Latest

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಹಠಾತ್ ಪ್ರವಾಹ; ಕನಿಷ್ಠ 8 ಸಾವು, ಹಲವರು ನಾಪತ್ತೆ

ಪ್ರಗತಿವಾಹಿನಿ ಸುದ್ದಿ, ಕೋಲ್ಕೊತ್ತಾ: ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಮಾಲ್ ನದಿಗೆ ಹಠಾತ್ ಪ್ರವಾಹ ಅಪ್ಪಳಿಸಿ ಕನಿಷ್ಠ ಎಂಟು ಜನರು ಮೃತಪಟ್ಟಿದ್ದು ಹಲವರು ನಾಪತ್ತೆಯಾಗಿದ್ದಾರೆ.

ಎಲ್ಲ ಜನ ಮೂರ್ತಿ ವಿಸರ್ಜನೆ ಸಂಭ್ರಮದಲ್ಲಿದ್ದಾಗಲೇ ನದಿಯಲ್ಲಿ ಏಕಾಏಕಿ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹಸದೃಶವಾಯಿತು. ಈ ವೇಳೆ ಹಲವರು ಅರಿವಿಲ್ಲದಂತೆ ನೀರುಪಾಲಾದರು.

ಘಟನೆಯ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. “ನಾವು ಸುಮಾರು 50 ಜನರನ್ನು ರಕ್ಷಿಸಿದ್ದೇವೆ” ಎಂದು ಡಿಎಂ ಮೌಮಿತಾ ಗೋಡಾರಾ ಹೇಳಿದ್ದಾರೆ.

ಈ ಕುರಿತು ಸಂತಾಪ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ, “ಜಲ್ಪೈಗುರಿಯಲ್ಲಿ ದುರ್ಗಾ ಪೂಜೆಯ ಸಂದರ್ಭದಲ್ಲಿ ನಡೆದ ದುರ್ಘಟನೆಯಿಂದ ದುಃಖವಾಗಿದೆ” ಎಂದು ಹೇಳಿದ್ದಾರೆ.

https://pragati.taskdun.com/latest/jammu-kashmirbus-accident8-death/

https://pragati.taskdun.com/latest/actress-deepika-padukone-says-trip-to-us-would-upset-her/

https://pragati.taskdun.com/latest/mysore-dasaracm-basavaraj-bommaideepalankara/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button