ಕೃಷಿ ಸಚಿವರು ಕಾಣೆಯಾಗಿದ್ದಾರೆ.
ಹೆಸರು: @bcpatilkourava
ಗೋದಿಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದುಂಡುಮುಖ, ದಪ್ಪ ಮೀಸೆ.
ವಯಸ್ಸು : 65ಸಿನೆಮಾ ಪ್ರದರ್ಶನದಲ್ಲಿ ಕಾಣಿಸಿಕೊಂಡವರು ನಂತರ ಪತ್ತೆಯಾಗಿಲ್ಲ.
ಹಲವು ತಿಂಗಳಿಂದ ಅತಿವೃಷ್ಟಿಯ ಸಂಕಷ್ಟದಲ್ಲಿರುವ ರಾಜ್ಯದ ರೈತರು ಸಚಿವರನ್ನು ಕಾಣದೆ ಆತಂಕಗೊಂಡಿದ್ದಾರೆ.
ದಯಮಾಡಿ ಹುಡುಕಿಕೊಡಿ! pic.twitter.com/c2Degav9Jw— Karnataka Congress (@INCKarnataka) September 8, 2022
ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು –
ಕೃಷಿ ಸಚಿವರು ಕಾಣೆಯಾಗಿದ್ದಾರೆ, ಹುಡುಕಿ ಕೊಡಿ ಎಂಬ ಕರ್ನಾಟಕ ಕಾಂಗ್ರೆಸ್ನ ಟ್ವೀಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದಲ್ಲಿ ಹಲವು ತಿಂಗಳಿಂದ ಅತಿವೃಷ್ಟಿಯಾಗುತ್ತಿದ್ದು ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಕೃಷಿ ಸಚಿವ ಬಿ. ಸಿ. ಪಾಟೀಲ್ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ ಕೃಷಿ ಸಚಿವರು ಕಾಣೆಯಾಗಿದ್ದಾರೆ ಎಂದು ಟ್ವೀಟ್ ಮಾಡಿದೆ. ಆದರೆ ಕಾಂಗ್ರೆಸ್ನ ಟ್ವೀಟ್ನಲ್ಲಿ ವ್ಯಂಗ್ಯ ಪರಿಣಾಮಕಾರಿಯಾಗಿದ್ದು ಜನರ ಗಮನ ಸೆಳೆಯುತ್ತಿದೆ.
ಏನಿದೆ ಸಂದೇಶ ?
ಕೃಷಿ ಸಚವರು ಕಾಣೆಯಾಗಿದ್ದಾರೆ.
ಹೆಸರು@bcpatilkourava
ಗೋದಿ ಬಣ್ಣ, ಕಟ್ಟುಮಸ್ತಾದ ಮೈಕಟ್ಟು, ದುಂಡು ಮುಖ, ದಪ್ಪ ಮೀಸೆ, ವಯಸ್ಸು 65.
ಸಿನೇಮಾ ಪ್ರದರ್ಶನದಲ್ಲಿ ಕಾಣಿಸಿಕೊಂಡವರು ನಂತರ ಪತ್ತೆಯಾಗಿಲ್ಲ. ಹಲವು ತಿಂಗಳಿಂದ ಅತಿವೃಷ್ಟಿಯ ಸಂಕಷ್ಟದಲ್ಲಿರುವ ರಾಜ್ಯದ ರೈತರು ಸಚಿವರನ್ನು ಕಾಣದೆ ಆತಂಕಗೊಂಡಿದ್ದಾರೆ. ದಯಮಾಡಿ ಹುಡುಕಿಕೊಡಿ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಅಲ್ಲದೇ ಸಚಿವ ಬಿ. ಸಿ. ಪಾಟೀಲ್ ಡಬ್ಬಲ್ ಬ್ಯಾರೆಲ್ ಗನ್ ಹಿಡಿದುಕೊಂಡಿರುವ, ಅವರ ಚಲನಚಿತ್ರವೊಂದರ ಫೋಟೊ ಕೂಡ ಟ್ವೀಟ್ನಲ್ಲಿ ಹಾಕಲಾಗಿದೆ.
ಕಾಂಗ್ರೆಸ್ನ ಈ ಟ್ವೀಟ್ಗೆ ಹಲವಾರು ಜನ ಪ್ರತಿಕ್ರಿಯೆ ನೀಡುತ್ತಿದ್ದಾರೆ.
https://pragati.taskdun.com/latest/kptcl-exam-frad-case-another-accused-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ