Latest

ಮದುವೆ ಊಟದ ವಿಷಯದಲ್ಲಿ ಆಲಿಯಾ- ರಣಬೀರ್ ತುಂಬಾ ಹಣ ಉಳಿಸಿದ್ದಾರಂತೆ !

ಪ್ರಗತಿವಾಹಿನಿ ಸುದ್ದಿ, ಮುಂಬೈ: ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ವಿವಾಹ ಭೋಜನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹಣ ಉಳಿತಾಯ ಮಾಡಿದ್ದಾರಂತೆ.

ಈ ವಿಷಯ ಹೇಳಿದ್ದು ನಟ ರಣವೀರ್ ಸಿಂಗ್. ಮಂಗಳವಾರ ರಾತ್ರಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪಡೆದ ಅವರು, ಹಲವು ನಟ- ನಟಿಯರ ವಿವಾಹ ಸಮಾರಂಭವನ್ನು ಪ್ರಸ್ತಾಪಿಸುತ್ತ ರಣಬೀರ್ ಕಪೂರ್- ಆಲಿಯಾ ಮದುವೆಯ ಬಗ್ಗೆಯೂ ಚಟಾಕಿ ಹಾರಿಸಿದರು.

“ರಣಬೀರ್- ಆಲಿಯಾ ಮದುವೆ ತುಂಬ ಶಾರ್ಟ್ ಆಗಿತ್ತು. ತುಂಬ ಆತ್ಮೀಯತೆ, ಸ್ನೇಹಶೀಲತೆಯಿಂದಲೂ ಕೂಡಿತ್ತು. ಅವರು ವಿವಾಹಭೋಜನದ ವಿಷಯದಲ್ಲಿ ತುಂಬಾ ಹಣ ಉಳಿಸಿದ್ದಾರೆ. ನನ್ನ ಸಿಂಧಿ ತಂದೆ ಕೂಡ ಇದನ್ನು ಮೆಚ್ಚಿಕೊಂಡಿದ್ದಾರೆ” ಎಂದರು.

ರಣಬೀರ್- ಆಲಿಯಾ ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ತಮ್ಮ ಬಾಂದ್ರಾದ ನಿವಾಸದಲ್ಲಿ ಮದುವೆಯಾಗಿದ್ದರು. ಮದುವೆಗೆ ಅವರು ತಮ್ಮ ಕೆಲವೇ ಆಪ್ತೇಷ್ಟರನ್ನು ಆಹ್ವಾನಿಸಿದ್ದರು. ಇದು ರಣವೀರ್ ಚಟಾಕಿಗೆ ಕಾರಣವಾಯಿತು.

ಯಾರಿಗೆಲ್ಲ ಬಂತು ಈ ಬಾರಿಯ ಫಿಲ್ಮ್ ಫೇರ್ ಪ್ರಶಸ್ತಿ ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button