Belagavi NewsBelgaum News

*ಹಾರುಗೇರಿ ಕೊಲೆ ಪ್ರಕರಣ: 8 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಸಹೋದರನ್ನು ಅಪಹರಣ ಮಾಡಿ ಕೊಲೆ ಮಾಡಿದ ಪ್ರಕರಣದಲ್ಲಿ ಹಾರೋಗೇರಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜೂ.4 ರಂದು ಹಾರೋಗೇರಿಯ ಸುಲ್ತಾನಪುರ ಗ್ರಾಮದ ಈರಪ್ಪ ಚೌಗುಲಾ ಕಾಣೆಯಾಗಿದ್ದ ಎಂದು ಪ್ರಕರಣ ದಾಖಲಿಸಿದ್ದರು. ಆದರೆ ಬಾಗಲಕೋಟ ಜಿಲ್ಲೆಯಲ್ಲಿ ಶವ ಪತ್ತೆಯಾಗಿತ್ತು. ನಮ್ಮ ಪೊಲೀಸರು ಎಲ್ಲ ಆಯಾಮದಿಂದ ತನಿಖೆ ನಡೆಸಿ ಕೊಲೆ ಮಾಡಿದ ಸಹೋದರ ಶ್ರೀಶೈಲ್ ಚೌಗುಲಾ ಹಾಗೂ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಸೇರಿದಂತೆ 8 ಜನರನ್ನು ಬಂಧಿಸಿದ್ದಾರೆ ಎಂದರು.

ಬಾಗಲಕೋಟ ಜಿಲ್ಲೆಯ ಬಿಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈರಣ್ಣನ ಶವವನ್ನು ಎಸೆದು ಪರಾರಿಯಾಗಲು ಯತ್ನಿಸಿದ್ದರು. ಸಹೋದರರ ನಡುವೆ ಜಮೀನಿನ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಒಂದು ಎಕರೆ ಜಮೀನು ಮಾರಾಟ ಮಾಡುವ ವಿಷಯದಲ್ಲಿ ಈರಣ್ಣ ಹಾಗೂ ಶ್ರೀಶೈಲ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಜಮೀನು ಮಾರಾಟ ಮಾಡಬಾರದು ಎನ್ನುವುದು ಶ್ರೀಶೈಲ್‌ನದ್ದಾಗಿದ್ದು, ಕೊಲೆ ಮಾಡಿದ ಸಹೋದರ ಶ್ರೀಶೈಲ್ ಸೇರಿದಂತೆ 8 ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರು ಮಾಹಿತಿ ನೀಡಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button