪೀಡಿತ ಜನಸಂಖ್ಯೆಯ ಅರ್ಧದಷ್ಟು ಜನರು ಪೂರ್ಣ ಪ್ರಮಾಣದ ಅಗತ್ಯ ಚಿಕಿತ್ಸೆ ಹಾಗೂ ಆರೈಕೆಯಿಂದ ವಂಚಿತವಾಗುತ್ತದೆ. ಆದ್ದರಿಂದ ಯೂನಿಯನ್ ಫಾರ್ ಇಂಟರನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ 2022 – 2024 ರ ವಿಶ್ವ ಕ್ಯಾನ್ಸರ್ ದಿನವನ್ನು “ಕ್ಲೋಸ್ ದಿ ಕೇರ್ ಗ್ಯಾಪ್” ಎಂಬ ಘೋಷವಾಕ್ಯದಡಿ ಜಾಗೃತಿ ಮೂಡಿಸಿತ್ತು.
ಕ್ಯಾನ್ಸರ್ ಗೆ ಕಾರಣವಾಗುವ ಪ್ರಮುಖ ಅಂಶಗಳು :
ಧೂಮಪಾನ
ಧೂಮಪಾನವು ಕ್ಯಾನ್ಸರ ಸೇರಿದಂತೆ ದೀರ್ಘಕಾಲೀನ ಖಾಯಿಲೆಗಳಿಗೆ ಕಾರಣವಾಗಬಹುದು. ಶ್ವಾಸಕೋಶದ ಮೇಲೆ ನಕಾರಾತ್ಮಕ ಪರಿಣಾಮ ಬೀರಿ ಮಾರಣಾಂತಿಕ ಖಾಯಲೆಗಳಿಗೆ ಆಹ್ವಾನ ನೀಡುತ್ತದೆ. ಭಾರತದಲ್ಲಿ ತಂಬಾಕು ಸೇವನೆಯಿಂದ ಕ್ಯಾನ್ಸರ ಸಾಮಾನ್ಯ ಎಂಬಾಂತಾಗಿದೆ.
ಶ್ರಮ ರಹಿತ ಜೀವನ
ಯಾವುದೇ ದೈಹಿಕ ಚಟುವಟಿಕೆಯಲ್ಲಿ ತೊಡಗದೆ ಶ್ರಮ ರಹಿತ ಜೀವನವೂ ಕೂಡ ಕ್ಯಾನ್ಸರ ತಂದೊಡ್ಡುವ ಅಪಾಯ ಅಧಿಕವಾಗಿರುತ್ತದೆ. ಆದ್ದರಿಂದ ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ಇದರಿಂದ ಕ್ಯಾನ್ಸರ್ ಬೆಳವಣಿಗೆಯ ಸಾಧ್ಯತೆ ಕಡಿಮೆ. ವ್ಯಾಯಾಮವು ಶ್ವಾಸಕೋಶದ ಕ್ಯಾನ್ಸರ ಮತ್ತು ಅದರ ಅಪಾಯವನ್ನು ಕಡಿಮೆಗೊಳಿಸುತ್ತದೆ.
ಬೊಜ್ಜು
ದೇಹದ ಬೊಜ್ಜು ಕೂಡ ಕ್ಯಾನ್ಸರಗೆ ಮುಖ್ಯ ಕಾರಣ. ಸ್ತನ, ಗುದನಾಳ, ಯಕೃತ, ಎಂಡೊಮೆಟ್ರಿಯಲ್, ಅನ್ನನಾಳದ, ಮೇದೋಜ್ಜೀರಕ ಗ್ರಂಥಿ, ಮೂತ್ರಪಿಂಡದ ಕ್ಯಾನ್ಸರ ಕಾಣಿಸುವ ಅಪಾಯವಿದೆ.
ಹೆಚ್ಚುವರಿ ಸೂರ್ಯನ ಮಾನ್ಯತೆ: ಪ್ರಖರವಾದ ಬಿಸಿಲಿಗೆ ನಿರಂತರವಾಗಿ ಮೈಒಡ್ಡುವದರಿಂದಲೂ ಚರ್ಮ ಕ್ಯಾನ್ಸರ ಬರಬಹುದು.
ಅತಿಯಾದ ಮದ್ಯಪಾನ: ಮದ್ಯಪಾನವು ಉದ್ರೇಕಕಾರಿಯಾಗಿರುವದರಿಂದ ಜೀವಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಕ್ಯಾನ್ಸರಗೆ ಕಾರಣವಾಗುವ ಕೊಲೊನ ಉತ್ಪಾದಿಸುತ್ತದೆ. ಆದ್ದರಿಂದ ಮಿತಸೇವನೆ ಇರಲಿ.
ಸೋಂಕುಗಳು: ಕೆಲವು ಸೋಂಕುಗಳೂ ಕೂಡ ದೀರ್ಘಕಾಲದ ಉರಿಯೂತವನ್ನುಂಟು ಮಾಡಿ ಈತರ ಸೋಂಕುಗಳಿಗೆ ಕಾರಣವಾಗುತ್ತದೆ. ಅಲ್ಲದೇ ಕ್ಯಾನ್ಸರ ಕೂಡ ಬಂದೆರಗುವ ಸಾಧ್ಯತೆ ಅಧಿಕವಾಗಿರುತ್ತದೆ.
ಜನರು ಯಾವ ಸಂದೇಶವನ್ನು ತೆಗೆದುಕೊಂಡು ಹೋಗಬೇಕು?
ಕ್ಯಾನ್ಸರ ಒಂದೇ ರೋಗದ ಘಟಕವಲ್ಲ ಅದೊಂದು ಗುಂಪು. ಆದ್ದರಿಂದ ಎಲ್ಲ ಕ್ಯಾನ್ಸರ್ ರೋಗಿಗಳಿಗೆ ಒಂದೇ ರೀತಿಯ ಚಿಕಿತ್ಸೆ ಮತ್ತು ಫಲಿತಾಂಶವನ್ನು ಹೊಂದಿರುವುದಿಲ್ಲ. ಆದ್ದರಿಂದ ಚಿಕಿತ್ಸೆಗಿಂತ ತಡೆಗಟ್ಟವಿಕೆಯ ಮುಖ್ಯ. ಕ್ಯಾನ್ಸರನ ಆರಂಭಿಕ ಚಿಹ್ನೆಗಳು ನಿರ್ದಿಷ್ಟವಾಗಿಲ್ಲದಿರಬಹುದು, ಆದ್ದರಿಂದ ಸೂಕ್ತ ತಪಾಸಣೆ ಮತ್ತು ಚಿಕಿತ್ಸೆಯು ಅತ್ಯಗತ್ಯವಾಗಿ ಬೇಕಾಗುತ್ತದೆ. ಅತ್ಯಂತ ದುಬಾರಿ ಚಿಕಿತ್ಸೆಯನ್ನು ನೋಡದೇ ಸೂಕ್ತ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು.
ಕ್ಯಾನ್ಸರ ರೋಗದ ಕುರಿತು ಸಾಮಾನ್ಯವಾಗಿರುವ ತಪ್ಪು ಕಲ್ಪನೆಗಳಿಂದ ಹೊರಬನ್ನಿ. ನಮ್ಮ ಪರಿಸರದ ಸುತ್ತಮುತ್ತವಿರುವ ಸರಿಯಾದ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಮುಖ್ಯವಾಗಿ ನಮ್ಮ ಭಯವನ್ನು ಹೋಗಲಾಡಿಸಿ, ಘನತೆ, ಗೌರವದೊಂದಿಗೆ ಕ್ಯಾನ್ಸರ ಚಿಕಿತ್ಸೆಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ.
ಕೆಎಲ್‌ಇ ಡಾ.ಸಂಪತ್‌ಕುಮಾರ್ ಎಸ್.ಶಿವನಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಯಾವುದೇ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲು ಎಲ್ಲಾ ಆಧುನಿಕ ಸೌಲಭ್ಯವಿದೆ. ಒಂದೇ ಸೂರಿನಡಿ, ಇದು 5 ಅತ್ಯಾಧುನಿಕ ಶಸ್ತ್ರಚಿಕಿತ್ಸಾ (ಆಪರೇಷನ್ ಥಿಯೇಟರ್) ಕೊಠಡಿಗಳನ್ನು ಹೊಂದಿದ್ದು, ಇದರಲ್ಲಿ ರೊಬೊಟಿಕ್ ಶಸ್ತ್ರಚಿಕಿತ್ಸೆ, ರೆಡಿಯೋಥೆರಪಿ ಯಂತ್ರಗಳು, ಅಸ್ಥಿಮಜ್ಜೆ ಕಸಿ, ಮ್ಯಾಮೊಗ್ರಫಿ, ಸಿಟಿ ಮತ್ತು ಎಂಆರ್ ಐ ಸ್ಕ್ಯಾನ್, ಸೇರದಂತೆ ಸಕಲ ವ್ಯವಸ್ಥೆಯನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ