Latest

ರಾಡ್ ನಿಂದ ಹೊಡೆದಾಡಿಕೊಂಡ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 9ನೇ ತರಗತಿ ವಿದ್ಯಾರ್ಥಿಗಳು ರಾಡ್ ನಿಂದ ಬಡಿದಾಡಿಕೊಂಡಿರುವ ಘಟನೆ ಚಿಕ್ಕಬಾಣಾವರದ ಸರ್ಕಾರಿ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

ಶಾಲೆಯಲ್ಲಿಯೇ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಾರೆ. 9ನೇ ತರಗತಿ ವಿದ್ಯಾರ್ಥಿಯೋರ್ವ ಸಹಪಾಠಿಗೆ ರಾಡ್ ನಿಂದ ಹೊಡೆದಿದ್ದಾನೆ. ಹಲ್ಲೆ ನಡೆಸಿದ ವಿದ್ಯಾರ್ಥಿ ತಂದೆ ಆಸ್ಪತ್ರೆಯೊಂದರ ನೌಕರನಾಗಿದ್ದು, ಪೊಲೀಸರಿಗೆ ತಿಳಿಯದಂತೆ ವಿದ್ಯಾರ್ಥಿಗೆ ಚಿಕಿತ್ಸೆ ಕೊಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Home add -Advt

ವಿದ್ಯಾರ್ಥಿಗಳು ರಾಡ್ ನಿಂದ ಹೊಡೆದುಕೊಂಡರೂ ಶಾಲಾ ಆಡಳಿತ ಮಂಡಳಿ ಮೌನವಾಗಿದೆ. ಇನ್ನು ವಿದ್ಯಾರ್ಥಿಗಳ ಹೊಡೆದಾಟಕ್ಕೆ ಕಾರಣ ತಿಳಿದುಬಂದಿಲ್ಲ. ವಿದ್ಯಾರ್ಥಿಗಳ ಹೊಡೆದಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಡಿ.13ರಿಂದ 10 ದಿನ ಬೆಳಗಾವಿಯಲ್ಲಿ ಅಧಿವೇಶನ: ಅಧಿವೇಶನದ ವೇಳೆಯೇ ಪರಿಷತ್ ಚುನಾವಣೆ ಫಲಿತಾಂಶ

Related Articles

Back to top button