ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕೋಟೆ ಕೆರೆಯ ಪ್ರವೇಶಕ್ಕೆ ಸಾರ್ವಜನಿಕರಿಗೆ ಶುಲ್ಕ ವಿಧಿಸಿರುವುದನ್ನು ವಿರೋಧಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.
ಬೆಳಗಾವಿ ಜಿಲ್ಲಾಡಳಿತ ಈ ಕೂಡಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಇನ್ನಷ್ಟು ತೀವ್ರಗತಿಯ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಶಿವಾನಂದ ತಂಬಾಕಿ, ವಿನಾಯಕ ಬೋವಿ,ಸುಮೀತ ಅಗಸಗಿ, ಸತೀಶ್ ಗಾಡಿವಡ್ಡರ, ಸಂಪತ್ ಸಕ್ರೇಣ್ಣವರ್, ವಿನಾಯಕ ಹಟ್ಟಿಹೋಳಿ, ಗಿರೀಶ ಪಾಟೀಲ್, ಮಹೇಶ್ ಶಿಗ್ಗಿಹಳ್ಳಿ, ಸಂಪತಕುಮಾರ್ ದೇಸಾಯಿ ಮೊದಲಾದವರಿದ್ದರು.
ಜಿಲ್ಲಾಧಿಕಾರಿಗಳ ಈ ಕ್ರಮ ಅವೈಜ್ಞಾನಿಕವಾಗಿದ್ದು, ನಿರ್ಧಾರ ಕೆಬಿಡದಿದ್ದಲ್ಲಿ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಕರವೇ ಯುವ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ