ಸೆಪ್ಟಂಬರ್ 2 ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ್ ಅವರ ಜನ್ಮ ದಿನ. ತನ್ನಿಮಿತ್ತ ಅವರ ಸಾಧನೆಗಳನ್ನು ಪರಿಚಯಿಸುವ ಈ ಬರಹ
ಬಿಜೆಪಿ ಪಕ್ಷದ ಟಿಕೇಟ್ ಭಾಗ್ಯ
ಚುರುಕಿನ ಸಂಘಟನೆ ಹಾಗೂ ರೈತರು, ಯುವಕರಿಗೆ, ಬಡವರಿಗೆ, ಹಿಂದುಳಿದವರಿಗೆ ನೆರವಾಗಿ ಪಕ್ಷ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಿದನ್ನು ಗಮನಿಸಿ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ೨೦೧೮ ನೇ ಸಾಲಿನ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿಕೊಂಡು ಬರುವ ನಾಯಕನೆಂದರೆ ಇವರೇ ಎಂಬ ದೃಢ ನಿರ್ಧಾರದಿಂದ ಕಿತ್ತೂರ ಮತಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಟಿಕೇಟ್ ನೀಡಿದರು.
ಈಗಿನ ಕಿತ್ತೂರ ಮತಕ್ಷೇತ್ರದ ಶಾಸಕರಾದ ಮಹಾಂತೇಶ ದೊಡ್ಡಗೌಡರು ದಿನ ಬೆಳಗಾವುದರಲ್ಲಿ ಪ್ರಸಿದ್ದಿ ಪಡೆದು ಅವತರಿಸಿದ ವ್ಯಕ್ತಿ ಅಲ್ಲ. ಅವರು ಜನರ ಮಧ್ಯೆ ಇದ್ದು, ಜನರಿಗಾಗಿ ದುಡಿದು, ಜನರಿಗಾಗಿ ಬದುಕಿ, ಸತತ ಶ್ರಮದಿಂದ ಜನ ಸೇವೆಯಿಂದ ಮೇಲೆ ಬಂದವರು. ಸುಮಾರು ೨೦ ವರ್ಷಗಳಿಂದ ಬಿಜೆಪಿಯಲ್ಲಿ ವಿವಿಧ ಹಂತದ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿ, ಕೇವಲ ೨೧ ನೇ ವಯಸ್ಸಿನಲ್ಲಿ ಪ್ರತಿಷ್ಠಿತ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ, ನಂತರ ಉಪಾಧ್ಯಕ್ಷರಾಗಿ ಜನ ಸೇವೆ ಮಾಡಿದರು.
ಅದೇ ವೇಳೆ ಕಿತ್ತೂರ ಮತಕ್ಷೇತ್ರದ ಹಳ್ಳಿ ಹಳ್ಳಿಗಳಿಗೆ ತೆರಳಿ, ಯುವಕರು, ರೈತರ ಸಮಸ್ಯೆಗಳನ್ನು ಆಲಿಸಿದರು. ಸದಾ ಜನರ ಮಧ್ಯೆ ಇದ್ದು, ಜನರ ಸಮಸ್ಯೆಗಳೇ ತಮ್ಮ ಸಮಸ್ಯೆ ಎಂದು ಅರಿತು ಅವರ ಕಷ್ಟಗಳಲ್ಲಿ ಭಾಗಿಯಾಗಿ ಅವರ ಕಣ್ಣೀರು ಒರೆಸುವ ಕೆಲಸ ಮಾಡಿದರು.
ಯುವಕರಿಗೆ ಉದ್ಯೋಗದಾತ:
ವಿಶೇಷವಾಗಿ ಅವರು ಯುವ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದರಲ್ಲದೇ, ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡಿದರು. ತಾವು ನಿರ್ದೇಶಕರಾಗಿ ಕೆಲಸ ಮಾಡುವ ಸೋಮೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಯುವಕರಿಗೆ ಉದ್ಯೋಗ ನೀಡಿದರು. ತಾವು ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುವ ಸಂಘ ಸಂಸ್ಥೆಗಳಲ್ಲಿ ನೂರಾರು ಯುವಕರಿಗೆ ವಿವಿಧ ಹಂತದ ಉದ್ಯೋಗ ಭಾಗ್ಯ ಕಲ್ಪಿಸಿದರು. ಆ ಮೂಲಕ ನೂರಾರು ಕುಟುಂಬಗಳು ಇಂದು ಉಪಜೀವನ ಸಾಗಿಸಲು ನೆರವಾದರು.
ಶಾಸಕರಾಗುವ ಮುಂಚೆ ತಾವು ಸ್ಥಾಪಿಸಿ, ಬೆಳೆಸಿದ ಸಂಘ, ಸಂಸ್ಥೆಗಳಲ್ಲಿ ಯುವಕರಿಗೆ ಉದ್ಯೋಗ ನೀಡಿದರು. ಪಿಕೆಪಿಎಸ್, ಹಣಕಾಸು ಸಂಸ್ಥೆಗಳಲ್ಲಿ ಬಡ ನಿರುದ್ಯೋಗಿ ಯುವಕರಿಗೆ ನೌಕರಿ ನೀಡಿ ಸಾವಿರಾರು ಬಡ ಕುಟುಂಬಗಳು ಆರ್ಥಿಕ ಸಂಕಷ್ಟದಿಂದ ಪಾರಾಗಿ ಆರಾಮವಾಗಿ ಉಪಜೀವನ ನಡೆಸಲು ನೆರವಾದರು.
ರೈತರಿಗೆ ನೆರವು:
ತಾವು ಪ್ರತಿನಿಧಿಸುವ ನೂರಾರು ಸಂಘ ಸಂಸ್ಥೆಗಳು, ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಆರ್ಥಿಕ ನೆರವು, ಸಾಲ ಸಹಾಯ, ನೀಡುವ ಮೂಲಕ ರೈತರ ಕಷ್ಟಗಳಲ್ಲಿ ಭಾಗಿಯಾಗಿ ಅವರಿಗೆ ನೆರವಾದರು. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ, ಸಕಾಲಕ್ಕೆ ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಕೊಡಿಸಿದರು. ಈ ಕೆಲಸಕ್ಕೆ ಅವರು ಸ್ಥಾಪಿಸಿದ ನೂರಾರು ಪಿಕೆಪಿಎಸ್ಗಳ ಕಾರ್ಯ ನಿರ್ವಹಣೆಯಿಂದ ಸಾಧ್ಯವಾಯಿತು.
ಬಿಡಿಸಿಸಿ ಬ್ಯಾಂಕ್ ನ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳನ್ನು ಪ್ರತಿನಿಧಿಸುವ ಅವರು ಪ್ರಥಮವಾಗಿ ಕಣ್ಣು ಹರಿಸಿದ್ದೇ, ಬೆಳಗಾವಿ ಜಿಲ್ಲೆ ದಿಗ್ಗಜ ನಾಯಕರ ಮಧ್ಯ ಸಹಕಾರಿ ಸಾಲದಿಂದ ವಂಚಿತ ಈ ಎರಡು ಅವಳಿ ತಾಲೂಕಿನ ರೈತರಿಗೆ ಹೆಚ್ಚಿನ ಸಾಲ ನೀಡಬೇಕು ಮತ್ತು ಅವರ ಕಷ್ಠದಲ್ಲಿ ಭಾಗಿಯಾಗಬೇಕು ಎಂಬುವದಾಗಿತ್ತು, ಬಿಡಿಸಿಸಿ ಬ್ಯಾಂಕ್ ನ ಒಂದೊಂದು ಮೆಟ್ಟಿಲೇರುತ್ತಾ ತಮ್ಮ ಚಾಣಾಕ್ಷ ನಡೆಯಿಂದ ಅವರು ಮೊದಲು ಈ ಎರಡು ತಾಲೂಕುಗಳಲ್ಲಿ ಕೇವಲ ರೂ.೫೦.೦೦ ಕೋಟಿ ಸಾಲ ವಿತರಣೆ ಇದ್ದಿದ್ದನ್ನು, ಪ್ರಸ್ತುತ ೧೦೮ ಪಿಕೆಪಿಎಸ್ ಸಂಘಗಳ ಮೂಲಕ ೪೭ ಸಾವಿರದ ೧೯೬ ರೈತರಿಗೆ ರೂ.೨೫೫.೭೭ ಕೋಟಿ ಶೂನ್ಯ ಬಡ್ಡಿಯ ಸಾಲ ನೀಡಿದ್ದಾರೆ. ಅದರಂತೆ ೧೨೨ ಸ್ವಸಹಾಯ ಸಂಘಗಳ ಮೂಲಕ ೨.೩೩ ಕೋಟಿ ದುಡಿಯುವ ಬಂಡವಾಳ ನೀಡಿದ್ದಾರೆ. ೧೧೧ ರೈತರಿಗೆ ಟ್ಯಾಕ್ಟರ್ ಸಾಲ ರೂ.೪.೮೪ ಕೋಟಿ ನೀಡಿದ್ದಾರೆ.
ಸರಕಾರದ ಸಾಲ ಮನ್ನಾ ಯೋಜನೆಯಡಿ ಅವಧಿಯಲ್ಲಿ ೨೫ ಸಾವಿರ ಸಾಲಮನ್ನಾ ಯೋಜನೆಯಡಿ ೮೭ ಕೋಟಿ ಸಾಲಮನ್ನಾ ಆಗಿದೆ. ೫೦ ಸಾವಿರ ಸಾಲಮನ್ನಾ ಯೋಜನೆಯಡಿ ೩೦೪೮೦ ರೈತರಿಗೆ ೯೯.೪೫ಕೋಟಿ ಸಾಲಮನ್ನಾ ಆಗಿದೆ. ೧ ಲಕ್ಷ ಸಾಲಮನ್ನಾ ಯೋಜನೆಯಡಿ ೨೮೫೬೯ ರೈತರ ೧೧೯.೬೦ ಕೋಟಿ ಸಾಲಮನ್ನಾ ಆಗಿದೆ. ಇದರಿಂದ ಕ್ಷೇತ್ರದ ರೈತರ ಸಂಕಷ್ಠಕ್ಕೆ ಸ್ಪಂದಿಸಲಾಗಿದೆ.
ಪಿಕೆಪಿಎಸ್ ಗಳ ಬಲವರ್ಧನೆಗಾಗಿ ಗ್ರಾಮೀಣ ಗೋಡೌನ್ ಗಳ ನಿರ್ಮಾಣಕ್ಕೆ ರೂ.೪.೦೦ ಕೋಟಿ ಅನುದಾನ ನೀಡಿದ್ದಾರೆ.
ಕೈ ಹಾಕಿದಲ್ಲಿ ಬಂಗಾರ ಬೆಳೆ ಬೆಳೆದ ಮಹಾಂತೇಶ… ಎಂಬುವದಕ್ಕೆ ಸಾಕ್ಷಿ ಅವರು ರಾಜ್ಯ ಸಹಕಾರ ಮರಾಟ ಮಹಾಮಂಡಳದ ಉಪಾಧ್ಯಕ್ಷರಾಗಿದ್ದಾಗ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ೧೮ ಕೋಟಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಇವರು ಅಧಿಕಾರ ಮುಗಿಸಿ ಬರುವಾಗ ರೂ.೨೫೦.೦೦ ಕೋಟಿ ಲಾಭ ಮಾಡಿಕೊಟ್ಟು ಬಂದಿರುವದು ಇದಕ್ಕೆ ಸಾಕ್ಷಿ.
ಬಿಜೆಪಿ ಪಕ್ಷದ ಶಿಸ್ತಿನ ಸೇವಕ:
ಈ ಎಲ್ಲ ಜನಪರ ಕೆಲಸ ಮಾಡುತ್ತಲೇ ಮಹಾಂತೇಶ ದೊಡ್ಡಗೌಡರು, ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಾಗಲು ಯಶಸ್ವಿಯಾದರು. ಪಕ್ಷ ವಹಿಸಿದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಪಕ್ಷದ ಶಿಸ್ತಿನ ಸಿಪಾಯಿಯಾದರು.
ಬಿಜೆಪಿಯಲ್ಲಿ ವಿವಿಧ ಹುದ್ದೆಗಳ ಜವಾಬ್ದಾರಿ ಹೊತ್ತುಕೊಂಡು ಕಿತ್ತೂರ ನಾಡಿನಲ್ಲಿ ಪಕ್ಷ ಸಂಘಟನೆ ಮಾಡಿದರು. ೨೦ ವರ್ಷಗಳಿಂದ ಬಿಜೆಪಿ ಕಾರ್ಯ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಪಕ್ಷ ವಹಿಸಿದ ವಿವಿಧ ಹಂತದ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮಾಡಿದರು. ಶಾಸಕರಾದ ನಂತರ ಬಿಜೆಪಿಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ತನು, ಮನ, ಧನ ದಿಂದ ನೇರವೇರಿಸಿ ರಾಜ್ಯ ನಾಯಕರ ಪ್ರಂಶಸೆಗೆ ಪಾತ್ರರಾಗಿದ್ದಾರೆ.
ಪ್ರಕೋಷ್ಟದಲ್ಲಿ ಪ್ರಕಾಶಿಸಿದ ದೊಡ್ಡಗೌಡರು:
ಮಹಾಂತೇಶರ ಪಕ್ಷ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪ್ರಭಾವಿತರಾದ ಬಿಜೆಪಿ ನಾಯಕರು ಅವರಿಗೆ ರಾಜ್ಯ ಸಹಕಾರ ಪ್ರಕೋಷ್ಟ ಸಹ ಸಂಚಾಲಕರ ಜವಾಬ್ದಾರಿ ನೀಡಿದರು, ಈ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಕಿತ್ತೂರ ಮಂಡಲದ ಜವಾಬ್ದಾರಿಯನ್ನು ವಹಿಸಿಕೊಂಡು ಹಳ್ಳಿ ಹಳ್ಳಿ ಸುತ್ತಿ ಪಕ್ಷ ಸಂಘಟನೆ ಮಾಡಿದರು. ಜೊತೆ ಜೊತೆಗೆ ಬದಾಮಿ ಕ್ಷೇತ್ರದ ವಿಸ್ತಾರಕ ಯೋಜನೆಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನೇರವೇರಿಸಿ ಪಕ್ಷ ಬಲ ಪಡಿಸಿದ ಕೀರ್ತಿ ದೊಡ್ಡಗೌಡರಿಗೆ ಸಲ್ಲುತ್ತದೆ. ಕಿತ್ತೂರು ನಾಡಿನಲ್ಲಿ ರಾಣಿ ಚನ್ನಮ್ಮಾಜಿಯ ಹಾಗೂ ಸ್ಥಳೀಯ ಆರಾಧ್ಯ ದೇವರ ಆಶೀರ್ವಾದದಿಂದ ಬಿಜೆಪಿ ಪಕ್ಷದ ಸಂಘಟನೆಯನ್ನು ಸದೃಢವಾಗಿ ಕಟ್ಟಿದರು.
ಬಿಜೆಪಿ ಪಕ್ಷದ ಟಿಕೇಟ್ ಭಾಗ್ಯ
ಚುರುಕಿನ ಸಂಘಟನೆ ಹಾಗೂ ರೈತರು, ಯುವಕರಿಗೆ, ಬಡವರಿಗೆ, ಹಿಂದುಳಿದವರಿಗೆ ನೆರವಾಗಿ ಪಕ್ಷ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಿದನ್ನು ಗಮನಿಸಿ ಬಿಜೆಪಿ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ೨೦೧೮ ನೇ ಸಾಲಿನ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಿಸಿಕೊಂಡು ಬರುವ ನಾಯಕನೆಂದರೆ ಇವರೇ ಎಂಬ ದೃಢ ನಿರ್ಧಾರದಿಂದ ಕಿತ್ತೂರ ಮತಕ್ಷೇತ್ರದ ಬಿಜೆಪಿಯ ಅಧಿಕೃತ ಅಭ್ಯರ್ಥಿ ಎಂದು ಟಿಕೇಟ್ ನೀಡಿದರು.
ಇತಿಹಾಸ ನಿರ್ಮಿಸಿದ ಧೀರ: ಸೋಲಿನ ಸಾಲ ತಿರಿಸಿದ ಪುತ್ರ
ಶಾಸಕರಾದ ಮಹಾಂತೇಶ ದೊಡ್ಡಗೌಡರ ತಂದೆಯವರು ವಿಧಾನಸಭಾ ಚುನಾವಣೆಗೆ ೨ ಬಾರಿ ಸ್ಪರ್ಧಿಸಿ ಕೂದಲಳೆಯ ಅಂತರದಲ್ಲಿ ಸೋಲನ್ನು ಅನುಭವಿಸಿದ್ದರು, ೩೩ ವರ್ಷಗಳ ವನವಾಸದ ನಂತರ ಅಪಾರ ಶ್ರಮದ ನಂತರ ಭಾರತೀಯ ಜನಾತಾ ಪಾರ್ಟಿ ಟಿಕೇಟ್ ಗಿಟ್ಟಿಸಿಕೊಂಡು, ಅಭಿಮಾನದಲ್ಲಿ ಸಾವಿರಾರು ಬಿಜೆಪಿ ಪಕ್ಷದ ನಿಷ್ಟಾವಂತ, ವಿಶ್ವಾಸಿ ಕಾರ್ಯಕರ್ತರ ಸಹಾಯದಿಂದ ಕಿತ್ತೂರು ವಿಧಾನ ಸಭೆ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ೩೩ ಸಾವಿರ ಅಂತರದಿಂದ ಭರ್ಜರಿ ಜಯಭೇರಿ ಬಾರಿಸುವ ಮೂಲಕ ಕಿತ್ತೂರ ಮತಕ್ಷೇತ್ರದಲ್ಲಿ ಇಷ್ಟೊಂದು ಮುನ್ನಡೆಯೊಂದಿಗೆ ಗೆಲುವು ದಾಖಲಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಸಂಭ್ರಮಿಸಿದ ಕ್ಷೇತ್ರದ ಜನ:
ಕಿತ್ತೂರ ಮತಕ್ಷೇತ್ರದ ಹೆಮ್ಮೆಯ ಮಗನಾದ ಮಹಾಂತೇಶ ದೊಡ್ಡಗೌಡರು ಇಷ್ಟೊಂದು ದೊಡ್ಡ ಅಂತರದ ಗೆಲುವು ಪಡೆದು ಕ್ಷೇತ್ರದ ಜನರ ಸೇವೆಗೆ ಸಜ್ಜಾದ ಘಳಿಗೆಗೆ ಇಡೀ ಕ್ಷೇತ್ರದ ಜನರು ಹಿಗ್ಗಿ ಸಂಭ್ರಮಿಸಿದರು. ದೊಡ್ಡಗೌಡರ ಕುಟುಂಬಸ್ಥರಿಗೂ ಮಹಾನ್ ಸಾಧನೆ ಮಾಡಿದ ಭಾವ ಕೊನೆಗೆ ಪ್ರಾಪ್ತಿಯಾಗಿ ಆ ಸಂತಸಕ್ಕೆ ಪಾರವೇ ಇರಲಿಲ್ಲ.
ಹೆಚ್ಚಿದ ನಯ, ವಿನಯ:
ಚುನಾವಣೆಗಳಲ್ಲಿ ಗೆದ್ದು ಬೀಗಿದವರು ಕ್ಷೇತ್ರದ ಕಡೆ ತಲೆ ಹಾಕುವುದಿಲ್ಲ. ತಿರುಗಿಯೂ ನೋಡುವುದಿಲ್ಲ. ಮತ್ತೆ ಚುನಾವಣೆಗೆ ಬಂದಾಗಲೇ ಮತದಾರರ ನೆನಪಾಗುತ್ತದೆ ಎಂಬುದು ಜನರು ಆಡುವ ಮಾತು. ಆದರೆ ಇದಕ್ಕೆ ಅಪವಾದ ಎಂಬಂತೆ ಕಿತ್ತೂರ ನಾಡಿನ ಹೆಮ್ಮೆಯ ಶಾಸಕರಾದ ಮಹಾಂತೇಶ ದೊಡ್ಡಗೌಡರು, ಶಾಸಕರಾದ ಮೇಲೆ ಮತ್ತಷ್ಟು ಸರಳತೆ, ನಯ, ವಿನಯ, ಸಿಂಪಲ್ ಆಗಿದ್ದುಕೊಂಡು ಜನರ ಸೇವೆ ಮಾಡುವುದೇ ಏಕೈಕ ಉದ್ದೇಶ ಎಂಬುದನ್ನು ಕೇವಲ ಎರಡೇ ವರ್ಷದಲ್ಲಿ ಸಾಭೀತು ಮಾಡಿದರು. ಶಾಸಕರೆಂದರೆ ಹೀಗಿರಬೇಕೆಂದು ಎಂದು ಜನರೇ ಮೆಚ್ಚುಗೆ ವ್ಯಕ್ತಪಡಿಸುವ ರೀತಿಯಲ್ಲಿ ನಡೆದುಕೊಂಡಿದ್ದಾರೆ.
ನಮ್ಮ ಶಾಸಕರ ಭೇಟಿ ವೇರಿ ಸಿಂಪಲ್:
ಹಿಂದಿನ ಸಂಪ್ರದಾಯದ ಪ್ರಕಾರ ಶಾಸಕರನ್ನು ಭೇಟಿಯಾಗುವುದೆಂದರೆ ಅದೊಂದು ದೊಡ್ಡ ಪರ್ವತ ಸುತ್ತಿ ಬಂದಂತೆ ಭಾಸವಾಗುತ್ತಿತ್ತು. ಆದರೆ ಈಗಿನ ಶಾಸಕರನ್ನು ಭೇಟಿಯಾಗುವುದೆಂದರೆ ಅದು ವೇರಿ ಸಿಂಪಲ್. ಏಕೆಂದರೆ ಆ ಮೂಲಕ, ಈ ಮೂಲಕ ಭೇಟಿಗಳೆಲ್ಲ ಶಾಸಕರ ಮುಂದೆ ನಡೆಯುವುದಿಲ್ಲ. ಕಷ್ಟಗಳನ್ನು ಹೊತ್ತು ತಂದ ಜನರು ಕಿತ್ತೂರ ಶಾಸಕರನ್ನು ನೆರವಾಗಿ ಬಂದು ಯಾರದೇ ಸಹಾಯವಿಲ್ಲದೇ ಭೇಟಿಯಾಗಬಹುದು.
ಶಾಸಕರಾಗಿ ಎರಡೇ ವರ್ಷಗಳಲ್ಲಿ ಕ್ಷೇತ್ರದ ಜನರಲ್ಲಿ ಈ ಭಾವನೆ ಬರುವಂತೆ ಸಾಧ್ಯವಾಗಿದ್ದು, ಶಾಸಕರ ಸಿಂಪಲ್ ಭೇಟಿ ಫಾರ್ಮುಲಾದಿಂದ. ಕೆಲಸ ಹೊತ್ತು ಆಫೀಸ್ಗೆ ಬಂದವರನ್ನು ತಾವೇ ಮಾತಾಡಿಸಿ, ಚಹಾ ಕುಡಿಸಿ ಎಲ್ಲರ ಯೋಗ ಕ್ಷೇಮ ಕೇಳಿ ಕೆಲಸ ಮಾಡಿಕೊಡುತ್ತಾರೆ. ಮುಂದಿನ ದಿನಗಳಲ್ಲಿ ಮತ್ತೆ ಶಾಸಕರಾಗಿ ಇದಕ್ಕಿಂತ ದುಪ್ಪಟ್ಟು ವೇಗದಲ್ಲಿ ಕೆಲಸ ಮಾಡುತ್ತಾರೆಂಬ ಭಾವನೆ ಈಗಾಗಲೇ ಜನರಲ್ಲಿ ನೆಲೆಯೂರಿಯಾಗಿದೆ. ಅದಕ್ಕೆ ಅವರ ಕಾರ್ಯ ಶ್ರದ್ಧೆ ಕಾರಣ. ಇಂಥ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯ ಸರಳತೆಯ ಅಭಿವೃದ್ಧಿ ಹರಿಕಾರ ಮಹಾಂತೇಶ ದೊಡ್ಡಗೌಡರ.
ಬಸವಂತರಾಯ ದೊಡ್ಡಗೌಡರ ಫೌಂಡೇಶನ್ ದಿಂದ ಸಮಾಜ ಸೇವೆ
ಇಂದಿನ ದಿನಮಾನಗಳಲ್ಲಿ ಉದ್ಯೋಗ ಹುಡಕಾಟದಲ್ಲಿರುವ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳೆಂದರೆ ಕಬ್ಬಿಣದ ಕಡಲೆಯಾಗಿದೆ. ಸರಿಯಾದ ತರಭೇತಿ ಇಲ್ಲದೆ ಸಾವಿರಾರು ಯುವಕರು ಉದ್ಯೋಗದಿಂದ ವಂಚಿತರಾಗುತ್ತಾರೆ. ಇದನ್ನು ಮನಗಂಡ ಶಾಸಕರು ಕಿತ್ತೂರು ಮತ್ತು ನೇಸರಗಿಯಲ್ಲಿ (ಆರಂಭಿಸಲು ಸಿದ್ದತೆ ನಡದಿದೆ) ಸ್ಪರ್ಧಾತ್ಮಕ ಕೇಂದ್ರಗಳನ್ನು ಆರಂಭಿಸಿ ಸಾವಿರಾರು ಯುವಕರಿಗೆ ಕ್ಷೇತ್ರದ ನುರಿತ ಉಪನ್ಯಾಸಕರ ಸಹಾಯದಿಂದ ಗುಣಮಟ್ಟದ ತರಭೇತಿ ನೀಡಲು ಮುಂದಾಗಿದ್ದಾರೆ.
ಅದರಂತೆ ಕೋವಿಡ್ -೧೯, ಪ್ರವಾಹ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ದಾನಿಗಳ ಸಹಾಯದಿಂದ ಲಕ್ಷಾಂತರ ವೆಚ್ಚದಲ್ಲಿ ಮಾಸ್ಕ್, ಸಾನಿಟೈಜರ್, ರಗ್ಗು ಹೊದಿಕೆ, ಆಹಾರ ಕಿಟ್, ಸುಮಾರು ೫೦ ಲಕ್ಷದ ಮೇಡಿಸಿನ್ ವಿತರಿಸಿ ಕ್ಷೇತ್ರದ ಜನರಿಂದ ಸೈ ಎನಿಸಿಕೊಂಡಿದ್ದಾರೆ.
ಕ್ಷೇತ್ರದ ಅಧಿ ದೇವತೆ ಕಿತ್ತೂರು ಪಟ್ಟಣದ ಗ್ರಾಮದೇವಿ ಜಾತ್ರೆ ೧೦೦ ವರ್ಷಗಳ ನಂತರ ಆಚರಿಸಿದ ಜಾತ್ರೆ ನಿಮಿತ್ಯವಾಗಿ ನಿರಂತರ ಅನ್ನ ಪ್ರಸಾದ ಸೇವೆ ಹಾಗೂ ರಾಜ್ಯಮಟ್ಟದ ಕಬ್ಬಡಿ ಎರ್ಪಡಿಸಿ ಜಾತ್ರೆಯನ್ನು ಯಶಸ್ವಿಗೊಳಿಸಿದರು.
ಸದನದಲ್ಲಿ ಪುಲ್ ಆಕ್ಟೀವ್
೨೦೧೮ರ ಚುನಾವಣೆಯಲ್ಲಿ ಆರಿಸಿ ಬಂದ ನಂತರ ಕರ್ನಾಟಕ ವಿಧಾನ ಸಭೆಯ ಪ್ರತಿ ಅಧಿವೇಶನದಲ್ಲಿಯೂ ಜನರ ಸಮಸ್ಯಗಳನ್ನು ಮುಂದ್ದಿಟ್ಟುಕೊಂಡು ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ, ಚರ್ಚೆಗಳಲ್ಲಿ ಭಾಗವಹಿಸುವ ಮೂಲಕ, ಕಲಾಪವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಈ ಭಾಗದ ಧ್ವನಿಯಾಗಿದ್ದಾರೆ.
ವಿಕಾಸಶೀಲ ಹೆಜ್ಜೆ ನವ ಕಿತ್ತೂರು ನಿರ್ಮಾಣದತ್ತ ಶಾಸಕರ ನಡೆ
ಈವರೆಗೆ ೨೪೦೦ ಕೋಟಿ ರೂಗಳನ್ನು ಸರಕಾರದಿಂದ ಬಿಡುಗಡೆ ಮಾಡಿಸಿಕೊಂಡು ಬಂದು ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ನೀಡಿದ್ದಾರೆ. ನೀರಾವರಿ, ರಸ್ತೆ, ಶಿಕ್ಷಣ ಆರೋಗ್ಯ, ಕುಡಿಯುವ ನೀರು ಕಾಮಗಾರಿ, ಒಳಚರಂಡಿ ಕಾಮಗಾರಿ, ಬೀದಿ ದೀಪ, ಹೊಲಕ್ಕೆ ಹೋಗುವ ರಸ್ತೆಗಳ ನಿರ್ಮಾಣ, ಕ್ಷೇತ್ರದ ನೂರಾರು ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಅಲ್ಪಾವಧಿಯಲ್ಲಿಯೇ ಮಾಡುವುದರ ಮೂಲಕ ಕ್ಷೇತ್ರದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ತಾಯಿ ಚನ್ನಮ್ಮಾಜೀಯವರ ಕಿತ್ತೂರು ಕೋಟೆಯ ಪ್ರತಿರೂಪವನ್ನು ನಿರ್ಮಿಸಬೇಕು, ಕಿತ್ತೂರನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂಬ ದೃಡ ನಿಶ್ಚಯದಿಂದ ನಿಕಟಪೂರ್ವ ಮುಖ್ಯಮಂತ್ರಿಗಳಾದ .ಬಿ.ಎಸ್.ಯಡಿಯೂರಪ್ಪನವರು ಮತ್ತು ಈಗಿನ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ದುಂಬಾಲು ಬಿದ್ದು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸುಮಾರು ರೂ.೧೫೦ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ.
ತಾಯಿ ಚನ್ನಮ್ಮಾಜೀಯವರ ಕಿತ್ತೂರು ಕೋಟೆಯ ಪ್ರತಿರೂಪವನ್ನು ನಿರ್ಮಿಸಿ ತಾಯಿ ಚನ್ನಮ್ಮಾಜೀಯವರ ಶೌರ್ಯ, ಸಾಹಸದ ಯಶೋಗಾಥೆಯನ್ನು ಮತ್ತು ಕಿತ್ತೂರು ನಾಡಿನ ವೀರ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಈಗಾಗಲೇ ಕೇವಲ ರೂ.೩೦ ಲಕ್ಷದಲ್ಲಿ ಆಚರಿಸಲಾಗುವ ಚನ್ನಮ್ಮನ ಕಿತ್ತೂರು ಉತ್ಸವವಕ್ಕೆ ಹೆಚ್ಚಿನ ಮೆರುಗು ತಂದು ಸರಕಾರದಿಂದ ಈಗಾಗಲೇ ಪ್ರತಿವರ್ಷ ೧ ಕೋಟಿ ಅನುದಾನ ತಂದು ನಾಡಿನ ಹೆಸರಾಂತ ಕಲಾವಿದರನ್ನು ಕರೆಸಿ ಉತ್ಸವಕ್ಕೆ ಮೆರಗು ತಂದರು. ಆದರೆ ಅವರ ದೂರದೃಷ್ಠಿಯ ಕನಸು ಅಷ್ಟೆಕ್ಕೆ ಪುಲ್ ಸ್ಟಾಪ್ ನೀಡದೆ ಚನ್ನಮ್ಮಾಜೀಯ ಕಿತ್ತೂರು ಉತ್ಸವ ರಾಜ್ಯಮಟ್ಟದಲ್ಲಿ ಆಚರಿಸುವಂತಾಗಬೇಕು, ಉತ್ಸವಕ್ಕೆ ಪ್ರತಿವರ್ಷ ರೂ.೫ ಕೋಟಿ ನೀಡಬೇಕು, ಉತ್ಸವ ೫ ದಿನಗಳ ಕಾಲ ಆಚರಿಸಬೇಕು ಎಂದು ಪ್ರಸ್ತಾವನೆ ಸಲ್ಲಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈಗಾಗಲೇ ಸರಕಾರದ ಮಟ್ಟದಲ್ಲಿ ಕಡತವಿದ್ದು ಮುಖ್ಯಮಂತ್ರಿಗಳು ಕೂಡಲೇ ಆದೇಶ ಹೊರಡಿಸಲು ಸಂಬಂಧಪಟ್ಟವರಿಗೆ ಸೂಚಿಸಿದ್ದಾರೆ. ಆ ನಿಟ್ಟಿನಲ್ಲಿ ಈಗಾಗಲೇ ಸರಕಾರದ ಮಟ್ಟದಲ್ಲಿ ಚರ್ಚೆ ಆರಂಭವಾಗಿದೆ.
ಕಿತ್ತೂರು ಕರ್ನಾಟಕದ ಕನಸುಗಾರರಾದ ಶಾಸಕರು, ರೂಢಿಗತವಾಗಿ ಮುಂಬೈ ಕರ್ನಾಟಕ ಅಂತಾ ಕರೆಯಿಸಿಕೊಳ್ಳುತ್ತಿದ್ದ ಈ ಭಾಗದ ೭ ಜಿಲ್ಲೆಯನ್ನೊಳಗೊಂಡ ಪ್ರದೇಶಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಲು ಹತ್ತಾರು ವರ್ಷ ಹಲವಾರು ಕನ್ನಡಪರ ಹೋರಾಟಗಾರರ ಹೋರಾಟಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕಿತ್ತೂರು ಉತ್ಸವಕ್ಕೆ ಬಂದ ಸಂದರ್ಭದಲ್ಲಿ ಗಮನಕ್ಕೆ ತಂದರು. ತದನಂತರ ೮ ದಿನಗಳ ಅಂತರದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ಭಾಗದ ೭ ಜಿಲ್ಲೆಯನ್ನೊಳಗೊಂಡ ಪ್ರದೇಶಕ್ಕೆ ಕಿತ್ತೂರು ಕರ್ನಾಟಕವೆಂದು ನಾಮಕರಣ ಮಾಡಲು ಅನುಮೋದನೆ ಪಡೆದಿದ್ದಾರೆ. ಆದರೆ ಕೇವಲ ಘೋಷಣೆ ಮಾಡಿದರೆ ಸಾಲದು ಕಿತ್ತೂರು ಕರ್ನಾಟಕ ಅಭಿವೃದ್ದಿ ಮಂಡಳಿ ಸ್ಥಾಪಿಸಬೇಕು ಈ ಭಾಗದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಬರಡು ಭೂಮಿಗೆ ನೀರು ಹರಿಸುವ ಹೆಬ್ಬಯಕೆ
ಚಚಡಿ ಏತ ನೀರಾವರಿ ಯೋಜನೆ ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಒಣ ಬೇಸಾಯ ಪ್ರದೇಶ ನೇಸರಗಿ ಭಾಗದಲ್ಲಿ ರೈತರ ಸಂಕಷ್ಠಕ್ಕೆ ಪೂರ್ಣ ವಿರಾಮ ನೀಡಬೇಕು ಎಂದು ನಿಶ್ಚಯಿಸಿ ನೇಸರಗಿ ಭಾಗದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು, ಈಗಾಗಲೇ ಯಡಿಯೂರಪ್ಪನವರ ಆಡಳಿತಾವಧಿಯಲ್ಲಿ ಮಂಜೂರಾಗಿದ್ದ ಚಚಡಿ ಏತ ನೀರಾವರಿ ಯೋಜನೆಯ ಧೂಳು ಹಿಡಿದಿದ್ದ ಕಡತವನ್ನು ಹುಡುಕಿ ತೆಗೆದು ಕಾಮಗಾರಿ ಆರಂಭಕ್ಕೆ ಚಾಲನೆ ನೀಡಲಾಗಿದೆ.
ಶ್ರೀ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆ
ಅದರಂತೆ ಈ ಭಾಗದ ಸಮಗ್ರ ನೀರಾವರಿಗೆ ಈ ಒಂದು ಯೋಜನೆಯಿಂದ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಂಡು, ಇದೀಗ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರ ಸಹಕಾರದಿಂದ ಚನ್ನವೃಷಬೇಂದ್ರ ಏತ ನೀರಾವರಿ ಯೋಜನೆಗೆ ಸುಮಾರು ರೂ.೭೧೩.೦೦ ಕೋಟಿ ಅನುದಾನ ಮಂಜೂರು ಮಾಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳನ್ನು ಕರೆಯಿಸಿ ಭೂಮಿ ಪೂಜೆ ಮಾಡಿಸುವ ಬಯಕೆ ಇವರದಾಗಿದೆ.
ಕೆರೆ ತುಂಬಿಸುವ ಯೋಜನೆ
ಈ ಹಿಂದಿನ ಸರಕಾರದಿಂದ ಆಡಳಿತಾತ್ಮಕ ಅನುಮೋದನೆ ಆಗಿದ್ದ ಕೆರೆ ತುಂಬಿಸುವ ಯೋಜನೆಯ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ ಸರಕಾರದ ಮಟ್ಟದಲ್ಲಿ ನಿರಂತರ ಪಾಲೋವಪ್ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಒಟ್ಟಾರೆ ನೀರಾವರಿ ಇಲಾಖೆಯಿಂದ ರೂ.೯೯೫.೦೦ ಕೋಟಿ ಅನುದಾನ ತರಲಾಗಿದೆ.
ಜಲ ಜೀವನ ಮಿಶನ್ ಯೋಜನೆ
ಪ್ರಧಾನಮಂತ್ರಿಗಳ ಕನಸಿನ ಯೋಜನೆ ಜಲ ಜೀವನ ಮಿಶನ್ ಯೋಜನೆಯನ್ನು ರೂ.೧೨೦.೦೦ ಕೋಟಿ ಅನುದಾನದಲ್ಲಿ ಸಮರ್ಪಕವಾಗಿ ಅಳವಡಿಸಿಕೊಂಡು ಕ್ಷೇತ್ರದಲ್ಲಿ ಪ್ರತಿ ಮನೆಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಸಮಗ್ರ ಕಿತ್ತೂರು ಕ್ಷೇತ್ರದ ಎಲ್ಲ ಗ್ರಾಮಗಳ ಪ್ರತಿ ಮನೆ ಮನೆಯ ಈ ನಳಗಳಿಗೆ ನವಿಲು ತೀರ್ಥ ಡ್ಯಾಂ ನಿಂದ ನೀರನ್ನು ಪೂರೈಸಲು ಯರಜರ್ವಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ದೇಗಾಂವ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ನಿರಂತರ ಪರಿಶ್ರಮದಿಂದ ರೂ.೯೭೫.೦೦ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಕಿತ್ತೂರು ಕ್ಷೇತ್ರದ ವ್ಯಾಪ್ತಿಯಲ್ಲಿ ರೂ.೪೮೨ ಕೋಟಿ ಅನುದಾನ ವೆಚ್ಚ ಮಾಡಲಾಗುವದು ಎಂದು ಶಾಸಕರು ತಿಳಿಸಿದ್ದಾರೆ.
ಕಿತ್ತೂರು ೧೦೦ ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣ
ಕಿತ್ತೂರಿನಲ್ಲಿ ರೂ.೩೪.೦೦ ಕೋಟಿ (ಇದರಲ್ಲಿ ೧೯ ಕೋಟಿ ಆಡಳಿತಾತ್ಮಕ ಅನುಮೋದನೆ ಬಾಕಿ ಇದೆ) ಅನುದಾನದಲ್ಲಿ ಸುಸಜ್ಜಿತ ೧೦೦ ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣದ ಜೊತೆಗೆ ಆರೋಗ್ಯ ಕ್ಷೇತ್ರಕ್ಕೆ ರೂ.೪೦.೫೦ ಕೋಟಿ ಅನುದಾನ ತಂದು ಕ್ಷೇತ್ರದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ನಿರ್ಮಾಣ, ದುರಸ್ಥಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ಮನುಷ್ಯನ ದಿಕ್ಕನ್ನು ಬದಲಾಯಿಸುವ ಶಕ್ತಿಯಿರುವುದು ಶಿಕ್ಷಣಕ್ಕೆ ಎಂಬುವದನ್ನು ಅರಿತ ಶಾಸಕರು ಶಿಕ್ಷಣ ಕ್ಷೇತ್ರದ ಮೂಲಭೂತ ಸೌಕರ್ಯಗಳ ಸುಧಾರಣೆಗೆ ಮತ್ತು ಉತ್ತಮ ಕಲಿಕಾ ವಾತಾವರಣ ನಿರ್ಮಾಣಕ್ಕೆ ಕಟಿಬದ್ದರಾಗಿ ವನ್ನೂರು ಗ್ರಾಮದಲ್ಲಿ ೨೧ ಕೋಟಿ ವೆಚ್ಚದಲ್ಲಿ ೧೦೦ ಹಾಸಿಗೆಗಳ ತಾಲೂಕಾ ಆಸ್ಪತ್ರೆ ನಿರ್ಮಾಣದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಮತ್ತು ರೂ.೨೩.೩೨ ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕಟ್ಟಡ ನಿರ್ಮಾಣ, ದುರಸ್ಥಿ ಕಾಮಗಾರಿ, ಕಿತ್ತೂರು ಮತ್ತು ಪದವಿ ಮಹಾವಿದ್ಯಾಲಯಗಳ ಕಟ್ಟಡಕ್ಕೆ ರೂ.೫.೨೫ ಕೋಟಿ, ಕಿತ್ತೂರು, ನೇಸರಗಿ, ಸಂಪಗಾಂವ, ನಾಗನೂರ ಹಾಗೂ ಪಿಯು ಕಾಲೇಜುಗಳ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ರೂ.೫.೧೮ ಕೋಟಿ, ಗ್ರಂಥಾಲಯಗಳ ನಿರ್ಮಾಣಕ್ಕೆ ರೂ.೧.೨೦ ಕೋಟಿ ಹುಣಶೀಕಟ್ಟಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ೧೪ ಕೊಠಡಿಗಳ ನಿರ್ಮಾಣಕ್ಕೆ ರೂ.೨.೦೦ ಕೋಟಿ ಅನುದಾನ ನೀಡಲಾಗಿದೆ ಎಂದರು.
ಸಹಕಾರಿ ರಂಗದ ದೃವತಾರೆ
ಸಹಕಾರ ಕ್ಷೇತ್ರದ ಮೂಲಕ ಜನಸೇವೆಗೆ ಅವಕಾಶ ಸಿಕ್ಕನಂತರ ತಾವು ಪ್ರತಿನಿಧಿಸುವ ನೂರಾರು ಸಂಘ ಸಂಸ್ಥೆಗಳು, ಬಿಡಿಸಿಸಿ ಬ್ಯಾಂಕ್ ಮೂಲಕ ರೈತರಿಗೆ ಆರ್ಥಿಕ ನೆರವು, ಸಾಲ ಸಹಾಯ, ನೀಡುವ ಮೂಲಕ ರೈತರ ಕಷ್ಟಗಳಲ್ಲಿ ಭಾಗಿಯಾಗಿ ಅವರಿಗೆ ನೆರವಾದರು. ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಣೆ, ಸಕಾಲಕ್ಕೆ ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ಕೊಡಿಸಿದರು. ಈ ಕೆಲಸಕ್ಕೆ ಅವರು ಸ್ಥಾಪಿಸಿದ ನೂರಾರು ಪಿಕೆಪಿಎಸ್ಗಳ ಕಾರ್ಯ ನಿರ್ವಹಣೆಯಿಂದ ಸಾಧ್ಯವಾಯಿತು. ಬಿಡಿಸಿಸಿ ಬ್ಯಾಂಕ್ ನ ಬೈಲಹೊಂಗಲ ಮತ್ತು ಕಿತ್ತೂರು ತಾಲೂಕುಗಳನ್ನು ಪ್ರತಿನಿಧಿಸುವ ಅವರು ಪ್ರಥಮವಾಗಿ ಕಣ್ಣು ಹರಿಸಿದ್ದೇ, ಬೆಳಗಾವಿ ಜಿಲ್ಲೆ ದಿಗ್ಗಜ ನಾಯಕರ ಮಧ್ಯ ಸಹಕಾರಿ ಸಾಲದಿಂದ ವಂಚಿತ ಈ ಎರಡು ಅವಳಿ ತಾಲೂಕಿನ ರೈತರಿಗೆ ಹೆಚ್ಚಿನ ಸಾಲ ನೀಡಬೇಕು ಮತ್ತು ಅವರ ಕಷ್ಠದಲ್ಲಿ ಭಾಗಿಯಾಗಬೇಕು ಎಂಬುವುದಾಗಿತ್ತು.
ಬಿಡಿಸಿಸಿ ಬ್ಯಾಂಕ್ ನ ಒಂದೊಂದು ಮೆಟ್ಟಿಲೇರುತ್ತಾ ತಮ್ಮ ಚಾಣಾಕ್ಷ ನಡೆಯಿಂದ ಅವರು ಮೊದಲು ಈ ಎರಡು ತಾಲೂಕುಗಳಲ್ಲಿ ಕೇವಲ ರೂ.೫೦.೦೦ ಕೋಟಿ ಸಾಲ ವಿತರಣೆ ಇದ್ದಿದ್ದನ್ನು, ಪ್ರಸ್ತುತ ೧೦೮ ಪಿಕೆಪಿಎಸ್ ಸಂಘಗಳ ಮೂಲಕ ೪೭ ಸಾವಿರದಾ ೧೯೬ ರೈತರಿಗೆ ರೂ.೨೫೫.೭೭ ಕೋಟಿ ಶೂನ್ಯ ಬಡ್ಡಿಯ ಸಾಲ ನೀಡಿದ್ದಾರೆ. ಅದರಂತೆ ೧೨೨ ಸ್ವಸಹಾಯ ಸಂಘಗಳ ಮೂಲಕ ೨.೩೩ ಕೋಟಿ ದುಡಿಯುವ ಬಂಡವಾಳ ನೀಡಿದ್ದಾರೆ. ೧೧೧ ರೈತರಿಗೆ ಟ್ಯಾಕ್ಟರ್ ಸಾಲ ರೂ.೪.೮೪ ಕೋಟಿ ನೀಡಿದ್ದಾರೆ.
ಸರಕಾರದ ಸಾಲ ಮನ್ನಾ ಯೋಜನೆಯಡಿ ಅವಧಿಯಲ್ಲಿ ೨೫ ಸಾವಿರ ಸಾಲಮನ್ನಾ ಯೋಜನೆಯಡಿ ೮೭ ಕೋಟಿ ಸಾಲಮನ್ನಾ ಆಗಿದೆ. ೫೦ ಸಾವಿರ ಸಾಲಮನ್ನಾ ಯೋಜನೆಯಡಿ ೩೦೪೮೦ ರೈತರಿಗೆ ೯೯.೪೫ಕೋಟಿ ಸಾಲಮನ್ನಾ ಆಗಿದೆ. ೧ ಲಕ್ಷ ಸಾಲಮನ್ನಾ ಯೋಜನೆಯಡಿ ೨೮೫೬೯ ರೈತರ ೧೧೯.೬೦ ಕೋಟಿ ಸಾಲಮನ್ನಾ ಆಗಿದೆ. ಇದರಿಂದ ಕ್ಷೇತ್ರದ ರೈತರ ಸಂಕಷ್ಠಕ್ಕೆ ಸ್ಪಂದಿಸಲಾಗಿದೆ.
ಪಿಕೆಪಿಎಸ್ ಗಳ ಬಲವರ್ಧನೆಗಾಗಿ ಗ್ರಾಮೀಣ ಗೋಡೌನ್ ಗಳ ನಿರ್ಮಾಣಕ್ಕೆ ರೂ.೪.೦೦ ಕೋಟಿ ಅನುದಾನ ನೀಡಿದ್ದಾರೆ.
ಬೈಲಹೊಂಗಲ ಟಿಎಪಿಸಿಎಂಎಸ್, ಕಿತ್ತೂರು ಟಿಎಪಿಸಿಎಂಎಸ್, ಕಿತ್ತೂರು ಪಿಎಲ್ಡಿ ಬ್ಯಾಂಕ್ ಈ ರೀತಿ ರೈತೋಪಕಾರಿ ಸಂಘ ಸಂಸ್ಥೆಗಳನ್ನು ಸ್ಥಾಪಿಸಿ, ರೈತರ ನೆರವಿಗೆ ಬಂದಿದ್ದಾರೆ.
ದೊಡ್ಡಗೌಡರು ಕೈ ಹಾಕಿದಲ್ಲಿ ಬಂಗಾರ ಬೆಳೆ ಬೆಳದಿದ್ದಾರೆ ಎಂಬುವದಕ್ಕೆ ಸಾಕ್ಷಿ ಅವರು ರಾಜ್ಯ ಸಹಕಾರ ಮರಾಟ ಮಹಾಮಂಡಳದ ಉಪಾಧ್ಯಕ್ಷರಾಗಿದ್ದಾಗ ಇವರು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ೧೮ ಕೋಟಿ ನಷ್ಟದಲ್ಲಿದ್ದ ಸಂಸ್ಥೆಯನ್ನು ಇವರು ಅಧಿಕಾರ ಮುಗಿಸಿ ಬರುವಾಗ ರೂ.೨೫೦.೦೦ ಕೋಟಿ ಲಾಭ ಮಾಡಿಕೊಟ್ಟು ಬಂದಿರುವದು ಇದಕ್ಕೆ ಸಾಕ್ಷಿ.
ಧಾರ್ಮಿಕ ಕ್ಷೇತ್ರಕ್ಕೆ ಕೊಡುಗೈ ದಾನಿ
ಕ್ಷೇತ್ರದ ಧಾರ್ಮಿಕ ಕ್ಷೇತ್ರಗಳಿಗೆ ಸರಕಾರದಿಂದ ಈಗಾಗಲೇ ದೇವಸ್ಥಾನ, ಮಠಗಳ ಅಭಿವೃದ್ಧಿಗೆ ೫ ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ. ಅದರಂತೆ ಕ್ಷೇತ್ರದ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಕ್ಕೆ, ಜಾತ್ರೆ, ನಾಟಕ, ಚಕ್ಕಡಿ ಶರ್ಯತ್ತು, ಕ್ರೀಡೆಗಳಿಗೆ ವೈಯಕ್ತಿಕವಾಗಿ ಉದಾರ ಕೊಡುಗೆ ನೀಡಿದ್ದಾರೆ.
ರಸ್ತೆಗಳಿಗೆ ಸುಧಾರಣೆ ಭಾಗ್ಯ
ಕ್ಷೇತ್ರದ ಹಲವಾರು ವರ್ಷಗಳಿಂದ ಅಭಿವೃದ್ದಿ ಕಾಣದಿರುವ ರಸ್ತೆಗಳ ನಿರ್ಮಾಣಕ್ಕೆ ಈಗಾಗಲೇ ರೂ.೩೦೦.೫೦ ಕೋಟಿ ಅನುದಾನ ತಂದು ರಸ್ತೆಗಳ ಸುದಾರಣೆಗೆ ಕ್ರಮಕೈಗೊಳ್ಳಲಾಗಿದೆ.
ಪ್ರಮುಖ ರಸ್ತೆಗಳ ಅಭಿವೃದ್ಧಿ..
ನೇಸರಗಿಯಿಂದ ವನ್ನೂರ ೨೧.೦೦ ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡೆಸಲಾಗುತ್ತಿದೆ
ಕಿತ್ತೂರು ಕುಲವಳ್ಳಿ ಅಳ್ನಾವರ ರಸ್ತೆ ಅಭಿವೃದ್ಧಿ ಪಡೆಸಲಾಗಿದೆ.
ಮದಲಭಾಂವಿ ಲಕ್ಕುಂಡಿ ರಸ್ತೆ ಅಭಿವೃದ್ಧಿ ಪಡೆಸಲಾಗಿದೆ.
ಎಂ.ಕೆ.ಹುಬ್ಬಳ್ಳಿ ಯರಡಾಲ ಕ್ರಾಸ್ ಅಭಿವೃದ್ಧಿ ಪಡಿಸಲಾಗಿದೆ.
ವನ್ನೂರು ಮೇಲಕಮರಡಿ ಕ್ರಾಸ್
ಎನ್.ಎಚ್೪ ಹುಲಿಕಟ್ಟಿ ಕೋಟಬಾಗಿ
ದೇಶನೂರುದಿಂದ ದೇಶನೂರು ಕ್ರಾಸ್
ಮಲ್ಲಾಪುರ -ಸಂಗೊಳ್ಳಿ, ದೇಮಟ್ಟಿ – ಮಲ್ಲಾಪುರ,ಮಲ್ಲಾಪುರ- ಅವರಾದಿ
ಹುಣಶೀಕಟ್ಟಿ – ಇಟಗಿ ಕ್ರಾಸ್
ಕಲಭಾಂವಿ – ಹಿರೇನಂದಿಹಳ್ಳಿ
ಬಸ್ಸಾಪುರ – ಉಗರಕೋಡ- ತೇಗೂರ
ಹೋನ್ನಾಪುರ – ಕುಲವಳ್ಳಿ, ಹುಲಿಕಟ್ಟಿ – ಕೋಟಬಾಗಿ
ಕಿತ್ತೂರು ಅರಳ್ಳಿಕಟ್ಟೆಯಿಂದ – ಮಲ್ಲಾಪುರ, ನಿಚ್ಚನಕ್ಕಿ – ಶಿವನೂರ
ತಿಗಡಿ ಕ್ರಾಸ್ ಜಕನಾಯ್ಕನಕೊಪ್ಪ, ಸಂಪಗಾಂವ – ಕರಡಿಗುದ್ದಿ
ನಾಗನೂರು ಕ್ರಾಸ್ – ಲಕ್ಕುಂಡಿ, ಮರಕಟ್ಟಿ -ತಿಗಡಿ ಗಿರಿಯಾಲ
ಮಲ್ಲಾಪುರ- ಹೊಸಕೋಟಿ, ಹಣ್ಣಬರಟ್ಟಿ – ಗಜಮನಾಳ
ಬೈಲೂರ- ದೇವರಶಿಗೀಹಳ್ಳಿ, ಕಿತ್ತೂರು – ತಿಗಡೋಳಿ ಹಿಗೆ ಮುಂತಾದವುಗಳು.
ರೈತರ ಹೊಲಗಳಿಗೆ ಹೋಗುವ ರಸ್ತೆ ಸುಧಾರಣೆಗೆ ರೂ.೭೮.೧೫ ಕೋಟಿ ಅನುದಾನ ತಂದು ರೈತರ ಹೊಲಗಳ ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗಿದೆ.
ಸುತಗಟ್ಟಿ – ಹನಮ್ಯಾನಟ್ಟಿ, ಯರಗುದ್ದಿ – ಬೈರನಟ್ಟಿ- ಹನಮ್ಯಾನಟ್ಟಿ.
ಚಿಕ್ಕನಂದಿಹಳ್ಳಿಕ್ರಾಸ್- ಚಿಕ್ಕನಂದಿಹಳ್ಳಿ, ಹಿರೇನಂದಿಹಳ್ಳಿ ಖೋದಾನಪೂರ
ನಾಗನೂರ ಮುರ್ಕಿಭಾಂವಿ, ತಿಗಡಿ ಚಿಕ್ಕಬಾಗೇವಾಡಿ.
ಅಂಬಡಗಟ್ಟಿ ತೇಗೂರ, ಜಮಳೂರ- ತುರಕರಶಿಗೀಹಳ್ಳಿ ಹಿಗೆ ಮುಂತಾದವುಗಳು.
ಕಿತ್ತೂರು ಮತ್ತು ಎಂ.ಕೆ.ಹುಬ್ಬಳ್ಳಿ ಪಟ್ಟಣಗಳ ಸಮಗ್ರ ಅಭಿವೃದ್ದಿಗೆ ಈಗಾಗಲೇ ಸರಕಾರದಿಂದ ರೂ.೨೦ ಕೋಟಿ ಅನುದಾನದಲ್ಲಿ ಕ್ರಮಕೈಗೊಳ್ಳಲಾಗಿದೆ.
ಕಿತ್ತೂರು ತಾಲೂಕಾ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಈಗಾಗಲೇ ಅಸ್ತಿತ್ವದಲ್ಲಿರುವ ಸರಕಾರಿ ಕಚೇರಿಗಳ ಜೊತೆಗೆ ಇನ್ನೂಳಿದ ಸರಕಾರಿ ಕಚೇರಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ.ಅದಕ್ಕೇ ಸಾಕ್ಷಿ ಎಂಬಂತೆ ಅಗ್ನಿಶಾಮಕ, ತಾಲೂಕಾ ಪಂಚಾಯತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಪಶು ಸಂಗೋಪನೆ ಸಹಾಯಕ ನಿರ್ದೇಶಕರ ಕಚೇರಿ, ಕೃಷಿ ಸಹಾಯಕ ನಿರ್ದೇಶಕರ ಕಚೇರಿ,ಬಸ್ ಡಿಪೋ, ತಾಲೂಕಾ ಆಸ್ಪತ್ರೆ, ತಾಲೂಕಾ ಕ್ರೀಡಾಂಗಣ, ಮುಂತಾದ ತಾಲೂಕಾ ಕಚೇರಿಗಳನ್ನು ಆರಂಭಿಸಲಾಗಿದೆ.
ಸಮಾಜದ ಕೆಲಸ ಒಂದೆಡೆಯಾದರೆ, ಇನ್ನೊಂದೆಡೆ ಕ್ಷೇತ್ರದ ಜನರ ವೈಯಕ್ತಿಕ ಕೆಲಸ ಕಾರ್ಯಗಳನ್ನು ಕೂಡ ಮಾಡಿಸಿಕೊಟ್ಟು ಜನರ ಕಷ್ಟಗಳಿಗೆ ಅತ್ಯಂತ ಚುರುಕುನಿಂದ ಸ್ಪಂದಿಸುತ್ತಿದ್ದಾರೆ. ಪ್ರತಿನಿತ್ಯ ಬೆಳಿಗ್ಗೆ ೧೦ ಗಂಟೆಗೆ ಕಚೇರಿಗೆ ಆಗಮಿಸುವ ಶಾಸಕರು ಸುಮಾರು ಮೂರು ಗಂಟೆಗಳ ಕಾಲ ದಿನನಿತ್ಯ ಜನರ ಅಹವಾಲನ್ನು ಆಲಿಸುತ್ತಾರೆ. ಅವರ ಕಷ್ಟಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹಾರ ಒದಗಿಸುತ್ತಾರೆ.
ನೈಸರ್ಗಿಕ ವಿಪತ್ತುಗಳ ನಡುವೆಯೂ ಮಿಂಚಿದ ಶಾಸಕರು
ಕಳೆದ ೨ ವರ್ಷ ವಿಪರೀತ ಮಳೆಯಾಗಿ ರಾಜ್ಯದ ಜನರು ಅಕ್ಷರಶಃ ತತ್ತರಿಸಿ ಹೋದರು. ಅದರಲ್ಲೂ ಉ.ಕ. ಭಾಗದ ಜನರು ಆಸ್ತಿ, ಪಾಸ್ತಿ, ಮನೆ, ಮಠ ಕಳೆದುಕೊಂಡು ಬೀದಿ ಪಾಲಾದರು. ಇಂತಹ ಅತ್ಯಂತ ಕಠಿಣ ಸಂದರ್ಭದಲ್ಲಿ ಕಿತ್ತೂರ ಮತಕ್ಷೇತ್ರದಲ್ಲಿಯೂ ವಿಪರೀತ ಮಳೆಯಿಂದ ಮನೆ, ಮಠ ಆಸ್ತಿ, ಪಾಸ್ತಿ ಕಳೆದುಕೊಂಡಾಗ ಕ್ಷೇತ್ರದ ಶಾಸಕರಾಗಿ ಮಹಾಂತೇಶ ದೊಡ್ಡಗೌಡರ್ ಅವರು ಬಿಟ್ಟು ಬಿಡದೇ ಮಳೆಯಲ್ಲಿಯೇ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ಅಷ್ಟೇ ಅಲ್ಲ ಅವರಿಗೆ ರಾಜ್ಯ ಸರಕಾರದಿಂದ ಸಿಗುವ ಪರಿಹಾರವನ್ನು ಕೊಡಿಸುವಲ್ಲಿ ಯಶಸ್ವಿಯಾದರು.
ಕೋವಿಡ್-೧೯ (ಕೊರೋನಾ) ದಾಳಿ:
ನೆರೆ ಪರಿಹಾರ ಕಾರ್ಯಗಳಿಗೆ ಇನ್ನು ರಾಜ್ಯ ಸರಕಾದಿಂದ ಪರಿಹಾರ ಕೆಲಸ ಕಾರ್ಯಗಳು ನಡೆದಿರುವಾಗಲೇ ಮತ್ತೊಂದು ಆಘಾತ ರಾಜ್ಯ ಹಾಗೂ ದೇಶ ವಿದೇಶಗಳ ಜೊತೆಗೆ ಕಿತ್ತೂರ ಮತಕ್ಷೇತ್ರಕ್ಕೆ ಎದುರಾಯಿತು. ಅದುವೇ ಕೋವಿಡ್-೧೯ ( ಕೊರೋನಾ) ಎಂಬ ಮಹಾಮಾರಿ. ಆರಂಭದ ಒಂದೆರಡು ತಿಂಗಳು ಕೋವಿಡ್ ದೇಶಕ್ಕೆ ಬಂದಿದ್ದರೂ ಕ್ಷೇತ್ರದ ಜನರು ಆರಾಮವಾಗಿದ್ದರು. ಆದರೆ ತದನಂತರ ರಾಜ್ಯದಲ್ಲಿ ವೈರಸ್ ಹೆಚ್ಚಾದ ನಂತರ ಕ್ಷೇತ್ರಕ್ಕೂ ಕೋವಿಡ್ ದಾಳಿ ಇಟ್ಟಿತ್ತು.
ಈ ಹಂತದಲ್ಲಿ ಮೊದಲೆರಡು ತಿಂಗಳು ಕೊರೋನಾ ಲಾಕ್ಡೌನ್ನಿಂದ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಬಿತ್ತು. ಆಗ ಕೆಲಸ ಕಳೆದುಕೊಂಡ ಬಡ ಕಾರ್ಮಿಕರ ಸ್ಥಿತಿ ಚಿಂತಾಜನಕವಾಯಿತು. ಕೋವಿಡ್-೧೯ ಕ್ಷೇತ್ರಕ್ಕೆ ನುಸುಳದಂತೆ ಬೇಲಿ ಹಾಕುವ ಉದ್ದೇಶದಿಂದ ನಿರಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕ್ಷೇತ್ರದಾದ್ಯಂತ ಸ್ಯಾನಿಟೈಜರ್, ೧.೦೦ ಲಕ್ಷ ಮಾಸ್ಕ ವಿತರಣೆ, ವೈಯಕ್ತಿಕವಾಗಿ ಉಚಿತವಾಗಿ ೧೨ ಸಾವಿರ ಗುಳಿಗೆ , ಔಷಧಿ ವಿತರಣೆ ಹಾಗೂ ಕ್ಷೇತ್ರದ ಬಡ ಕೂಲಿ ಕಾರ್ಮಿಕರಿಗೆ ನೆರವಾಗುವ ಉದ್ದೇಶದಿಂದ ಸಾವಿರಾರು ಆಹಾರ ಕಿಟ್ಗಳನ್ನು ಕ್ಷೇತ್ರದಾದ್ಯಂತ ಹಂಚಿದರು. ಇದರಲ್ಲಿ ದಾನಿಗಳು ಕೈ ಜೋಡಿಸಿದರು. ಕಿತ್ತೂರ ಮತಕ್ಷೇತ್ರದಾದ್ಯಂತ ಸೀಲ್ಡೌನ್ ಆದ ಪ್ರದೇಶಗಳಲ್ಲಿ ಆಹಾರ ಪಾಕೀಟ್ಗಳನ್ನು ವಿತರಿಸುವ ಮೂಲಕ ಕೊರೋನಾ ಸೋಂಕಿತರು ಹಾಗೂ ಸಂಬಂಧಿಕರ ಕಷ್ಟದಲ್ಲಿ ಭಾಗಿಯಾದರು.
ದಣಿವರಿಯದ ನಾಯಕ:
ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡರ ಅವರಿಗೆ ದಣಿವು ಅಂದರೆ ಗೊತ್ತಿಲ್ಲ. ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿ ವಾಪಸ್ಸಾದ ಒಂದು ಎರಡು ಗಂಟೆ ಕೂಡ ಮನೆಯಲ್ಲಿರದೇ ಕಚೇರಿಗೆ ಬಂದವರೇ ತಮ್ಮ ಮುಂದಿನ ಕಾರ್ಯಕ್ರಮಗಳನ್ನು ನೋಡಿಕೊಂಡು ಆ ಕೆಲಸಗಳತ್ತ ಲಕ್ಷ್ಯ ವಹಿಸುತ್ತಾರೆ. ಆಫೀಸ್ನಲ್ಲಿ ಜನರ ಅಹವಾಲು ಕೇಳಿ ೧೧:೩೦ ಕ್ಕೆ ಆಫೀಸ್ನಿಂದ ತೆರಳಿದರೆಂದರೆ ಹಳ್ಳಿಗಳ ಭೇಟಿ, ಕಾಮಗಾರಿಗಳಿಗೆ ಚಾಲನೆ ಅಲ್ಲಿಯೂ ಕೂಡ ಜನರ ಕಷ್ಟಗಳನ್ನು ಆಲಿಸುವುದು, ಅವುಗಳಿಗೆ ಪರಿಹಾರ ಒದಗಿಸುವುದು ಅವರ ದಿನನಿತ್ಯದ ಕೆಲಸ. ಅಗತ್ಯ ವಿಶ್ರಾಂತಿ ಕಡೆ ಕೂಡ ಗಮನ ನೀಡದೇ ಸದಾ ಜನರ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿಯೇ ಅವರ ಗಮನ.
ಕೋವಿಡ್-೧೯ ಸಂದರ್ಭದಲ್ಲಿ ಕೆಲಸ ಕಳೆದುಕೊಂಡು ಹತಾಶರಾದ ಕಡುಬಡವರಿಗೆ ಕಾರ್ಮಿಕ ಇಲಾಖೆಯಿಂದ ಕೊಡ ಮಾಡುವ ಜಾಬ್ ಕಾರ್ಡ್ ಸೌಲಭ್ಯ ಒದಗಿಸಲು ಸಂಕಲ್ಪ ತೊಟ್ಟ ಶಾಸಕರು ತಮ್ಮ ಆಪ್ತ ಸಹಾಯಕರಿಂದ ಬಡ ಕೂಲಿಕಾರ್ಮಿಕರಿಗೆ ಇದರ ಸೌಲಭ್ಯಗಳು ಸಿಗುವಂತೆ ಮಾಡಿದರು. ಇದರಿಂದ ನೂರಾರು ಬಡ ಕೂಲಿ ಕಾರ್ಮಿಕರ ಕುಟುಂಬಗಳು ಸರಕಾರಿ ಸೌಲಭ್ಯ ಗಳನ್ನು ಪಡೆದು ಕಷ್ಟದಿಂದ ಪಾರಾಗುವಂತೆ ಆಯಿತು.
ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ:
ಶಾಸಕರು ಶಿಕ್ಷಣ ಕ್ಷೇತ್ರಕ್ಕೆ ಈವರೆಗೆ ಹೆಚ್ಚಿನ ಒತ್ತು ನೀಡಿದ್ದು, ಶಾಲಾ ಕಾಲೇಜುಗಳ ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ, ವಿದ್ಯಾರ್ಥಿಗಳಿಗೆ ಲ್ಯಾಪ್ಟ್ಯಾಪ್ ವಿತರಣೆ, ಸಮಾನ ಶಿಷ್ಯವೇತನವನ್ನು ಸರಕಾರದಿಂದ ಕೊಡಿಸಲು ಯತ್ನಿಸಿದ್ದಾರೆ.
ನೇಸರಗಿಯ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಅನೇಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟ್ಯಾಪ್ ವಿತರಿಸಿ ಸಾವಿರಾರು ಕಾಲೇಜು ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೆರವಾದರು. ಶಾಲಾ ಕಾಲೇಜುಗಳ ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿಸಿದರು. ಕಿತ್ತೂರ ಮತಕ್ಷೇತ್ರದಲ್ಲಿ ಶಿಥಿಲಗೊಂಡ ನೂರಾರು ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ವಹಿಸಿ ಶಾಲಾ ಕಟ್ಟಡಗಳ ದುರಸ್ಥಿಗೆ ಕ್ರಮ ಜರುಗಿಸಿದರು.
ಕ್ಷೇತ್ರದ ಎಲ್ಲ ಶಾಲಾ, ಪ್ರೌಢಶಾಲೆಗಳ ಆಟದ ಮೈದಾನದ ದುರಸ್ಥಿ, ಮೈದಾನ ಸುತ್ತ, ಮುತ್ತ ವಿವಿಧ ಸಸಿಗಳನ್ನು ನೆಡಲು ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳಿಂದ ಸಸಿಗಳನ್ನು ಕೊಡಿಸಿ ಶಾಲೆಗಳ ಮೈದಾನ ಸುತ್ತ ಸಸಿಗಳನ್ನು ನೆಡಲು ಅನುವು ಮಾಡಿಕೊಟ್ಟರು.
ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸುವ ಸಂಬಂಧ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ನಡೆಸಿರುವ ಶಾಸಕರು ಶಾಲಾ ಮಕ್ಕಳಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸರಿಯಾದ ಸಮಯಕ್ಕೆ ಸಿಗುವಂತೆ ಮಾಡಲು ಶಿಕ್ಷಣಾಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಹೀಗೆ ಎಲ್ಲ ರಂಗಗಳಲ್ಲಿ ಅತ್ಯುತ್ತಮ ಕಾರ್ಯನಿರ್ವಹಣೆ ಮಾಡುವ ಮೂಲಕ ಕ್ಷೇತ್ರದ ಮತದಾರರ ಮನಸ್ಸು ಗೆಲ್ಲುವಲ್ಲಿ ಶಾಸಕರು ಸಂಪೂರ್ಣವಾಗಿ ಯಶಸ್ವಿಯಾಗಿದ್ದು, ಅವರ ಶಾಸಕತ್ವದ ಮೊದಲ ಅವಧಿಯ ಮುಂದಿನ ವರ್ಷಗಳಲ್ಲಿಯೂ ಇನ್ನಷ್ಟು ವೇಗದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಜನಸೇವೆ ಮಾಡಲು ಶಾಸಕರು ತುದಿಗಾಲಲ್ಲಿ ನಿಂತಿದ್ದಾರೆ.
https://pragati.taskdun.com/latest/kittur-mlamahantesh-doddagowderashraya-foundation/
https://pragati.taskdun.com/politics/kitturu-utsavaoct-23-24thprachara-samagrimla-mahantesh-doddagoudra/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ