ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಸಂಕೇಶ್ವರ-ವಿಜಯಪುರ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೇಗೇರಿಸಿ ರಾಷ್ಟ್ರಿಯ ಹೆದ್ದಾರಿಯನ್ನಾಗಿಸಲು ನಾಲ್ಕು ಹಂತದಲ್ಲಿ ಯೋಜನೆ ರೂಪಿಸಲಾಗಿದ್ದು ವಿಜಯಪುರದಿಂದ ಮುರಗುಂಡಿ ಗ್ರಾಮದವರೆಗಿನ ಎರಡು ಹಂತದಲ್ಲಿನ ೮೦ ಕೀ.ಮೀ. ದ್ವಿಪಥ ರಸ್ತೆ ಕಾಮಗಾರಿಗೆ ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ೭೬೬.೬೪ ಕೋಟಿ ರೂ.ಗಳನ್ನು ಅನುದಾನ ಮಂಜೂರು ಮಾಡಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು.
ಚಿಕ್ಕೋಡಿ ಪಟ್ಟಣದಲ್ಲಿರುವ ಬಿಜೆಪಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಚಿಕ್ಕೋಡಿ ಲೋಕಸಭೆ ಕ್ಷೇತ್ರದ ೪೦ ಕೀಮೀ ಹಾಗೂ ವಿಜಯಪುರ ಜಿಲ್ಲೆಯಲ್ಲಿನ ೪೦ ಕೀ.ಮೀ ರಸ್ತೆ ನಿರ್ಮಾಣ ಕಾಮಗಾರಿಗೆ ಈಗಾಗಲೇ ಕೇಂದ್ರ ಸರಕಾರ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಸಂಕೇಶ್ವರ ವಿಜಯಪುರ ರಾಜ್ಯ ಹೆದ್ದಾರಿಯನ್ನು ರಾಷ್ಟೀಯ ಹೆದ್ದಾರಿಯನ್ನಾಗಿ ರಸ್ತೆ ಕಾಮಗಾರಿಯನ್ನು ೪ ಹಂತದಲ್ಲಿ ಕೈಗೊಳ್ಳಲಾಗುತ್ತಿದ್ದು, ಮೊದಲ ಹಂತದಲ್ಲಿ ವಿಜಯಪುರದಿಂದ ಸಾವಳಗಿ ಕ್ರಾಸ್‌ವರೆಗೆ ೨ನೇ ಹಂತದಲ್ಲಿ ಸಾವಳಗಿ ಕ್ರಾಸ್‌ದಿಂದ ಮುರಗುಂಡಿವರೆಗೆ, ೩ನೇ ಹಂತದಲ್ಲಿ ಮುರಗುಂಡಿಯಿAದ ಶಿರಗುಪ್ಪಿವರೆಗೆ ನಂತರ ೪ ನೇ ಹಂತದಲ್ಲಿ ಶಿರಗುಪ್ಪಿಯಿಂದ ಗೋಟೂವರೆಗೆ ಹೀಗೆ ನಾಲ್ಕು ಹಂತದಲ್ಲಿ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಸದ್ಯ ಎರಡು ಹಂತದ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ ಎಂದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುರಗುಂಡಿ ಇಂದ ಸಂಕೇಶ್ವರ ವರೆಗೆ ಟ್ರಾಪಿಕ್ ಹೆಚ್ಚು ಇರುವದರಿಂದ ೪ ಲೆನ್ ನಿರ್ಮಾಣಕ್ಕಾಗಿ ಕೇಂದ್ರ ಸಾರಿಗೆ ಸಚಿವರಿಗೆ ನಿತಿನ ಗಡ್ಕರಿ ಅವರಿಗೆ ಮನವಿ ಮಾಡಲಾಗಿದ್ದು. ಈ ಕುರಿತು ಈಗಾಗಲೇ ಡಿಪಿಆರ್ ಮಾಡಲಾಗುತ್ತಿದೆ. ಅಲ್ಲಿಯವರೆಗೆ ರಸ್ತೆ ಸುಧಾರಣೆಗಾಗಿ ೨೧.೮೮ ಕೋಟಿ ರೂಗಳ ಅನುದಾನ ಮಂಜೂರಾಗಿದ್ದು ಇದಕ್ಕೂ ಸಹ ಟೆಂಡರ್ ಅವ್ಹಾನಿಸಲಾಗಿದೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರವರು ವಾದ ಮಂಡಿಸಿರುವ ಚಿಕ್ಕೋಡಿ ಐತಿಹಾಸಿಕ ನ್ಯಾಯಾಲಯದ ನೂತನ ಕಟ್ಟಡ ನಿರ್ಮಾಣಕ್ಕಾಗಿ ೩೨ ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ. ಶೀಘ್ರದಲ್ಲಿಯೇ ಕಟ್ಟಡ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ನ್ಯಾಯಾಲಯ ಸಂಕೀರ್ಣಗಳ ನೀಲ ನಕ್ಷೆಯನ್ನು ಪ್ರದರ್ಶಿಸಿ ಜಿ+೩ ಮಾದರಿಯಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು ಕೋರ್ಟಹಾಲ ,ಕಕ್ಷಿದಾರರ ಕೊಠಡಿ,ಕಚೇರಿ ನಿರ್ವಹಣೆ,ಕಂಪ್ಯೂಟರ್ ಕೊಠಡಿ, ಇ-ಗ್ರಂಥಾಲಯ, ನ್ಯಾಯಾಧೀಶರಿಗೆ ವಿಶೇಷ ರೂಮಗಳು ಹಾಗೂ ನ್ಯಾಯಾಲಯ ವಶಕ್ಕೆ ಪಡೆದಿರುವ ಕೈದಿಗಳ ಬಂಧಿಖಾನೆ,ವಕೀಲ ವಿಶ್ರಾಂತಿ ಗೃಹ,ಮಹಿಳೆಯರಿಗೆ ವಿಶೇಷ ಕೋಠಡಿ ಸೇರಿದಂತೆ ಎಲ್ಲ ಮೂಲ ಸೌಲಭ್ಯಗಳು, ಆಧುನಿಕ ತಂತ್ರಜ್ಞಾನ ಅಳವಡಿಸಿ ಸುಸುಜ್ಜಿತ ಹಾಗೂ ಜಿಲ್ಲೆಯಲ್ಲಿಯೇ ತಾಲೂಕಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ನ್ಯಾಯಾಲಯ ಸಂಕೀರ್ಣ ಇದಾಗಲಿದೆ ಎಂದು ತಿಳಿಸಿದರು.
ನಿಪ್ಪಾಣಿ ನಗರಸಭೆ ಅಧ್ಯಕ್ಷ ಪ್ರವೀಣ ಭಾಟಲೆ, ಸಂಜಯ ಅರಗೆ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ