ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ರಾಜ್ಯ ಮಟ್ಟದ ರೋಪ್ ಸ್ಕೈಪಿಂಗ್ 82 ಪದಕಗಳನ್ನು ಗೆದ್ದಿದ್ದಾರೆ.
ಬಾಗಲಕೋಟೆಯ ಕೂಡಲಸಂಗಮದಲ್ಲಿ ನಡೆದ 2018-19 ನೇ ಸಾಲಿನ ನಾಲ್ಕನೇ ರಾಜ್ಯ ಮಟ್ಟದ ಹಿರಿಯ ಮತ್ತು ಕಿರಿಯರ ವಿಭಾಗದಲ್ಲಿ ರೋಪ್ ಸ್ಕೈಪಿಂಗ್ ಕ್ರಿಡೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಸೈನಿಕ ಶಾಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 27 ಚಿನ್ನದ ಪದಕ, 41 ಬೆಳ್ಳಿಯ ಪದಕ, 14 ಕಂಚಿನ ಪದಕಗಳನ್ನು ಪಡೆದುಕೊಂಡರು. ಒಟ್ಟು 36 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಅವರಲ್ಲಿ 27 ವಿದ್ಯಾರ್ಥಿನಿಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ