ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಎಎಪಿಯ ರಾಜಕೀಯ ಜಾಹೀರಾತುಗಳನ್ನು ಸರ್ಕಾರಿ ಜಾಹೀರಾತುಗಳಾಗಿ ಪ್ರಕಟಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದಿಂದ 97 ಕೋಟಿ ರೂ.ಗಳನ್ನು ವಸೂಲಿ ಮಾಡುವಂತೆ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಆದೇಶಿಸಿದ್ದಾರೆ.
2015 ರ ಸುಪ್ರೀಂ ಕೋರ್ಟ್ ಆದೇಶಗಳು, 2016 ರ ದೆಹಲಿ ಹೈಕೋರ್ಟ್ ಆದೇಶ ಮತ್ತು 2016 ರ CCRGA ಆದೇಶವನ್ನು ಆಪ್ ಸರ್ಕಾರ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 2016 ರಿಂದ ಎಲ್ಲಾ ಜಾಹೀರಾತುಗಳು ಸುಪ್ರೀಂ ಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿವೆಯೇ ಎಂದು ಪರಿಶೀಲಿಸಲು ಮತ್ತು ಖಚಿತಪಡಿಸಿಕೊಳ್ಳಲು ಸರ್ಕಾರಿ ಜಾಹೀರಾತುಗಳಲ್ಲಿನ ವಿಷಯ ನಿಯಂತ್ರಣ (ಸಿಸಿಆರ್ ಜಿಎ) ಗೆ ಉಲ್ಲೇಖಿಸಬೇಕು ಎಂದು ಲೆಫ್ಟಿನೆಂಟ್ ಗವರ್ನರ್ ಸೋಮವಾರ ಮುಖ್ಯ ಕಾರ್ಯದರ್ಶಿಗೆ ನೀಡಿದ ಆದೇಶದಲ್ಲಿ ನಿರ್ದೇಶನ ನೀಡಿದ್ದರು.
ಕಾನೂನು ಬಾಹಿರ ಸಮಿತಿಗೆ ಖರ್ಚು ಮಾಡಿದ ಹಣವನ್ನು ವಸೂಲು ಮಾಡುವಂತೆಯೂ ಅವರು ಕೇಳಿದ್ದಾರೆ.
*ಬಿಹಾರದ ಕೂಲಿ ಕಾರ್ಮಿಕನಿಗೆ 14 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್..!*
https://pragati.taskdun.com/notice-to-pay-14-crore-tax-to-bihar-laborer/
*ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್ ಸಹಚರ ಬಿಡುಗಡೆ*
https://pragati.taskdun.com/release-of-veerappans-accomplice-who-was-sentenced-to-life-imprisonment/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ