
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ 2025ರ ಆಗಸ್ಟ್ 15ರಂದು ಸ್ಕೇಟಿಂಗ್ ರ‍್ಯಾಲಿ ಆಯೋಜಿಸಲಾಯಿತು. ಬೆಳಗಾವಿ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್‌ನ ಸ್ಕೇಟರ್‌ಗಳು ಈ ರ‍್ಯಾಲಿಯಲ್ಲಿ ಭಾಗವಹಿಸಿದರು. ರ‍್ಯಾಲಿಯ ಮುಖ್ಯ ಉದ್ದೇಶ “ಹರ್ ಘರ್ ತಿರಂಗಾ, ವಂದೇ ಮಾತರಂ, ಭಾರತ ಮಾತಾ ಕಿ ಜಯ” ಆಗಿತ್ತು.
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಡೆದ ಈ ಸ್ಕೇಟಿಂಗ್ ರ‍್ಯಾಲಿಯಲ್ಲಿ ಸುಮಾರು 3ರಿಂದ 20 ವರ್ಷದ ವಯಸ್ಸಿನ 40ಕ್ಕೂ ಹೆಚ್ಚು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿ ಸ್ಕೇಟರ್‌ಗಳು ಭಾಗವಹಿಸಿದರು. ಈ ರ‍್ಯಾಲಿಗೆ ಸ್ಕೇಟಿಂಗ್ ಕೋಚ್ ಸುರ್ಯಕಾಂತ ಹಿಂದಲ್ಗೇಕರ್, ತುಕಾರಾಮ ಪಾಟೀಲ, ಸೋಹಮ್ ಹಿಂದಲ್ಗೇಕರ್, ಶ್ರೀ ಭಂಡಾರೆ, ಶ್ರೀ ಲೋಹಾರ್ ಹಾಗೂ ಇತರ ಗಣ್ಯರು ಚಾಲನೆ ನೀಡಿದರು.
ಭಾಗವಹಿಸಿದ ಸ್ಕೇಟರ್‌ಗಳ ಹೆಸರುಗಳು:
ಸೌರಭ ಸಲೋಖೆ, ಅನಘಾ ಜೋಶಿ, ಪ್ರಸನ್ನ ವಾಣಿ, ಋಷಿಕೇಶ್ ಪಾಸರೆ, ಸುಕನ್ಯಾ ಕುಪಾಣಿ, ಪಂಕಜ್ ಕುಪಾಣಿ, ರಿತೇಶ್ ದೊಡ್ಡಮಣಿ, ಋತ್ವಿಕ್ ದುಬಾಶಿ, ಆಶಿಷ್ ಅಂಗಡಿಕರ್, ಸಿದ್ದಾರ್ಥ ಪಾಟೀಲ, ಪ್ರೀತಮ್ ಬಾಗೇವಾಡಿ, ಶಲ್ಯಾ ತಾರ್ಲೇಕರ್, ಗೌರವ ಲೋಹಾರ್, ದೇವಾಂಶ ಜಾಧವ, ಲಾವಣ್ಯ ಭಂಡಾರೆ, ದಿವ್ಯಾ ಭಂಡಾರೆ, ದೃಶಾ ಸಂಭಾಜಿ, ಗಗನ್ ಜೈನ್, ಪೃಥ್ವಿರಾಜ್ ಎನ್‌ಡಿ, ಬಡಿಗಾರ ಧನುಷ್ ಆಚಾರ್ಯ, ರಿವಾ ನಾಯಕ್, ಪ್ರಣಿಕಾ ಮೊಟೇಕರ್.
ಬೆಳಗಾವಿ ರೋಲರ್ ಸ್ಕೇಟಿಂಗ್ ಅಕಾಡೆಮಿ ಸ್ಕೇಟರ್‌ಗಳು ಮತ್ತು ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.