Kannada NewsLatest

ಉಮೇಶ ಕತ್ತಿ ನಿಧನ: CM ಸೇರಿ ಹಲವರ ಸಂತಾಪ; ಬುಧವಾರ ಬೆಳಗಾವಿಗೆ ಮೃತದೇಹ; ತಂದೆಯಂತೆ ಶಾಸಕರಾಗಿದ್ದಾಗಲೇ ಸಾವು

ಶಾಸಕರು, ಗಣ್ಯರ ಸಂತಾಪ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಅರಣ್ಯ ಮತ್ತು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

 

 

ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮತ್ತು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸಹ ಉಮೇಶ ಕತ್ತಿ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮಣ ಸವದಿ, ಅಭಯ ಪಾಟೀಲ ಅವರು ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಸಚಿವರಾದ ಆರ್.ಅಶೋಕ, ಸೋಮಣ್ಣ, ಮುನಿರತ್ನ, ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ ಮೊದಲಾದವರು ಸಹ ಅಂತಿಮ ದರ್ಶನ ಪಡೆದರು.

ಉಮೇಶ ಕತ್ತಿ ಅವರ ಮೃತದೇಹವನ್ನು ಡಾಲರ್ಸ್ ಕಾಲನಿಯ ಮನೆಗೆ ಸ್ಥಳಾಂತರಿಸಲಾಗುತ್ತಿದ್ದು,  ಬುಧವಾರ ಬೆಳಗ್ಗೆ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ತರಲಾಗುತ್ತಿದೆ.

ಉಮೇಶ ಕತ್ತಿಗೆ ಈ ಹಿಂದೆ ಕೂಡ 3 ಬಾರಿ ಲಘು ಹೃದಯಾಘಾತವಾಗಿತ್ತು. ಸ್ಟ್ಂಟ್ ಅಳವಡಿಸಲಾಗಿತ್ತು.

ಉಮೇಶ ಕತ್ತಿ ಅವರ ತಂದೆ ಕೂಡ ಶಾಸಕರಾಗಿದ್ದಾಗಲೇ 1985ರಲ್ಲಿ ಮೃತರಾಗಿದ್ದರು. ಆಗ ನಡೆದ ಉಪಚುನಾವಣೆಯಲ್ಲಿ ಉಮೇಶ ಕತ್ತಿ ಆಯ್ಕೆಯಾಗಿದ್ದರು. 23ನೇ ವಯಸ್ಸಿನಲ್ಲೇ ಅವರು ಶಾಸಕರಾಗಿದ್ದರು.

ಬೊಮ್ಮಾಯಿ, ಸಿದ್ದರಾಮಯ್ಯ ಸೇರಿದಂತೆ ಹಲವಾರು ಸಚಿವರು ಆಸ್ಪತ್ರೆಯತ್ತ ದಾವಿಸಿದ್ದಾರೆ.

ಉಮೇಶ ಕತ್ತಿ ಅವರ ಪತ್ನಿ ಮತ್ತು ಸಹೋದರ ರಮೇಶ ಕತ್ತಿ ಬೆಂಗಳೂರಿಗೆ ಧಾವಿಸುತ್ತಿದ್ದಾರೆ.

ಬುಧವಾರ ಬೆಳಗ್ಗೆ 9 ಗಂಟೆಯಿಂದ ಬೆಳಗಾವಿಯ ಶಿವಬಸವನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ನಂತರ ಬೆಲ್ಲದ ಬಾಗೇವಾಡಿಗೆ ಒಯ್ದು ಅಂತ್ಯಸಂಸ್ಕಾರ ನಡೆಸಲಾಗುತ್ತದೆ.

ಮಾರ್ಚ್ 14, 1961ರಲ್ಲಿ ಉಮೇಶ ಕತ್ತಿ ಬೆಲ್ಲದ ಬಾಗೇವಾಡಿಯಲ್ಲಿ ಜನಿಸಿದ್ದರು. 8 ಬಾರಿ ಶಾಸಕರಾಗಿದ್ದರು. 4 ಬಾರಿ ಸಚಿವರಾಗಿದ್ದರು.

ಉತ್ತರ ಕರ್ನಾಟಕ ಪರ ಪ್ರಬಲ ಧ್ವನಿಯಾಗಿದ್ದರು.

ಸಚಿವ ಉಮೇಶ ಕತ್ತಿ ನಿಧನ

https://pragati.taskdun.com/latest/minister-umesh-katthi-passed-away/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button