ವಾರ್ಷಿಕ 21 ಲಕ್ಷ ರೂಪಾಯಿ ಕ್ಯಾಂಪಸ್ ಪ್ಲೇಸ್‌ಮೆಂಟ್ ಆಫರ್ ಪಡೆದ ಕೆಎಲ್‌ಎಸ್ ಜಿಐಟಿಯ ವಿದ್ಯಾರ್ಥಿ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ: ಕೆಎಲ್ಎಸ್ ಗೋಗಟೆ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ತೃತೀಯವರ್ಷದ ಇನ್ಫೋರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಶ್ರೀಹರಿ ಕುಲಕರ್ಣಿ ಅವರು ಸ್ಯಾಮ್‌ಸಂಗ್ ಸೆಮಿಕಂಡಕ್ಟರ್ಸ್ ಇಂಡಿಯಾ ರಿಸರ್ಚ್ (ಎಸ್‌ಎಸ್‌ಐಆರ್) ನಿಂದ ವಾರ್ಷಿಕ,21 ಲಕ್ಷರೂಪಾಯಿಯ ಕ್ಯಾಂಪಸ್ ಪ್ಲೇಸ್ ಮೆಂಟ್ ಆಫರ್ ನ್ನು ಪಡೆದುಕೊಂಡಿದ್ದಾರೆ.
ಇದು ತೃತೀಯ ವರ್ಷದಲ್ಲಿ, ಕೆಎಲ್ಎಸ್ ಜಿಐಟಿ ವಿದ್ಯಾರ್ಥಿಗಳು ಪಡೆದ ಅತ್ಯಧಿಕ ಕ್ಯಾಂಪಸ್ ಉದ್ಯೋಗ ಕೊಡುಗೆಯಾಗಿದೆ.
2022ರ ಪದವಿ ಬ್ಯಾಚ್‌ನಲ್ಲಿ 1034 ಪ್ಲೇಸ್‌ಮೆಂಟ್ ಆಫರ್‌ಗಳನ್ನು ವಿದ್ಯಾರ್ಥಿಗಳು ಪಡೆದಿದ್ದು ಮುಂಬರುವ 2023ರ ಪದವಿ ಬ್ಯಾಚ್‌ನ 315 ವಿದ್ಯಾರ್ಥಿಗಳು ಈಗಾಗಲೇ ಪ್ಲೇಸ್‌ಮೆಂಟ್ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ.
ಪ್ಲೇಸ್‌ಮೆಂಟ್ ಆಫೀಸರ್ ಪ್ರೊ.ಸತೀಶ ಹುಕ್ಕೇರಿ, ಸಹಾಯಕ ಪ್ಲೇಸ್‌ಮೆಂಟ್ ಆಫೀಸರ್ ಪ್ರೊ.ಸಾಗರ ಸಂತಾಜಿ ಮತ್ತು ಡಾ.ಸಚಿನ್ ಕುಲಕರ್ಣಿ, ಪ್ರಾಂಶುಪಾಲರು ಕೆಎಲ್‌ಎಸ್ ಜಿಐಟಿ ಡಾ.ಜಯಂತ್ ಕಿತ್ತೂರು ಮತ್ತು ಕೆಎಲ್ಎಸ್ ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೃಹತ್ ಮರ ಬಿದ್ದು ಯುವಕನ ಸಾವು: ತಕ್ಷಣವೇ ಐದು ಲಕ್ಷ ಪರಿಹಾರ ಬಿಡುಗಡೆ
https://pragati.taskdun.com/latest/belagaviheavy-raintree-fallyoung-man-death5-lakhs-release/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ