Kannada NewsLatest

ಸಚಿವ ಉಮೇಶ ಕತ್ತಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಅರಣ್ಯ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ (61) ನಿಧನರಾಗಿದ್ದಾರೆ.

ಅವರಿಗೆ ಹೃದಯಾಘಾತವಾಗಿತ್ತು. ರಾತ್ರಿ 10.30ರ ಹೊತ್ತಿಗೆ ಉಮೇಶ ಕತ್ತಿ ಮನೆಯಲ್ಲೇ ಕುಸಿದು ಬಿದ್ದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು..

ಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿ ಉಮೇಶ ಕತ್ತಿಗೆ ಹೃದಯಾಘಾತವಾಗಿದೆ. ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸಚಿವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತುರ್ತು ನಿಗಾ ಘಟಕದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆ ನಡೆಯುತ್ತಿತ್ತು..

ಸುದ್ದಿ ತಿಳಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಲವು ಸಚಿವರು ಆಸ್ಪತ್ರೆಯತ್ತ ಧಾವಿಸಿದ್ದಾರೆ. ಕತ್ತಿಯವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.

Home add -Advt

ಹುಕ್ಕೇರಿ ಕ್ಷೇತ್ರದಿಂದ 8 ಬಾರಿ ಆಯ್ಕೆಯಾಗಿ ಹಿರಿಯ ಶಾಸಕರಾಗಿದ್ದರು. 4 ಬಾರಿ ಸಚಿವರಾಗಿದ್ದರು.

1985ರಲ್ಲಿ ತಂದೆಯ ನಿಧನದ ಬಳಿಕ  ಅತ್ಯಂತ ಕಿರಿಯ ವಯಸ್ಸಿನಲ್ಲೇ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು.

 

ಸಚಿವ ಉಮೇಶ ಕತ್ತಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

 

https://pragati.taskdun.com/latest/minister-umesh-katthi-has-a-heart-attack-admitted-to-hospital/

Related Articles

Back to top button