ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಮೂರು ವರ್ಷದ ಆಡಳಿತ, ಸಧನೆಗಳ ಕುರಿತು ಮಾಹಿ, ಮುಂಬರುವ ವಿಧಾನಸಭಾ ಚುನಾವಣೆಗೆ ರೂಪು ರೇಷೆ, ಶಕ್ತಿ ಪ್ರದರ್ಶನ ನಿಟ್ಟಿನಲ್ಲಿ ಇಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನಸ್ಪಂದನಾ ಸಮಾವೇಶ ಹಮ್ಮಿಕೊಂಡಿದೆ.
ರಾಜ್ಯದ ಮೂಲೆ ಮೂಲೆಗಳಿಂದ ಜನರು ಹರಿದು ಬರುವ ನಿರೀಕ್ಷೆಯಿಂದ್ದು 5 ಸಾವಿರ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ 3 ಲಕ್ಷಕ್ಕೂ ಅಧಿಕ ಜನರು ಬರುವ ಸಾಧ್ಯತೆ ಇದ್ದು, 40 ಎಕರೆ ಜಾಗದಲ್ಲಿ ಸಮಾವೇಶಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ಬೆಂಗಳೂರು ಗ್ರಾಮಾಂತರ ಎಸ್ ಪಿ ಬಾಲದಂಡಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ನಾಲ್ಕು ಜಿಲ್ಲೆಗಳ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇಬ್ಬರು ಎ ಎಸ್ ಪಿ, 11 ಡಿವೈಎಸ್ ಪಿ, 35 ಇನ್ಸ್ ಪೆಕ್ಟರ್ ಗಳು, 100 ಪಿಎಸ್ ಐ, 150 ಎ ಎಸ್ ಐ, 1200 ಕಾನ್ಸ್ ಟೇಬಲ್ ಗಳು ಹೆಚ್ಚುವರಿಯಾಗಿ 400 ಗೃಹ ರಕ್ಷಕ ದಳ ಸಿಬ್ಬಂದಿ, 4 ಕೆ ಎಸ್ ಆರ್ ಪಿ ತುಕಡಿ, 6 ಡಿ ಆರ್ ತುಕಡಿಗಳಿಂದ ಭದ್ರತೆ ಕೈಗೊಳ್ಳಲಾಗಿದೆ.
ದೊಡ್ಡಬಳ್ಳಾಪುರದ 6 ತಾಲೂಕುಗಳಿಂದಲೂ ಜನರನ್ನು ಕರೆದೊಯ್ಯಲು ಬಸ್ ವ್ಯವಸ್ಥೆ ,ಮಾಡಲಾಗಿದ್ದು, ಮಾಲೂರು, ಕೆಜಿಎಫ್, ಕೋಲಾರ, ಮುಳಬಾಗಿಲು, ಶೀನಿವಾಸಪುರ, ಬಂಗಾರಪೇಟೆಗಳಿಂದ ಸಮಾವೇಶದ ಸ್ಥಳಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಭಾರಿ ಮಳೆ; ಬೆಳಗಾವಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
https://pragati.taskdun.com/latest/karnatakarain-update10-districtheavy-rain/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ