ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಈಬಾರಿ ಅದ್ದೂರಿಯಾಗಿ ಗಣೇಶೋತ್ಸವ ಆಚರಿಸಲಾಗುತ್ತಿದ್ದು, ಗಣೇಶೋತ್ಸವ ಕಾರ್ಯಕ್ರಮದಲ್ಲಿ ಡಿಜೆಗೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸುವಂತೆ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.
ಬೆಳಗಾವಿಯ ಹಿರೆಬಾಗೇವಾಡಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಸಾರ್ವಜನಿಕ ಗಣೇಶೋತ್ಸವ ಆಚರಣೆ ಮಾಡಿರಲಿಲ್ಲ. ಈ ವರ್ಷದಿಂದ ಮುಕ್ತವಾಗಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸಾಲ ಮಾಡಿ ಸೌಂಡ್ ಸಿಸ್ಟಮ್, ಲೈಟಿಂಗ್ ನವರು ಕಷ್ಟ ಅನುಭವಿಸಿದ್ದಾರೆ. ಈ ಬಾರಿ ಗಣೇಶೋತ್ಸವ ಅವರ ಬದುಕಿಗೆ ಒಂದು ಆಧಾರವಾಗಲಿ. ಹಾಗಾಗಿ ಡಿಜೆ, ಲೈಟಿಂಗ್, ಸೌಂಡ್ ಗಳಿಗೆ ನಿರ್ಬಂಧ ಹೇರಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದರು.
ಒಂದು ವೇಳೆ ಅನುಮತಿಯಿಲ್ಲದೇ ಡಿಜೆ ಹಾಕುವಂತಿಲ್ಲ, ಸೌಂಡ್ ಮಾಡುವಂತಿಲ್ಲ ಎಂದು ಕಿರಿಕಿರಿ ಮಾಡಿದರೆ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ ಮಾಡುವಂತೆ ತಿಳಿಸಿದರು.
ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ನೀವು ಹೇಳುವುದಾದರೆ ಪ್ರತಿದಿನ ಮಸೀದಿಗಳಲ್ಲಿ ಮೈಕ್ ಹಾಕಿ ಐದು ಬಾರಿ ನಮಾಜ್, ಆಜಾನ್ ಕೂಗಲಾಗುತ್ತದೆ ಅದು ಎಷ್ಟು ಕಿರಿಕಿರಿಯಾಗುತ್ತಿದೆ. ಆದರೂ ಒಂದೇ ಒಂದು ಮೈಕ್ ಇಳಿಸಿ ಸರ್ಕಾರಕ್ಕೆ ಕ್ರಮ ಕೈಗೊಳ್ಳಲಾಗಿಲ್ಲ. ಕಾನೂನು ಹಿಂದೂಗಳಿಗೆ ಮಾತ್ರ ಅನ್ವಯವೇ? ವರ್ಷಕ್ಕೆ ಒಮ್ಮೆ ಮಾಡುವ ಗಣೇಶೋತ್ಸವದಲ್ಲಿ ಡಿಜೆ ಹಾಕಿ ಮೆರವಣಿಗೆ ಮಾಡಲಿ. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ನಾನು ಹೇಳುತ್ತಿದ್ದೇನೆ ಡಿಜೆ ಹಾಕಿ ಮೆರವಣಿಗೆ ಮಾಡಿ ಯಾರು ತಡಿತಾರೆ ನೋಡೋಣ ತಡೆದರೆ ಪೊಲೀಸ್ ಠಾಣೆ ಮುಂದೆ ಗಣೇಶ ಮೂರ್ತಿ ಇಟ್ಟು ಧರಣಿ ಮಾಡಿ ಎಂದು ಗುಡುಗಿದರು.
ಅತ್ಯಾಚಾರ ಯತ್ನ ಪ್ರಕರಣ; ಜಾಮೀನಿಗಾಗಿ ಕೋರ್ಟ್ ಮೊರೆ ಹೋದ ಮಾಜಿ ಶಾಸಕ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ