Latest

8 ನಂಬಿಯನ್ ಚೀತಾಗಳನ್ನು ಉದ್ಯಾನವನಕ್ಕೆ ಬಿಟ್ಟ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ; ಭೋಪಾಲ್: ಇಂದು ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ 8 ವಿಶೇಷ ಚೀತಾಗಳನ್ನು ಉದ್ಯಾನವನಕ್ಕೆ ಬಿಡುವ ಮೂಲಕ ವನ್ಯಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ವಿಶೇಷ ಸಂದೇಶ ರವಾನಿಸಿದ್ದಾರೆ.

ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ ಗೆ ತೆರಳಿದ ಪ್ರಧಾನಿ ಮೋದಿ, ಇಂದು 8 ಚೀತಾಗಳನ್ನು ಉದ್ಯಾನವನಕ್ಕೆ ಬಿಟ್ಟರು. ಭಾರತದಲ್ಲಿ ಕಳೆದ 70 ವರ್ಷಗಳಿಂದ ಚೀತಾಗಳು ಇರಲಿಲ್ಲ ಈ ನಿಟ್ಟಿನಲ್ಲಿ ನಮಿಬಿಯಾದಿಂದ 8 ಚೀತಾಗಳನ್ನು ತರಲಾಗಿದ್ದು, 5 ಹೆಣ್ಣು ಹಾಗೂ 3 ಗಂಡು ಚೀತಾಗಳು ಇಂದು ಉದ್ಯಾನವನ ಸೇರಿವೆ.

ಉದ್ಯಾನವನಕ್ಕೆ ಚಿತಾಗಳನ್ನು ಬಿಟ್ಟ ಬಳಿಕ ಪ್ರಧಾನಿ ಮೋದಿ ಚೀತಾಗಳ ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದರು. ಮಧ್ಯಪ್ರದೇಶ ಸಿಎಂ ಶಿವರಾಜ್ ಚೌವ್ಹಾಣ್ ಸಾಥ್ ನೀಡಿದರು.

ಇನ್ನು ಕುನೋ ಉದ್ಯಾನವನದಲ್ಲಿ ಚೀತಾಗಳಿಗೆ ವಿಶೇಷ ಜಾಗದ ವ್ಯವಸ್ಥೆ ಮಾಡಲಾಗಿದ್ದು 500 ಹೆಕ್ಟೇರ್ ಪ್ರದೇಶದಲ್ಲಿ ಪಂಜರದಂತೆ ನಿರ್ಮಿಸಲಾಗಿದೆ ಮೂರು ತಿಂಗಳ ಕಾಲ ಚೀತಾಗಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.
ಬೈಕ್ ಗೆ ಗುದ್ದಿ ಹೋಟೆಲ್ ಗೆ ನುಗ್ಗಿದ ಕ್ಯಾಂಟರ್; ಇಬ್ಬರು ಸ್ಥಳದಲ್ಲೇ ದುರ್ಮರಣ

https://pragati.taskdun.com/latest/chikkaballapura-accidenttwo-death3-injuerd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button