Kannada NewsLatest

ಧಾರ್ಮಿಕತೆಗೆ ವ್ಯಾಖ್ಯಾನ ನೀಡಿದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ನಿಡಸೋಸಿ ಮಠದಲ್ಲಿ ಜರುಗುವ ಮಹಾದಾಸೋಹದ ಅನ್ನಪ್ರಸಾದ ಶಕ್ತಿ, ಭಕ್ತಿ, ಜ್ಞಾನದ ಹಸಿವು ನೀಗಿಸುವ ಪರಮಶಕ್ತಿಯಾಗಿದ್ದು, ಈ ಭಾಗದ ಭಕ್ತರ ಭಕ್ತಿ ಇಡೀ ನಾಡಿಗೆ ಸ್ಪೂರ್ತಿಯಾಗಿದೆ ಎಂದು ಶಿವಮೊಗ್ಗ ಬೆಕ್ಕಿನಕಠ್ಮದ ಜಗದ್ಗುರು ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹೇಳಿದರು.

ನಿಡಸೋಸಿಯ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಮಹಾದಾಸೋಹ ಮಹೋತ್ಸವದಲ್ಲಿ ಅನ್ನಪ್ರಸಾದಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿ ಮಾತನಾಡಿದ ಅವರು, ಧಾರ್ಮಿಕತೆ ಎಂದರೆ ಕೇವಲ ಪ್ರಾರ್ಥನೆಯಿಂದ ದೇವರನೊಲಿಸುವ ಕಾರ್ಯವಲ್ಲ. ಶ್ರಮ, ಕಾಯಕ, ದಾನಗಳ ಮೂಲಕ ಭಕ್ತರು ಮಾಡುವ ವಿಶೇಷ ಭಕ್ತಿ ಪರಂಪರೆಯನ್ನು ಜಗದ್ಗುರು ಪಂಚಮ ಶಿವಲಿಂಗೇಶ್ವರರು ಮಹಾದಾಸೋಹ ಪರಂಪರೆಯನ್ನು ಭವ್ಯವಾಗಿ ಮುಂದುವರೆಸಿದ್ದು, ಭಕ್ತರಿಂದ, ಭಕ್ತಗಾಗಿ, ಭಕ್ತರಿಗೋಸ್ಕರ ನಡೆಯುವ ಈ ಮಹಾದಾಸೋಹ ಭಕ್ತಿಪ್ರಭುತ್ವ ಸಾಧಿಸಿದೆ ಎಂದರು.

ಹುಬ್ಬಳ್ಳಿ-ನಿಡೋಣಿ ಎರಡೆತ್ತಿನಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀಮಠದ ದಾಸೋಹದಲ್ಲಿ ಗಡಿಭಾಗದ ಹಳ್ಳಿಗಳ ಭಕ್ತರು ಅಡುಗೆ ಪಾತ್ರೆಯಿಂದ ಹಿಡಿದು ಪ್ರಸಾದ ಮುಗಿಯುವವರೆಗೆ ತಮ್ಮ-ತಮ್ಮ ಕಾರ್ಯಗಳನ್ನು ಸುವ್ಯವಸ್ಥಿತವಾಗಿ ಹಂಚಿಕೊಂಡು ಮಹಾದಾಸೋಹ ಮಹೋತ್ಸವವನ್ನು ಹಬ್ಬದಂತೆ ಆಚರಿಸುವ ಪರಂಪರೆ ನೋಡ ಸಿಕ್ಕಿರುವುದು ಸೌಭಾಗ್ಯ. ಈ ಭಾಗದ ಭಕ್ತರಿಗೆ ಮಾತೃತ್ವದ ಶಕ್ತಿ ನೀಡಿ ಉತ್ತಮ ಪರಿಸರ ನಿರ್ಮಾಣಕ್ಕೆ ನಿಡಸೋಸಿ ಶ್ರೀಗಳು ಶ್ರಮ ದೊಡ್ಡದಾಗಿದೆ ಎಂದರು.

ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ ದೇವರು ಮಾತನಾಡಿ, ಗಡಿಭಾಗದ ಭಕ್ತರ ಭಕ್ತಿಯ ಪರಿಸರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಸದಾ ಸಮಾಜದ ಹಿತವನ್ನೇ ಬಯಸುವ ಶ್ರೀಗಳ ಮಾರ್ಗದರ್ಶನ ಗಡಿಭಾಗದಲ್ಲಿ ಸಂಸ್ಕೃತಿ-ಸAಸ್ಕಾರಗಳ ಹಿರಿಮೆಯನ್ನು ಹೆಚ್ಚಿಸಲು ಕಾರಣವಾಗಿದೆ ಎಂದರು.

ದಿವ್ಯಸಾನಿಧ್ಯವಹಿಸಿದ್ದ ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಪ್ರತಿವರ್ಷ ಭಕ್ತರು ಪರಸ್ಪರ ಹಂಚಿಕೊAಡು ಯುವಕರು-ಹಿರಿಯರು ಸೇವೆ ತಮ್ಮ ಕಾರ್ಯಗಳನ್ನು ಹಂಚಿಕೊಂಡು ಭಕ್ತಿಯಿಂದ ಮಾಡುವ ಸತ್ಪರಂಪರೆಯಲ್ಲಿ ಎಲ್ಲರೂ ಭಾಗಿಯಾಗಿರುವುದು ಸಂತಸದ ಸಂಗತಿಯಾಗಿದ್ದು, ಸುಮಾರು ೨೫ ಕ್ವಿಂಟಾಲ್‌ನಷ್ಟು ಹುಗ್ಗಿ ಪ್ರಸಾದ ಭಕ್ತರೆ ತಯಾರಿಸಿದ್ದಾರೆ. ಮಹಾದಾಸೋಹ ಪ್ರತಿವರ್ಷ ಸುತ್ತಲಿನ ಹಳ್ಳಿಗಳ ಜನರ ನಡುವೆ ಬಾಂಧವ್ಯವನ್ನು ವೃದ್ಧಿಸುವಲ್ಲಿ ಸಹಕಾರಿಯಾಗಿದೆ ಎಂದರು.

ಮಹಾಪ್ರಸಾದಕ್ಕೆ ಬೆಕ್ಕಿನಕಲ್ಮಠದ ಶ್ರೀಗಳು, ನಿಡೋಣಿ ಶ್ರೀಗಳು, ಚೇತನ ದೇವರು, ಶ್ರೀ ಮಠದ ಹಕ್ಕುದಾರರಾದ ನಣದಿಯ ಶ್ರೀಮಂತ ವಿಜಯಸಿಂಹ ನಾನಾಸಾಹೇಬ ನಿಂಬಾಳಕರ ಸರದೇಸಾಯಿ ಹಾಗೂ ಸಂಕೇಶ್ವರದ ಕಣಗಲಿ ಕುಟುಂಬದಿAದ ಮಹಾಪ್ರಸಾದಕ್ಕೆ ಚಾಲನೆ ನೀಡಲಾಯಿತು.

ಶ್ರೀಮನ್ನಿರಂಜನ ಜಗದ್ಗುರು ಶ್ರೀ ದುರದುಂಡೀಶ್ವರ ಮಹಾಶಿವಯೋಗಿಗಳವರ ಉತ್ಸವ ಮೂರ್ತಿಯ ಪಲ್ಲಕ್ಕಿಯ ಮಹೋತ್ಸವವು ಸಕಲ ವಾದ್ಯ -ವೈಭವ ಬಿರುದಾವಳಿಗಳೊಂದಿಗೆ ವಿಜೃಂಭಣೆಯಿAದ ಜರುಗಿತು. ಪ್ರಸಾದಕ್ಕೆ ೨೫ ಕ್ವಿಂಟಾಲ್ ಹುಗ್ಗಿ, ೩೦ ಕ್ವಿಂಟಾಲ್ ಅನ್ನ, ಸಾಂಬಾರ, ಕಾಯಿಫಲ್ಯೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಚಿಕ್ಕೋಡಿಯ ಸಂಪಾದನಾ ಮಠದ ಚರಮೂರ್ತಿ ಶ್ರೀಗಳು, ಮಂಗಳೂರು ರಾಮಕೃಷ್ಣಾಶ್ರಮದ ಸ್ವಾಮಿ ಏಕಗಮ್ಯಾನಂದಜೀ, ಜಡೆಮಠದ ಡಾ.ಮಹಾಂತ ಮಹಾಸ್ವಾಮಿಗಳು, ಎ.ಬಿ.ಪಾಟೀಲ, ಯುವ ಧುರೀಣ ಪೃಥ್ವಿ ಕತ್ತಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.
ಜ್ಯೂನಿಯರ್ ಕಾಲೇಜುಗಳ ಆರಂಭಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ – ಶಾಸಕ ಬಾಲಚಂದ್ರ ಜಾರಕಿಹೊಳಿ

https://pragati.taskdun.com/%e0%b2%b0%e0%b2%be%e0%b2%9c%e0%b3%8d%e0%b2%af/proposal-to-govt-to-start-junior-colleges-mla-balachandra-jarakiholi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button