ಪ್ರಗತಿವಾಹಿನಿ ಸುದ್ದಿ, ಮುಂಬೈ: ಮುಂಬೈ ಪೊಲೀಸರು ದೇಶದಲ್ಲಿ ಮೊದಲ ಬಾರಿಗೆ ಬ್ಲ್ಯಾಕ್ ಕೊಕೇನ್ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ. ಮುಂಬೈನಲ್ಲಿ ವಾಸವಿದ್ದ ವಿದೇಶಿ ವ್ಯಕ್ತಿಯೊಬ್ಬನಿಂದ ಬ್ಲ್ಯಾಕ್ ಕೊಕೇನ್ ವಶಕ್ಕೆ ಪಡೆಯಲಾಗಿದೆ.
ಕಪ್ಪು ಕೊಕೇನನ್ನು ಮಾಮೂಲಿ ಕೊಕೇನ್ ಜತೆಗೆ ಕೆಲವು ರಾಸಾಯನಿಕಗಳನ್ನು ಸೇರಿಸಿ ತಯಾರಿಸಲಾಗುತ್ತದೆ. ಇದನ್ನು ವಿಮಾನ ನಿಲ್ದಾಣಗಳಲ್ಲಿ ರಾಸಾಯನಿಕ ಪತ್ತೆ ಯಂತ್ರದಿಂದಲೂ ಪತ್ತೆ ಮಾಡಲು ಸಾಧ್ಯವಿಲ್ಲ, ಅಲ್ಲದೇ ಸ್ನಿಪರ್ ಡಾಗ್ ಗಳು ಸಹ ಇದನ್ನು ವಾಸನೆಯ ಮೂಲಕ ಪತ್ತೆ ಮಾಡಲು ಅಸಾಧ್ಯ. ಹಾಗಾಗಿ ಈ ಮಾದಕ ವಸ್ತುವನ್ನು ಇದುವರೆಗೆ ಕಂಡು ಹಿಡಿಯಲು ಸಾಧ್ಯವಾಗಿರಲಿಲ್ಲ.
ಬ್ಲ್ಯಾಕ್ ಕೊಕೇನ್ ಹೊಂದಿದ್ದ ವಿದೇಶಿಗರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12 ಜಿಲ್ಲೆಗಳಲ್ಲಿ ಭಾರಿ ಮಳೆ; ಬೆಳಗಾವಿ ಸೇರಿ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ
https://pragati.taskdun.com/latest/karnatakaheavy-rainyelloalert/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ