Kannada NewsKarnataka News

ಬೆಳಗಾವಿಯ 754 ಎಕರೆ ಜಮೀನು ಶೀಘ್ರ ರಾಜ್ಯ ಸರಕಾರದ ವಶಕ್ಕೆ – ಸಿಎಂ ಬೊಮ್ಮಾಯಿ ವಿಶ್ವಾಸ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಹೊರವಲಯದಲ್ಲಿರುವ ಹಿಂಡಾಲ್ಕೋ ಬಳಿಯ 754 ಎಕರೆ ಭೂಮಿಯನ್ನು ಆದಷ್ಟು ಶೀಘ್ರ ರಾಜ್ಯ ಸರಕಾರದ ತನ್ನ ವಶಕ್ಕೆ ಪಡೆಯಲಿದೆ ಎನ್ನುವ ವಿಶ್ವಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಕಳೆದ ವಾರ ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಮಿಲ್ಚ್ರಿ ವಶದಲ್ಲಿರುವ ಈ ಜಮೀನಿನ ಕುರಿತು ಶೀಘ್ರ ವಿಚಾರಿಸಿ, ಕರ್ನಾಟಕ ಸರಕಾರಕ್ಕೆ ಹಸ್ತಾಂತರಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

Home add -Advt

ಶಾಸಕ ಅಭಯ ಪಾಟೀಲ ಈ ಜಮೀನಿನ ಕುರಿತು ಮುಖ್ಯಮಂತ್ರಿಗಳ ಮೇಲೆ ನಿರಂತರ ಒತ್ತಡ ಹೇರುತ್ತಿರುವುದನ್ನು ಇಲ್ಲಿ ಸ್ಮರಿಸಬಹುದು.

ಬೈಲಹೊಂಗಲದ ಸಂಗೊಳ್ಳಿ ರಾಯಣ್ಣ ಮಿಲ್ಟ್ರಿ ಸ್ಕೂಲ್ ನ್ನು ಸ್ಥಳೀಯ ಮಿಲ್ಟ್ರಿ ಸೈನಿಕ ಶಾಲೆಯ ವಶಕ್ಕೆ ಪಡೆಯುವ ಕುರಿತು ಸಹ ಕೇಂದ್ರ ರಕ್ಷಣಾ ಸಚಿವರ ಬಳಿ ಮನವಿ ಮಾಡಿದ್ದೇನೆ. ಅವರು ತಕ್ಷಣ ಸ್ಪಂದಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಹಿಜಾಬ್ ವಿವಾದ ನ್ಯಾಯಾಲಯದಲ್ಲಿದೆ. ರಾಜ್ಯ ಸರಕಾರದ ಮೊದಲ ಆದ್ಯತೆ ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

ಬಜೆಟ್ ಸಭೆಗಳು ನಡೆದಿವೆ. ಇನ್ನೂ 2 ದಿನ ಸಭೆಗಳು ನಡೆಯಲಿವೆ. ಸಂಪನ್ಮೂಲ ಆಧರಿಸಿ ಆದ್ಯತೆಯ ಮೇಲೆ ಯೋಜನೆಗಳ ಘೋಷಣೆಯಾಗಲಿದೆ ಎಂದು ಸಿಎಂ ತಿಳಿಸಿದರು.

ಕೆಎಲ್ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೊರೆ, ಶಾಸಕ ದುರ್ಯೋಧನ ಐಹೊಳೆ ಸೇರಿದಂತೆ ಹಲವಾರ ಮುಖಂಡರು ಇದ್ದರು.

ಐಪಿಎಲ್ ಹರಾಜು ಪ್ರಕ್ರಿಯೆ ಆರಂಭ; ಯಾವ ಆಟಗಾರರು ಎಷ್ಟು ಮೊತ್ತಕ್ಕೆ ಯಾವ ತಂಡದ ಪಾಲು?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button