ಪ್ರಗತಿವಾಹಿನಿ, ನವದೆಹಲಿ: ಬೀದಿ ನಾಯಿಗಳು ಯಾರಮೇಲಾದರೂ ದಾಳಿ ಮಾಡಿ ಘಾಸಿಗೊಳಿಸಿದರೆ ಈ ಅವಘಡದ ಹೊಣೆಯನ್ನು ಆ ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಹೊರಬೇಕಾಗುತ್ತದೆ ಎಂದು ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕೇರಳದಲ್ಲಿ ನಡೆದ ಬೀದಿ ನಾಯಿ ದಾಳಿ ಪ್ರಕರಣವೊಂದರ ವಿಚಾರಣೆ ನಡೆಸಿದ ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಜಸ್ಟಿಸ್ ಜೆ. ಕೆ. ಮಹೇಶ್ವರಿ ಅವರಿದ್ದ ನ್ಯಾಯ ಪೀಠವು ಈ ಆದೇಶವನ್ನು ನೀಡಿದೆ.
ಅಲ್ಲದೇ ಬೀದಿ ನಾಯಿಗಳಿಗೆ ಆಹಾರ ಹಾಕುವವರು ನಾಯಿಗಳಿಗೆ ವ್ಯಾಕ್ಸಿನೇಶನ್ ಕೂಡ ಮಾಡಿಸಬೇಕು ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಬಹಳಷ್ಟು ಜನ ಶ್ವಾನ ಪ್ರಿಯರಿದ್ದಾರೆ. ಅಂತವರು ಸಾಧ್ಯವಾದಲ್ಲಿ ಬೀದಿ ನಾಯಿಗಳಿಗೆ ಗುರುತು ಹಾಕಿ ನಂಬರ್‌ಗಳನ್ನು ನೀಡುವ ಮೂಲಕ ಸಹಕರಿಸಬಹುದು. ಬೀದಿ ನಾಯಿಗಳ ಉಪಟಳಕ್ಕೆ ಪರಿಹಾರ ಹುಡುಕಬೇಕಿರುವುದು ಆದ್ಯತೆಯ ವಿಷಯವಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ತಾಕತ್ತಿದ್ರೆ, ಧಮ್ ಇದ್ರೆ ಬಿಜೆಪಿಯನ್ನು ತಡೆಯಿರಿ; ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಸವಾಲು
https://pragati.taskdun.com/politics/cm-basavaraj-bommaibjp-janotsava-samaveshadoddaballapura/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ