ಪ್ರಗತಿವಾಹಿನಿ ಸುದ್ದಿ, ಕರಾಚಿ: ಫುಟ್ ಬಾಲ್ ಆಟಗಾರ್ತಿಯರು ಲೆಗ್ಗಿನ್ಸ್ ಧರಿಸುವುದನ್ನು ಬಿಟ್ಟು ಶಾರ್ಟ್ಸ್ ಏಕೆ ಧರಿಸುತ್ತಾರೆ ಎಂದು ಪ್ರಶ್ನಿಸುವ ಮೂಲಕ ಪಾಕಿಸ್ತಾನದ ಪತ್ರಕರ್ತರೊಬ್ಬರು ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೀಡಾಗಿದ್ದಾರೆ.
ಕಠ್ಮಂಡುವಿನಲ್ಲಿ ನಡೆದ ಫುಟ್ ಬಾಲ್ ಪಂದ್ಯದಲ್ಲಿ ಪಾಕಿಸ್ತಾನದ ವಿಜಯದ ನಂತರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತನ್ನ ದೇಶದ ಫುಟ್ ಬಾಲ್ ಆಟಗಾರ್ತಿಯರು ಶಾರ್ಟ್ಸ್ ಧರಿಸುವುದಕ್ಕೆ ಆಕ್ಷೇಪಿಸಿದ ಪತ್ರಕರ್ತ, ನಮ್ಮದು ಇಸ್ಲಾಮಿಕ್ ರಿಪಬ್ಲಿಕ್. ನಾವು ಮುಸ್ಲಿಂ ರಾಷ್ಟ್ರಕ್ಕೆ ಸೇರಿದವರು. ಈ ಹುಡುಗಿಯರು ಲೆಗ್ಗಿನ್ಸ್ ಬಿಟ್ಟು ಶಾರ್ಟ್ಸ್ ಏಕೆ ಧರಿಸುತ್ತಾರೆ? ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಂಡದ ಮುಖ್ಯ ತರಬೇತುದಾರ ಅದೀಲ್ ರಿಜ್ಕಿ, “ಅವರು ಒಬ್ಬ ಪ್ರಗತಿಪರರಾಗಬೇಕು” ಎಂದು ಸಲಹೆ ನೀಡಿದರು.
ಜಾಗತಿಕ ಮಟ್ಟದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗುತ್ತಿದ್ದಂತೆ ಅನೇಕ ಜನ ಇದಕ್ಕೆ ಖಾರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು “ಪತ್ರಕರ್ತ ಇನ್ನೂ ಹಿಂದುಳಿದ ಮಾನಸಿಕತೆ ಹೊಂದಿದ್ದಾರೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಖಾನಾಪುರ: ಹೂವು, ಹಣ್ಣಿನ ಗಿಡ ನೆಟ್ಟು ಮೋದಿ ಜನ್ಮ ದಿನಾಚರಣೆ; ಡಾ. ಸೋನಾಲಿ ಸರ್ನೋಬತ್ ನೇತೃತ್ವದಲ್ಲಿ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ