Kannada NewsKarnataka NewsNationalPoliticsTravelWorld

*ಪಹಲ್ಗಾಮ ದಾಳಿ ಬಳಿಕ 87 ಪ್ರವಾಸಿ ತಾಣ 48 ಗಂಟೆ ಬಂದ್*

ಪ್ರಗತಿವಾಹಿನಿ ಸುದ್ದಿ: ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲೆ  ಜಮ್ಮು ಮತ್ತು ಕಾಶ್ಮೀರದ 87 ಪ್ರವಾಸಿ ತಾಣಗಳಲ್ಲಿ 48 ತಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.

ಪ್ರವಾಸಿಗರಿಗೆ ಮುಕ್ತವಾಗಿರುವ 87 ತಾಣಗಳಲ್ಲಿ ಈಗ ಮುಚ್ಚಲಾಗಿರುವ ಪ್ರದೇಶಗಳು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ನೇರವಾಗಿ ಭಾಗಿಯಾಗಿವೆ ಅಥವಾ ದುರ್ಬಲವೆಂದು ಪರಿಗಣಿಸಲಾದ ಪ್ರದೇಶಗಳಲ್ಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Home add -Advt

ಮುಚ್ಚಲಾಗಿರುವ ಕೆಲವು ಪ್ರವಾಸಿ ತಾಣಗಳನ್ನು ಯಾವುವು ಎಂದು ನೋಡುವದಾರೆ ಕರಿವಾನ್ ಡೈವರ್ ಚಂಡಿಗಮ್, ಬಂಗುಸ್ ಕಣಿವೆ, ವುಲರ್/ವಾಟ್ಸಾಬ್, ಯೂಸ್ಮಾರ್ಗ್, ತೌಸಿಮೈದಾನ್, ದೂದ್‌ಪತ್ರಿ, ಅಹರ್ಬಲ್, ಕೌಸರ್ನಾಗ್, ಬಂಗುಸ್, ರಾಂಪೊರಾ ಮತ್ತು ರಾಜ್‌ಪೋರಾ, ಚಿಯರ್‌ಹಾ‌ರ್ ಸೇರಿವೆ.

ಅಧಿಕಾರಿಗಳ ಪ್ರಕಾರ, ತೆರೆದಿರುವ ಇತರ ಪ್ರವಾಸಿ ತಾಣಗಳನ್ನು ಕೂಡಾ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಆದರೆ ಆ ಪ್ರದೇಶಗಳಲ್ಲಿ ಪ್ರವಾಸಿಗರಿಗೆ ಯಾವುದೇ ನಿರ್ಬಂಧಗಳನ್ನು ವಿಧಿಸಲಾಗಿಲ್ಲ. ಪ್ರವಾಸಿಗರು ಮುಕ್ತವಾಗಿ ಇತರ ಪ್ರದೇಶಗಳಲ್ಲಿ ಸಮಯ ಕಳೆಯಬಹುದು ಎಂದಿದ್ದಾರೆ.

ಏಪ್ರಿಲ್ 22 ರಂದು ಪಹಲ್ಯಾಮ್‌ನಲ್ಲಿ ಡಜನ್‌ಗಟ್ಟಲೆ ಜನರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ, ಕನಿಷ್ಠ 26 ಜನರನ್ನು ಕೊಂದರು. ಅವರಲ್ಲಿ ಹೆಚ್ಚಿನವರು ಪ್ರವಾಸಿಗರೇ ಆಗಿದ್ದರು. 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

Related Articles

Back to top button