Latest

ಶಾಹೀದ್ ಅಫ್ರಿದಿ ಪುತ್ರಿ ಭಾರತದ ಧ್ವಜ ಎತ್ತಿ ಹಿಡಿದಿದ್ದೇಕೆ ?

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಸೆ. 4 ರಂದು ಭಾರತ- ಪಾಕ್ ನಡುವೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಕುತೂಹಲಕಾರಿ ವಿದ್ಯಮಾನವೊಂದು ನಡೆದಿತ್ತು. ಆದರೆ ಇದು ನಡೆದಿದ್ದು ಮೈದಾನದಲಲ್ಲ, ಪ್ರೇಕ್ಷಕರ ಗ್ಯಾಲರಿಯಲ್ಲಿ ಎನ್ನುವುದು ವಿಶೇಷ.

ಭಾರತ- ಪಾಕಿಸ್ತಾನ ಕ್ರಿಕೇಟ್ ಪಂದ್ಯವೆಂದರೆ ಮೈದಾನದಲ್ಲಿ ಅಕ್ಷರಶಃ ಯುದ್ಧದ ವಾತಾವರಣ ಸೃಷ್ಟಿಯಾಗಿರುತ್ತದೆ. ಇಂಥಹ ಬಿಗುವಿನ ವಾತಾವರಣದಲ್ಲಿ ಪಾಕ್ ನ ಮಾಜಿ ಆಟಗಾರ, ಖ್ಯಾತ ಕ್ರಿಕೆಟಿಗ ಶಾಹೀದ್ ಆಫ್ರಿದಿ ಅವರ ಕಿರಿಯ ಪುತ್ರಿ ಪಾಕ್ ಆಟಗಾರರು ಉತ್ತಮ ಆಟ ಪ್ರದರ್ಶಿಸಿದಾಗೆಲ್ಲ ಭಾರತದ ಧ್ವಜ ಎತ್ತಿ ಹಿಡಿಯುತ್ತಿದ್ದಳು.
ಪಂದ್ಯದ ಟೆಲಿಕಾಸ್ಟ್ ಮಾಡುತ್ತಿದ್ದ ಕ್ಯಾಮರಾಗಳು ಸಹ ಈ ಘಟನೆಯನ್ನು ಚಿತ್ರೀಕರಿಸಿದವು.‌ಅತ್ತ ಪಾಕಿಸ್ತಾನದಲ್ಲೂ ಸಹ ಅಫ್ರಿದಿ ಪುತ್ರಿಯ ಈ ವರ್ತನೆ ಚರ್ಚೆಗೆ ಕಾರಣವಾಗಿತ್ತು. ಬಳಿಕ ಶಾಹಿದ್ ಅಫ್ರಿದಿ ಅಲ್ಲಿನ ಟಿವಿ ಮಾಧ್ಯಮವೊಂದಕ್ಕೆ ಈ ವಿಷಯದ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

ಪಾಕ್ ಧ್ವಜವೇ ಇರಲಿಲ್ಲ:

ಸೆ. 4 ರಂದು ಪಂದ್ಯ ವೀಕ್ಷಿಸಲು ದುಬೈನ ಸ್ಟೇಡಿಯಂಗೆ ಬಂದಿದ್ದ ಪ್ರೇಕ್ಷಕರಲ್ಲಿ ಶೇ. 10 ರಷ್ಟು ಮಾತ್ರ ಪಾಕಿಸ್ತಾನ ಬೆಂಬಲಿಗರಿದ್ದರೆ ಉಳಿದ ಶೇ. 90 ರಷ್ಟು ಪ್ರೇಕ್ಷಕರು ಟೀಂ ಇಂಡಿಯಾದ ಅಭಿಮಾನಿಗಳಾಗಿದ್ದರು. ಹಾಗಾಗಿ ಪಾಕಿಸ್ತಾನ ಧ್ವಜಗಳು ಕಡಿಮೆ ಇತ್ತು. ಶಾಹಿದ್ ಅಫ್ರಿದಿಯ ಮಗಳು ಪಾಕ್ ಧ್ವಜ ಹಾರಾಡಿಸಲು ಧ್ವಜವೇ ಸಿಗದ ಕಾರಣ ಭಾರತದ ಧ್ವಜ ಎತ್ತಿ ಹಿಡಿದಿದ್ದಳು ಎಂದು ಅಫ್ರಿದಿ ತಿಳಿಸಿದ್ದಾರೆ.
ಅಲ್ಲದೇ , ಈ ಘಟನೆಯ ವಿಡಿಯೋ ತುಣುಕನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಕಲೋ ಬೇಡವೊ ಎಂಬ ಗೊಂದಲದಲ್ಲಿದ್ದೆ ಎಂದು ಅವರು ಹೇಳಿದ್ದಾರೆ.

ಡ್ಯಾಂ ಬಳಿ ಹೊಂಡದಲ್ಲಿ ಮುಳುಗಿದ MBBS ವಿದ್ಯಾರ್ಥಿ; ಆತನ ರಕ್ಷಣೆಗೆ ಹೋದ ಸ್ನೇಹಿತನೂ ಸಾವು

https://pragati.taskdun.com/latest/two-youths-deathchikkaballapuradam/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button