ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಸಿಂದಗಿ ಸಾರಂಗಮಠದ ಶ್ರೀ ಪ್ರಭುಸಾರಂಗದೇವ ಶಿವಾಚಾರ್ಯ ಸ್ವಾಮಿಗಳಿಗೆ ರಾಣಿಚನ್ನಮ್ಮ ವಿಶ್ವವಿದ್ಯಾನಿಲಯದಿಂದ ಲಭಿಸಿದ ಗೌರವ ಡಾಕ್ಟರೇಟ್ ಕೇವಲ ಒಬ್ಬರಿಗೆ ಅಲ್ಲ, ಇಡೀ ಶಿವಾಚಾರ್ಯ ಸಮೂಹಕ್ಕೆ ನೀಡಿದಂತಾಗಿದೆ. ಸರಳತೆ ಹಾಗೆಯೇ ಶಿಕ್ಷಣ ಪ್ರೇಮ, ಒಂದು ಸಿಂದಗಿ ಅಂತ ಪಟ್ಟಣದಲ್ಲಿ ಕೆಜಿ ಇಂದ ಪಿಜಿವರೆಗೆ ಮಾಡಿರುವ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ನುಡಿದರು.
ನಗರದ ಲಕ್ಷ್ಮಿ ಟೇಕ್ ಡಿನಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾಮಠದಲ್ಲಿ ಗೌರವ ಡಾಕ್ಟರೇಟ್ ಲಭಿಸಿದ ಮೊದಲ ಸನ್ಮಾನವನ್ನು ಶ್ರೀಮಠದಿಂದ ನೀಡಿ ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪ್ರಭು ಸಾರಂಗ ದೇವ ಶಿವಾಚಾರ್ಯ ಸ್ವಾಮಿಗಳು ನನ್ನ ಮೂವತ್ತು ವರ್ಷದ ಸಾಧನೆಗೆ ವಿಶ್ವವಿದ್ಯಾನಿಲಯ ಗುರುತಿಸಿ ಗೌರವ ಡಾಕ್ಟರೇಟ್ ನೀಡಿರುವುದು, ಅದು ನನಗಲ್ಲ ಇಡೀ ಸಿಂದಗಿಯ ಶ್ರೀಮಠದ ಸದ್ಬಕ್ತರಿಗೆ ನೀಡಿದಂತಾಗಿದೆ. ಗೌರವ ಡಾಕ್ಟರೇಟ್ ಲಭಿಸಿದ ಮೊದಲ ಸನ್ಮಾನವನ್ನು ಹುಕ್ಕೇರಿ ಹಿರೇಮಠದಿಂದ ಪಡೆದಿರುವುದು ನನಗೆ ಸಂತಸ ತಂದಿದೆ. ಹುಕ್ಕೇರಿ ಹಿರೇಮಠ ಸಮನ್ವಯದ ಮಠ. ಈ ಸಮನ್ವಯ ಮಠದಿಂದ ನಾನು ಸನ್ಮಾನ ಸ್ವೀಕರಿಸಿ ಸಂತೋಷಪಟ್ಟಿದ್ದೇನೆ ಎಂದರು.
ಇದೇ ಸಂದರ್ಭದಲ್ಲಿ ಕೊನ್ನೂರು ಶ್ರೀ ಡಾ ವಿಶ್ವ ಪ್ರಭುದೇವ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಸಿಂದಗಿ ಶ್ರೀಗಳಿಗೆ ಲಭಿಸಿರುವ ಡಾಕ್ಟರೇಟ್ ನಿಜಕ್ಕೂ ಕೂಡ ಒಬ್ಬ ಸರಳ ಸ್ವಾಮಿಗೆ ನೀಡಿ, ಇಡೀ ಸ್ವಾಮಿ ಕುಲಕ್ಕೆ ಅಭಿಮಾನವನ್ನು ತರುವಂಥದ್ದಾಗಿದೆ. ಆ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿರುವ ಶ್ರೀಗಳಿಗೆ ಗೌರವ ಡಾಕ್ಟರೇಟ್ ನಿಜಕ್ಕೂ ಕೂಡ ಯೋಗ್ಯ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ