ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕೊರೋನಾ ವೈರಸ್ ನಿಂದಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಇನ್ನು 8 ದಿನಗಳ ಕಾಲ ಲಾಕ್ ಡೌನ್ ಘೋಷಿಸಲಾಗಿದೆ. ಬೆಳಗಾವಿಯಲ್ಲಿ ಕೊರೋನಾ ವೈರಸ್ ಪತ್ತೆಯಾಗದಿದ್ದರೂ ನೆರೆಯ ರಾಜ್ಯಗಳು ಅಪಾಯದಲ್ಲಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ.
ಉಳಿದಂತೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಜಿಲ್ಲೆಗಳೂ ಲಾಕ್ ಡೌನ್ ಆಗಿವೆ.
ಸೋಮವಾರ ಸಂಪೂರ್ಣ ರಾಜ್ಯದಲ್ಲಿ ಸಾರಿಗೆ ಸೇವೆ ಬಂದ್ ಆಗಿದೆ. ಲಾಕ್ ಡೌನ್ ಆದ 9 ಜಿಲ್ಲೆಗಳಲ್ಲಿ ಮಾರ್ಚ್ 31ರ ವರೆಗೂ ಸಾರಿಗೆ ಸೇವೆ ಇರುವುದಿಲ್ಲ. ಅಕ್ಕ ಪಕ್ಕದ ಜಿಲ್ಲೆಗಳ ವಾಹನಗಳಿಗೂ ಪ್ರವೇಶವಿರುವುದಿಲ್ಲ.
9 ಜಿಲ್ಲೆಗಳಲ್ಲಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಕೂಡ ಸ್ಥಗಿತವಾಗಿದೆ. ರೈಲುಗಳ ಸಂಚಾರವಿರುವುದಿಲ್ಲ.
9 ಜಿಲ್ಲೆಗಳಲ್ಲಿನ ಕೈಗಾರಿಕೆಗಳಲ್ಲಿ ದಿನಬಿಟ್ಟು ದಿನ ಅರ್ಧದಷ್ಟು ಕಾರ್ಮಿಕರನ್ನು ಬಳಸಿ ಕೆಲಸ ಮಾಡಲು ಸೂಚಿಸಲಾಗಿದೆ. ಅಗತ್ಯಸೇವೆ ಹೊರತುಪಡಿಸಿ ಎಲ್ಲ ನೌಕರರು ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ತಿಳಿಸಲಾಗಿದೆ.
ಆಹಾರ, ನ್ಯಾಯಬೆಲೆ ಅಂಗಡಿ, ಹಾಲು, ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ, ಆಸ್ಪತ್ರೆ, ಮೆಡಿಕಲ್ ಸ್ಟೋರ್‌ಗಳು, ಪ್ಯಾರಾ ಮೆಡಿಕಲ್, ಪತ್ರಿಕಾ ವಿತರಣೆ, ಮಾಧ್ಯಮ ಸೇವೆ, ದಿನಬಳಕೆ ವಸ್ತು ಸಾಗಾಟ, ಸರಕಾರಿ ಕಚೇರಿ, ಪೊಲೀಸ್, ನಗರ ಸ್ಥಳೀಯ ಸಂಸ್ಥೆ, ಪಂಚಾಯಿತಿ, ಅಂಚೆ, ಬ್ಯಾಂಕ್, ಎಟಿಎಂ, ದೂರವಾಣಿ, ಹೊಟೇಲ್‌ಗಳ ಪಾರ್ಸಲ್ ಸೇವೆ, ಸರಕಾರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಕ್ಯಾಂಟೀನ್ ಸೌಲಭ್ಯ ಇರಲಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ