ಪ್ರಗತಿವಾಹಿನಿ ಸುದ್ದಿ, ಖಾನಾಪುರ
ಗ್ರಾಮ ಪಂಚಾಯತಿ ಮಾಜಿ ಸದಸ್ಯನ ಶವ ಪತ್ತೆಯಾಗಿದ್ದು, ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ.
ಸಂತಿಬಸ್ತಿವಾಡ ಗ್ರಾಪಂ ಮಾಜಿ ಸದಸ್ಯ ನಾಗಪ್ಪ ಭೀಮಾ ಜಿಡ್ಡಿಮನಿ(45) ಇವರ ಶವ ಇಂದು ಮುಂಜಾನೆ ಖಾನಾಪುರ ತಾಲೂಕಿನ ಬೈಲೂರು ಗ್ರಾಮದ ಬಳಿ ದೊರೆತಿದೆ. ಚೂರಿಯಿಂದ ಇರಿದ ಸ್ಥಿತಿಯಲ್ಲಿ ದೊರೆತಿದ್ದು ಘಟನಾ ಸ್ಥಳಕ್ಕೆ ಖಾನಾಪುರ ಪೊಲೀಸರು ಭೇಟಿ ನೀಡಿ ಕೊಲೆ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
 
					 
				 
					 
					 
					 
					
 
					 
					 
					


