Karnataka News

*ವಿಶ್ವ ದಾಖಲೆ ನಿರ್ಮಿಸಿದ 9 ತಿಂಗಳ ಮಗು!*

ಪ್ರಗತಿವಾಹಿನಿ ಸುದ್ದಿ: 9 ತಿಂಗಳ ಕಂದಮ್ಮ ಬರೋಬ್ಬರಿ 422 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಿರುವ ವಿಶೇಷ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ದೀಪಕ್ ಕಟ್ಟಿ ಹಾಗೂ ಅನುಷಾ ದಂಪತಿಯ ಪುತ್ರಿ 9 ತಿಂಗಳ ಐರಾ, ಹಲವು ದೇಶಗಳ ಧ್ವಜ, ವಿವಿಧ ವಸ್ತುಗಳನ್ನು ಗುರುತಿಸುವ ಮೂಲಕ ‘ಯಂಗೆಸ್ಟ್ ಚೈಲ್ಡ್ ಟು ಐಡೆಂಟಿಪೈ ದಿ ಮೋಸ್ಟ್ ನಂಬರ್ ಆಫ್ ಐಟಮ್ಸ್ ಅಟ್ ದಿ ಏಜ್ ಆಫ್ 9 ಮಂಥ್ಸ್’ ಸರ್ಟಿಫಿಕೇಟ್ ಪಡೆದಿದ್ದಾಳೆ.

24 ಹಣ್ಣುಗಳು, 24 ಸಾರಿಗೆ ವಿಧಾನಗಳು, ದೇಹದ 24 ಭಾಗಗಳು, 48 ಏಷ್ಯನ್ ದೇಶಗಳ ಧ್ವಜಗಳು ಸೇರಿದಂತೆ ಒಟ್ಟು 422 ವಸ್ತುಗಳನ್ನು ಐರಾ ಗುರುತಿಸಿದ್ದಾಳೆ ಈ ಮೂಲಕ ನೊಬೆಲ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ವಿಶ್ವದಾಖಲೆ ನಿರ್ಮಿಸಿದ್ದಾಳೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button