Latest

2 ವರ್ಷದಲ್ಲಿ ಧಾರವಾಡದಲ್ಲಿ ನಡೆದಿದ್ದು 96 ಕೊಲೆ?

ಪ್ರಗತಿವಾಹಿನಿ ಸುದ್ದಿ, ಧಾರವಾಡ – 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ ಹೋಗುತ್ತಿದ್ದಂತೆ ಮಹತ್ವದ ವಿಷಯವೊಂದು ಬೆಳಕಿಗೆ ಬಂದಿದೆ.

2016ರಿಂದ 2018ರ ಅವಧಿಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಒಟ್ಟೂ 96 ಕೊಲೆಗಳು ನಡೆದಿವೆ ಎಂದು ಯೋಗೀಶ್ ಗೌಡ ಸ್ನೇಹಿತ ಬಸವರಾಜ  ಕೊರವರ್ ಎನ್ನುವವರು ಹೇಳಿದ್ದಾರೆ. ಖಾಸಗಿ ಟಿವಿಯಂದಕ್ಕೆ ಈ ಮಾಹಿತಿ ನೀಡಿರುವ ಅವರು, ಈ ಎಲ್ಲ ಪ್ರಕರಣಗಳ ಹಿಂದೆ ವಿನಯ ಕುಲಕರ್ಣಿ ಇದ್ದಾರೆ ಎಂದು ನಾನು ಹೇಳುವುದಿಲ್ಲ. ಆದರೆ ಆ ಸಂದರ್ಭದಲ್ಲಿ ವಿನಯ ಕುಲಕರ್ಣಿ ಸಚಿವರಾಗಿದ್ದರು. ಪೊಲೀಸ್ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು ಎಂದು ಹೇಳಿದ್ದಾರೆ.

ಧಾರವಾಡ ಜಿಲ್ಲೆಯೊಂದರಲ್ಲೇ 96 ಕೊಲೆ ನಡೆದಿರುವಾಗಇವುಗಳ ಹಿಂದೆ ಯಾರಿದ್ದಾರೆ ಎನ್ನುವ ಕನಿಷ್ಠ ತನಿಖೆಗಳೂ ನಡೆಯುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಕೊಲೆಗಳು ನಡೆಯಬಾರದು. ನಡೆದಾಗ ಅವುಗಳ ತನಿಖೆಯಾಗಬೇಕು ಎಂದು ಅವರು ಹೇಳಿದರು.

ಯೋಗೀಶ್ ಗೌಡ ಹತ್ಯೆ ನಡೆಯುವ ಸ್ವಲ್ಪ ದಿನ ಮೊದಲು ಅವರಿಗೆ ಒಂದು ಪತ್ರ ಬಂದಿತ್ತು. ಆ ಪತ್ರದಲ್ಲಿ ವಿನಯ ಕುಲಕರ್ಣಿ ನಿಮ್ಮ ಕೊಲೆಗೆ ಸಂಚು ರೂಪಿಸಿದ್ದಾರೆ. ಹುಷಾರಾಗಿರಿ ಎಂದು ಬರೆಯಲಾಗಿತ್ತು. ಅದಾಗಂ ಕೆಲವೇ ದಿನದಲ್ಲಿ ಯೋಗೀಶ್ ಗೌಡ ಮರ್ಡರ್ ಆಯಿತು. ಆ ಪತ್ರವನ್ನು ಇಟ್ಟುಕೊಂಡು ನಾವು ಸಿಬಿಐ ತನಿಖೆಗೆ ಒತ್ತಾಯಿಸಿದ್ದೆವು. ಬಿಜೆಪಿ ಸರಕಾರ ಬಂದ ನಂತರ ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು ಎಂದು ಬಸವರಾಜ ಮಾಹಿತಿ ನೀಡಿದರು.

ಈ ಪ್ರಕರಣದ ತನಿಖೆಗೆ ಒತ್ತಾಯಿಸಿದವರೆಲ್ಲರಿಗೂ ಬೆದರಿಕೆಗಳು ಬಂದವು. ಮೊನ್ನೆ ಮೊನ್ನೆಯವರೆಗೂ ಬೆದರಿಕೆ ಮುಂದುವರಿದಿತ್ತು ಎಂದು ಹೇಳಿದರು.

ಈ ಕಳಗಿನ ಸುದ್ದಿ ಓದಲು ಕ್ಲಿಕ್ ಮಾಡಿ –

ಮಾಜಿ ಸಚಿವ ವಿನಯ ಕುಲಕರ್ಣಿ ಸಹೋದರರು ಸಿಬಿಐ ವಶಕ್ಕೆ

ಕೊರಳಿಗೆ ಗುರುತಿನ ಚೀಟಿ, ಟೆಬಲ್ ಮೇಲೆ ನಾಮಫಲಕ ಕಡ್ಡಾಯ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button